ಭಾರತೀಯ ಜೀವ ವಿಮಾ ನಿಗಮ ಪುತ್ತೂರು ಶಾಖಾ ಸಾಧಕರ ಸಮಾವೇಶ, ಗೌರವಾರ್ಪಣೆ

0

ಪುತ್ತೂರು: ಭಾರತೀಯ ಜೀವ ವಿಮಾ ನಿಗಮ,ಪುತ್ತೂರು ಶಾಖೆಯಲ್ಲಿ 40 ವರ್ಷಕ್ಕೆ ಮೇಲ್ಪಟ್ಟು ಸೇವೆ ಸಲ್ಲಿಸಿದ ಹಾಗೂ ಸಾಧಕ ಪ್ರತಿನಿಧಿಗಳನ್ನು ಗೌರವಿಸುವ ಸಾಧಕರ ಸಮಾವೇಶ ಫೆ.1ರಂದು ತೆಂಕಿಲ ಸ್ವಾಮಿ ಕಲಾಮಂದಿರದಲ್ಲಿ ಜರಗಿತು. ಪುತ್ತೂರು ಶಾಖೆಯ ಮುಖ್ಯ ಪ್ರಬಂಧಕರಾದ ಉಜ್ವಲ್.ಹೆಚ್ ಸಭಾಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿದ್ದ ಉಡುಪಿ ವಿಭಾಗೀಯ ಕಛೇರಿಯ ಹಿರಿಯ ವಿಭಾಗಾಧಿಕಾರಿ ಗಣಪತಿ.ಎನ್.ಭಟ್‌ರವರು ಮಾತನಾಡಿ, ಸಂಸ್ಥೆ ಬೆಳೆದು ಬಂದ ಹಾದಿ ಹಾಗೂ ಅದಕ್ಕಾಗಿ ಶ್ರಮಿಸಿದ ಪ್ರತಿನಿಧಿಗಳನ್ನು ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿ ಅವರ ಸೇವೆಯನ್ನು ಸ್ಮರಿಸಿದರು. ಮಾರುಕಟ್ಟೆ ಪ್ರಬಂಧಕರಾದ ಬಿಜು ಜೋಸೆಫ್, ಸಿಎಲ್‌ಐಎ ಮ್ಯಾನೇಜರ್ ವಿ.ಎಸ್.ಕುಮಾರ್, ಪ್ರಾಡಕ್ಟ್ ಮ್ಯಾನೇಜರ್ ಸೋಮಸುಂದರ.ಕೆ ಅತಿಥಿಗಳಾಗಿ ಭಾಗವಹಿಸಿದ್ದರು.


ಮೊದಲಿಗೆ 40 ವರ್ಷಕ್ಕೆ ಮೇಲ್ಪಟ್ಟು ಪ್ರತಿನಿಧಿಗಳಾಗಿ ಸೇವೆ ಸಲ್ಲಿಸಿರುವ ಪ್ರತಿನಿಧಿಗಳನ್ನು ಗೌರವಿಸಲಾಯಿತು.
ಈ ಅವಧಿಯಲ್ಲಿ ಸ್ಪರ್ಧೆಯಲ್ಲಿ ವಿವಿಧ ಹಂತಗಳಲ್ಲಿ ಅರ್ಹತೆ ಪಡೆದ ಪ್ರತಿನಿಧಿಗಳನ್ನು ಕುಟುಂಬ ಸಮೇತವಾಗಿ ಸನ್ಮಾನಿಸಲಾಯಿತು. ಅಭಿವೃದ್ದಿ ಅಧಿಕಾರಿಗಳನ್ನು, ಮುಖ್ಯ ವಿಮಾ ಸಲಹೆಗಾರರನ್ನು, ಸಂಸ್ಥೆಗೆ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿಬ್ಬಂದಿಗಳನ್ನು ವಿಶೇಷವಾಗಿ ಗೌರವಿಸಲಾಯಿತು. ಶಾಖೆಯ ಎಲ್ಲ ಸಿಬ್ಬಂದಿಗಳನ್ನು ವಿಭಾಗದ ಪರವಾಗಿ ಅಭಿನಂದಿಸಲಾಯಿತು.


ಈ ಸಂದರ್ಭದಲ್ಲಿ CLIA ಸಂಪರ್ಕ ಶಾಖೆಯ ಶಾಖಾಧಿಕಾರಿ ಸುಬ್ರಮಣ್ಯ ಭಟ್.ಪಿ.ಜಿ, ಸುಳ್ಯ ಸಂಪರ್ಕ ಶಾಖೆಯ ಶಾಖಾಧಿಕಾರಿ ವೀರೇಶ್ ಹೂಗಾರ್, ಪುತ್ತೂರು ಶಾಖೆಯ ಉಪ ಶಾಖಾಧಿಕಾರಿ ಕೃಪಾಲ್.ಬಿ.ಹೆಚ್ ಉಪಸ್ಥಿತರಿದ್ದರು.
ಸುಬ್ರಮಣ್ಯ ಭಟ್.ಪಿ.ಜಿ ವಂದಿಸಿದರು.

LEAVE A REPLY

Please enter your comment!
Please enter your name here