






ಏಳ್ಮುಡಿ ಪಾಯಿಸ್ ಬ್ರದರ್ಸ್ ವತಿಯಿಂದ ನಿಧಿ ಸಂಗ್ರಹ


ಪುತ್ತೂರು:ಕ್ಯಾನ್ಸರ್ ನಿಂದ ಬಳಲುತ್ತಿರುವ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ ಹಿರಿಯ ಶಿಕ್ಷಕಿ ಗ್ರೇಸಿ ಡಿ’ಸೋಜ ಟೀಚರ್ ರವರ ಚಿಕಿತ್ಸೆಗೆ ಸಹಾಯಾರ್ಥವಾಗಿ ಶಿವದೂತೆ ಗುಳಿಗೆ ಉಚಿತ ನಾಟಕ ಪ್ರದರ್ಶನವು ಜ.30 ರಂದು ಎಪಿಎಂಸಿ ರಸ್ತೆ ಪುತ್ತೂರು ಗಾರ್ಡನ್ ಇಲ್ಲಿ ಸಂಜೆ ನಡೆಯಿತು.



ಏಳ್ಮುಡಿ ಪಾಯಿಸ್ ಬ್ರದರ್ಸ್ ವತಿಯಿಂದ ಗ್ರೇಸಿ ಟೀಚರ್ ರವರಿಗೆ ಆಸರೆಯಾಗುವ ನಿಟ್ಟಿನಲ್ಲಿ ನಿಧಿ ಸಂಗ್ರಹ ಮಾಡೋದಿಕ್ಕೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆರವರು ಮಾತನಾಡಿ, ಇದು ದೇವರು ಮೆಚ್ಚುವ ಕಾರ್ಯಕ್ರಮ. ತಮಗೆ ವಿದ್ಯೆ ಬೋಧಿಸಿದ ಶಿಕ್ಷಕಿಗೆ ನೆರವಾಗಲು ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ನಡೆ. ಆ ಹಿರಿಯ ಶಿಕ್ಷಕಿಯು ಶೀಘ್ರ ಆರೋಗ್ಯದಿಂದ ಚೇತರಿಸಲಿ ಎಂಬುದೇ ನಮ್ಮ ಪ್ರಾರ್ಥನೆಯಾಗಿದೆ ಎಂದರು.
ಶಿವದೂತೆ ಗುಳಿಗೆ ನಾಟಕ ಪ್ರದರ್ಶನದ ಮುನ್ನ ರೋನಿ ಕ್ರಾಸ್ತಾ ಕುಲಶೇಖರ ಹಾಗೂ ಅವರ ಮಗಳು ರಿಶಲ್ ಕ್ರಾಸ್ತಾರವರಿಂದ ರಸಮಂಜರಿ ಕಾರ್ಯಕ್ರಮ ನೆರವೇರಲ್ಪಟ್ಟಿತು.
ಕಲಾಸಂಗಮದ ವಿಜಯಕುಮಾರ್ ಕೊಡಿಯಾಲ್ ಬೈಲ್, ಕ್ಯಾನ್ಸರ್ ಪೀಡಿತ ಗ್ರೇಸಿ ಟೀಚರ್ ರವರ ಪುತ್ರಿ ಮರ್ಸಿ ದಿವ್ಯ ಪಿಂಟೊ, ಕಾರ್ಯಕ್ರಮದ ಆಯೋಜಕರಾದ ಏಳ್ಮುಡಿ ಪಾಯಿಸ್ ಬ್ರದರ್ಸ್ ರಿತೇಶ್ ಪಾಯಿಸ್, ವಿನೋದ್ ಪಾಯಿಸ್ ಉಪಸ್ಥಿತರಿದ್ದರು. ಬಾಲಕೃಷ್ಣ ರೈ ಪೊರ್ದಾಲ್ ಕಾರ್ಯಕ್ರಮ ನಿರೂಪಿಸಿದರು.

ಶ್ರೀಮತಿ ಗ್ರೇಸಿ ಟೀಚರ್ ರವರ ಚಿಕಿತ್ಸೆಗೆ ಸಹಾಯಹಸ್ತ ಚಾಚಲಿಚ್ಛಿಸುವ ಸಹೃದಯಿ ದಾನಿಗಳು ಗ್ರೇಸಿ ಟೀಚರ್ ರವರ ಪುತ್ರಿ Mercy Divya Pinto, A/c No:4762500103123901, Account Type:SBA, IFSC Code:KARB0000476, Branch:PVC Road, Kodialbail, Mangalore ಇದಕ್ಕೆ ಜಮಾ ಮಾಡಬಹುದು.










