






ಪುತ್ತೂರು; ತತ್ವ ಸ್ಕೂಲ್ ಆಫ್ ಆರ್ಟ್ ವತಿಯಿಂದ ಇತ್ತೀಚಿಗೆ ತಾಲೂಕು ಮಟ್ಟದ ಚಿತ್ರಕಲಾ ಪ್ರದರ್ಶನ “ಆಕಾರ್-2026” ಬರಕೆರೆ ವೆಂಕಟರಮಣ ಸಮುದಾಯ ಭವನದಲ್ಲಿ ನಡೆದಿದ್ದು, ಮೂರು ದಿನಗಳ ಕಾಲ 70ಕ್ಕೂ ಹೆಚ್ಚು ವಿದ್ಯಾರ್ಥಿಗಳ 175 ಕಲಾ ಕೃತಿಗಳು ಬಹಳ ಅದ್ಭುತವಾಗಿ ಮೂಡಿಬಂದಿತ್ತು.


ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾವಿರಕ್ಕೂ ಮಿಕ್ಕಿ ಕಲಾ ಪ್ರೇಮಿಗಳು ಈ ‘ಆಕಾರ್ 2026’ನ್ನು ವೀಕ್ಷಿಸಿ ಕಣ್ತುಂಬಿಸಿಕೊಂಡರು. ಈ ಪ್ರದರ್ಶನದಲ್ಲಿ ಕಳೆದ ಹತ್ತು ವರ್ಷಗಳಲ್ಲಿ ಅತ್ಯಂತ ಪ್ರಾಮಾಣಿಕವಾಗಿ ಶ್ರದ್ಧೆಯಿಂದ ಕಲೆಯ ಮೇಲಿನ ಆಸಕ್ತಿಯೊಂದಿಗೆ ಪಠ್ಯದ ಜೊತೆಗೆ ಚಿತ್ರಕಲೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಶಾಲಾ ಶಿಕ್ಷಣ ಇಲಾಖೆಯು ನಡೆಸಿರುವ ಹಾಗೂ ಇನ್ನಿತರ ಇಲಾಖೆಗಳು ನಡೆಸಿರುವ ಚಿತ್ರಕಲಾ ಸ್ಪರ್ಧೆಗಳಲ್ಲಿ, ತಾಲೂಕು, ಜಿಲ್ಲೆ ಹಾಗೂ,ರಾಜ್ಯಮಟ್ಟದಲ್ಲಿ ಅನೇಕ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡ ಕಲಾ ಪ್ರತಿಭೆ ನಿಲಿಷ್ಕ ಕೆ.ಯನ್ನು ಗುರುತಿಸಿ ತತ್ವ ಸ್ಕೂಲ್ ಆಫ್ ಆರ್ಟ್ ಸಂಸ್ಥೆಯ ನಿರ್ದೇಶಕರಾದ ಟೀಲಾಕ್ಷ ಹಾಗೂ ಪ್ರಾಂಶುಪಾಲರಾದ ರಶ್ಮಿ ಶೆಟ್ಟಿ ಇವರು ‘ಕಲಾಕಾರ್ ಪ್ರಶಸ್ತಿ ‘ ನೀಡಿ ಗೌರವಿಸಿ ಸನ್ಮಾನಿಸಿದರು. ಇವರು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿ ಹಾಗೂ ಸಂಜಯನಗರ ಶಾಲಾ ಶಿಕ್ಷಕಿ ಸ್ಮಿತಾಶ್ರೀ ಬಿ ಹಾಗೂ ಇಂಜಿನಿಯರ್ ದಿನೇಶ್ ನಾಯಕ್ ಇವರ ಪುತ್ರಿ.
















