ಬೆಟ್ಟಂಪಾಡಿ ಗುತ್ತು ಧರ್ಮಚಾವಡಿ ಪುನಃ ಪ್ರತಿಷ್ಟಾ ಬಹ್ಮಕಲಶೋತ್ಸವ, ನೇಮೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ, ಸುಮಾರು 500 ವರ್ಷಗಳ ಇತಿಹಾಸವಿರುವ ಬೆಟ್ಟಂಪಾಡಿ ಗುತ್ತು ಧರ್ಮಚಾವಡಿಯ ಶ್ರೀ ಜಠಾಧಾರಿ, ಧರ್ಮದೈವ ಶ್ರೀ ವ್ಯಾಘ್ರಚಾಮುಂಡಿ, ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ದೈವಗಳ ನೇಮೋತ್ಸವವು ಫೆ.25 ರಿಂದ 28 ರವರೆಗೆ ಜರಗಲಿದ್ದು, ಆ ಪ್ರಯುಕ್ತ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಜ. ೨೮ ರಂದು ಚಾವಡಿಯ ವಠಾರದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಬೆಟ್ಟಂಪಾಡಿ ಗುತ್ತು ಮನೆಯ ಮುಖ್ಯಸ್ಥೆ ಶ್ರೀಮತಿ ಚಂದ್ರಾವತಿ ಮಂಜುನಾಥ ರೈ, ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ನ್ಯಾಯವಾದಿ ರಾಧಾಕೃಷ್ಣ ರೈ ಆನಾಜೆ, ಕಾರ್ಯಾಧ್ಯಕ್ಷ ಡಾ. ಮೋಹನ್‌ದಾಸ ರೈ ಎ., ಪ್ರಧಾನ ಕಾರ್ಯದರ್ಶಿ ವಿನೋದ್‌ ಕುಮಾರ್‌ ರೈ ಗುತ್ತು, ಕೋಶಾಧಿಕಾರಿ ರಂಗನಾಥ ರೈ ಗುತ್ತು, ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಶಶಿಕುಮಾರ್‌ ರೈ ಬಾಲ್ಯೊಟ್ಟು, ಪ್ರಧಾನ ಕಾರ್ಯದರ್ಶಿ ಕರುಣ ರೈ ಬಿಜಳ, ಕೋಶಾಧಿಕಾರಿ ಕಿಶೋರ್‌ ಶೆಟ್ಟಿ ಕೋರ್ಮಂಡ, ಸಂಚಾಲಕ ದಯಾನಂದ ರೈ ಕೋರ್ಮಂಡ, ಉಪಾಧ್ಯಕ್ಷರಾದ ಅಮೃತಪ್ರಸಾದ್‌ ರೈ ಗುತ್ತು, ಶೇಷಪ್ಪ ರೈ ಮೂರ್ಕಾಜೆ, ಜತೆ ಕಾರ್ಯದರ್ಶಿಗಳಾದಪ ಪ್ರಮೋದ್ ಕುಮಾರ್‌ ರೈ ಗುತ್ತು, ಸಂತೋಷ್‌ ಕುಮಾರ್‌ ರೈ ಮೂರ್ಕಾಜೆ‌, ಗೌರವ ಸಲಹೆಗಾರರಾದ ಜಗನ್ನಾಥ ರೈ ಗುತ್ತು, ಕರುಣಾಕರ ಶೆಟ್ಟಿ ಕೊಮ್ಮಂಡ, ಸ್ವಾಗತ ಸಮಿತಿಯ ಮಂಜುಳಾ ಜೆ. ರೈ, ಮಹಿಳಾ ಸಮಿತಿ ಸಂಚಾಲಕಿ ಲತಾ ವಿನೋದ್‌ ರೈ ಗುತ್ತು, ಸಹಸಂಚಾಲಕಿ ಅನನ್ಯ ಕಿಶೋರ್‌ ಶೆಟ್ಟಿ, ಹೊರೆಕಾಣಿಕೆ ಸಮಿತಿಯ ಸಂಚಾಲಕ ಸಂತೋಷ್‌ ಕುಮಾರ್‌ ರೈ ಗುತ್ತು, ಆಮಂತ್ರಣ ಪತ್ರ ವಿತರಣೆ ಸಮಿತಿ ಸಂಚಾಲಕ ಜಯರಾಮ ರೈ ಮೂರ್ಕಾಜೆ, ಕಾರ್ಯಾಲಯ ಸಮಿತಿ ಸಂಚಾಲಕ ಸತೀಶ್‌ ರೈ ಮೂರ್ಕಾಜೆ, ಕೃತಿಕಾ ಚಂದನ್‌ ರೈ ಗುತ್ತು, ಅಲಂಕಾರ ಸಮಿತಿ ಸಂಚಾಲಕ ಮಹೇಶ್‌ ಕೋರ್ಮಂಡ, ಹರಿಣಿ ಅಮೃತಪ್ರಸಾದ್‌ ರೈ, ಭಜನಾ ಸಮಿತಿಯ ಶಕುಂತಳಾ ನೇಮಿರಾಜ್‌, ದಾಮೋದರ ಮಾಲಡ್ಕ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here