







ಪುತ್ತೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ವಿಭಾಗ, ಪುತ್ತೂರು ಘಟಕದ ವತಿಯಿಂದ sಸಂಸ್ಥೆಯ ಚಾಲಕರುಗಳಿಗೆ ಸುರಕ್ಷಿತ ಚಾಲನೆ ಹಾಗೂ ಸಂವಹನ ಕೌಶಲ್ಯದ ವಿಶೇಷ ತರಬೇತಿ ಕಾರ್ಯಕ್ರಮ ಕೆಎಸ್ಆರ್ಟಿಸಿ ಮುಕ್ರಂಪಾಡಿ ಘಟಕದಲ್ಲಿ ನಡೆಯಿತು.



ಸರಕಾರದ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರೂ ಹಾಗೂ ತರಬೇತಿದಾರರಾದ ಉಮಾನಾಥ್ ಶೆಟ್ಟಿ ಹಾಗೂ ಕೆಎಸ್ಆರ್ಟಿಸಿ ನಿವೃತ್ತ ಸಂಚಾರ ನಿಯಂತ್ರಣ ಅಧಿಕಾರಿ ಅಬ್ಬಾಸ್ರವರು ತರಬೇತಿ ನೀಡಿದರು. ಪುತ್ತೂರು ಘಟಕದ ಲೆಕ್ಕಪತ್ರ ಮೇಲ್ವಿಚಾರಕರಾದ ಪೂರ್ಣೇಶ್, ಸಹಾಯಕ ಸಂಚಾರ ನಿರೀಕ್ಷಕರಾದ ಅಚ್ಚುತ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಘಟಕ ವ್ಯವಸ್ಥಾಪಕರಾದ ಸುಬ್ರಹ್ಮಣ್ಯ ಪ್ರಕಾಶ್ ಪ್ರಾಸ್ತಾವಿಕ ವಾಗಿ ಮಾತನಾಡಿ ತರಬೇತಿಯ ಅಗತ್ಯತೆ ತಿಳಿಸಿದರು. ಚಾಲಕರ ಭೋಧಕರಾದ ವೆಂಕಟ್ರಮಣ ಭಟ್ ಸ್ವಾಗತಿಸಿದರು.













