






ಪುತ್ತೂರು:ಗ್ರಾಮೀಣ ನಾಗರಿಕರು ತಮ್ಮ ಆಸ್ತಿ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸುಲಭವಾಗಿ ಪಡೆಯಲು ಸರ್ಕಾರವು ಡಿಸೆಂಬರ್ 01ರಿಂದ ಇ-ಸ್ವತ್ತು 2.೦ ತಂತ್ರಾಂಶವನ್ನು ಜಾರಿಗೆ ತಂದಿದೆ.ಆದರೆ ಯೋಜನೆ ಜಾರಿಯಾದ ಒಂದೇ ತಿಂಗಳೊಳಗೆ ತಾಂತ್ರಿಕ ದೋಷಗಳು ಕಂಡುಬಂದಿದ್ದು, ಸಾರ್ವಜನಿಕರು ತಮ್ಮ ಇ-ಖಾತೆ ಹಾಗೂ ಆಸ್ತಿ ದಾಖಲೆಗಳನ್ನು ಪಡೆಯಲಾಗದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ.


ವಿಧಾನ ಪರಿಷತ್ ಅಧಿವೇಶನದಲ್ಲಿ ಮಾತನಾಡಿದ ಕಿಶೋರ್ ಬೊಟ್ಯಾಡಿಯವರು, ರಾಜ್ಯದ ಗ್ರಾಮೀಣ ಭಾಗದ ಜನರು ಎದುರಿಸುತ್ತಿರುವ ಗಂಭೀರ ಸಮಸ್ಯೆಯನ್ನು ಸದನದ ಗಮನಕ್ಕೆ ತಂದರು.ಈವರೆಗೆ 36,೦೦೦ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿದ್ದು, ಅರ್ಜಿದಾರರಿಗೆ ತಮ್ಮ ಅರ್ಜಿಯ ಸ್ಥಿತಿಗತಿ ತಿಳಿಯುವ ವ್ಯವಸ್ಥೆಯೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ.4,6೦8 ಅರ್ಜಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿ ಲಾಗಿನ್ನಲ್ಲಿ, 8,695 ಅರ್ಜಿಗಳು ಗ್ರಾಮ ಪಂಚಾಯತ್ ಅಭಿವೃದ್ಧಿ ಅಽಕಾರಿಗಳ ಲಾಗಿನ್ನಲ್ಲಿ, 6,882 ಅರ್ಜಿಗಳು ಗ್ರಾಮ ಪಂಚಾಯತ್ ಅಧ್ಯಕ್ಷರ ಲಾಗಿನ್ನಲ್ಲಿ, 4,322 ಅರ್ಜಿಗಳು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಽಕಾರಿಗಳ ಲಾಗಿನ್ನಲ್ಲಿ ಅನುಮೋದನೆ ಇಲ್ಲದೆ ಬಾಕಿ ಉಳಿದಿವೆ.ಇದುವರೆಗೆ ಕೇವಲ 6,8೦೦ ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗಿದೆ.ಈ ತಾಂತ್ರಿಕ ವೈಫಲ್ಯದಿಂದಾಗಿ ಸಾರ್ವಜನಿಕರು ಮಾತ್ರವಲ್ಲದೆ ಸರ್ಕಾರಕ್ಕೂ ಕೋಟ್ಯಾಂತರ ರೂಪಾಯಿ ಆದಾಯಕ್ಕೂ ನಷ್ಟ ಉಂಟಾಗಿದೆ.ಇ-ಖಾತೆ ಲಭ್ಯವಿಲ್ಲದ ಕಾರಣ ಸಬ್ರಿಜಿಸ್ಟರ್ ಕಚೇರಿಗಳಲ್ಲಿ ಆಸ್ತಿ ನೋಂದಣಿ, ಮಾರಾಟ ಪತ್ರ, ಅಡಮಾನ ಸೇರಿದಂತೆ ಅನೇಕ ಪ್ರಕ್ರಿಯೆಗಳು ಸ್ಥಗಿತಗೊಂಡಿವೆ.ಇದು ಆಡಳಿತಾತ್ಮಕ ವೈಫಲ್ಯದ ಪ್ರತೀಕವಾಗಿದೆ ಎಂದು ಹೇಳಿದ ಅವರು,ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಇ-ಸ್ವತ್ತು 2.೦ ತಂತ್ರಾಂಶದಲ್ಲಿನ ಎಲ್ಲಾ ತಾಂತ್ರಿಕ ದೋಷಗಳನ್ನು ತಕ್ಷಣ ಸರಿಪಡಿಸಿ, ಗ್ರಾಮೀಣ ಜನರಿಗೆ ಆಗುತ್ತಿರುವ ಅನಗತ್ಯ ತೊಂದರೆಯನ್ನು ನಿವಾರಿಸಬೇಕು ಎಂದು ಒತ್ತಾಯಿಸಿದರು.



ಇ-ಸ್ವತ್ತು ತಂತ್ರಾಂಶದಲ್ಲಿ ಸಮಸ್ಯೆ: 25 ದಿನಗಳಲ್ಲಿ ಸುಸ್ಥಿತಿಗೆ-ಸಚಿವ
ಗ್ರಾಮ ಪಂಚಾಯತ್ಗಳಲ್ಲಿ ಇ-ಸ್ವತ್ತು ಖಾತಾ ವಿತರಣೆಗೆ ತಂತ್ರಾಂಶದಲ್ಲಿ ಸಮಸ್ಯೆ ಇದ್ದು, 15-25 ದಿನಗಳಲ್ಲಿ ಸರಿಪಡಿಸಿ ಖಾತಾ ವಿತರಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಸಚಿವ ಪ್ರಿಯಾಂಕ್ ಖರ್ಗೆ ಭರವಸೆ ನೀಡಿದರು.
ತಂತ್ರಾಂಶವನ್ನು ಇನ್ನಷ್ಟು ಸರಳೀಕರಣ ಮತ್ತು ಸಬಲೀಕರಣ ಮಾಡಲಾಗುವುದು.ಈವರೆಗೆ ಇ-ಸ್ವತ್ತು 2.೦ ತಂತ್ರಾಂಶದ ಮೂಲಕ 44,508 ಅರ್ಜಿಗಳು ಸಲ್ಲಿಕೆಯಾಗಿವೆ.ಅನುಮೋದನೆಗೊಂಡಿರುವ ಅರ್ಜಿಗಳ ಸಂಖ್ಯೆ ೭,೯೭೮.ತಂತ್ರಾಂಶ ಸರಿಪಡಿಸುವಂತೆ ಎನ್ಐಸಿಗೆ ಪತ್ರ ಬರೆಯಲಾಗಿದೆ.ಅವರಿಗೆ ಹಣವನ್ನೂ ಬಿಡುಗಡೆ ಮಾಡಲಾಗಿದೆ.ಇದನ್ನು ಸರಿಪಡಿಸಲು ಹೆಚ್ಚು ಮಾನವ ಸಂಪನ್ಮೂಲ ನೀಡುವುದಾಗಿ ಎನ್ಐಸಿ ತಿಳಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.ಬಿಜೆಪಿ ಸದಸ್ಯ ಕಿರಣ್ ಕುಮಾರ್ ಕೊಡ್ಗಿ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.










