ಉಪ್ಪಿನಂಗಡಿ ಮಂಡಲದ ಹಿಂದೂ ಸಂಗಮ

0

ಪಂಚ ಪರಿವರ್ತನೆಗಾಗಿ ಹಿಂದೂ ಸಂಗಮ: ಡಾ. ಪ್ರಜ್ವಲ್ ಕೆ.


ಉಪ್ಪಿನಂಗಡಿ: ಎಲ್ಲಿ ಶ್ರೇಷ್ಟತೆ ಇದೆಯೋ ಅಲ್ಲಿ ಹಿಂದುತ್ವದ ಸ್ವಿಕಾರ್ಹತೆ ಇದೆ. ಹಿಂದೂ ಸಂಗಮ ಎಂದರೆ ಪರಿವರ್ತನೆಗಾಗಿ ನಡೆಸಲಾಗುತ್ತಿದೆ. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಭೋಧನ್, ಸ್ವದೇಶಿ, ಪರ್ಯಾವರಣ್ ಹಾಗೂ ನಾಗರಿಕ ಶಿಷ್ಠಾಚಾರ ವೆಂಬ ಪಂಚ ಪರಿವತನೆಯೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವದಲ್ಲಿ ಪ್ರತಿಯೊಬ್ಬ ದೇಶವಾಸಿ ಕೈಗೊಳ್ಳಬೇಕಾದ ವ್ರತಾಚರಣೆ ಎಂದು ಪ್ರಾಂಶುಪಾಲ ಡಾ. ಪ್ರಜ್ವಲ್ ಕೆ. ಪ್ರತಿಪಾದಿಸಿದರು.


ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ತಾಲೂಕಿನ ಉಪ್ಪಿನಂಗಡಿ ಮಂಡಲದ ಆಶ್ರಯದಲ್ಲಿ ಫೆ.1ರಂದು ಸಂಜೆ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಸಾಮಾಜಿಕ ಸಾಮರಸ್ಯದ ವಿಚಾರದಲ್ಲಿ ನಮ್ಮ ಮನೆ ಮನಸ್ಸುಗಳು ಪರಿವರ್ತನೆಗೊಳ್ಳಬೇಕು. ಮಂತ್ರ ತಂತ್ರಗಳ ಜೊತೆ ಈ ಮಣ್ಣಿನಲ್ಲಿ ಅನುಷ್ಠಾನದಲ್ಲಿರುವ ಎಲ್ಲಾ ಪೂಜಾ ಪ್ರಕಾರಗಳೂ ಶ್ರೇಷ್ಠ ಎಂಬ ಗೌರವದ ಭಾವನೆ ಮೂಡಬೇಕು. ದೇಶದ ಗಟ್ಟಿತನದಲ್ಲಿ ಪ್ರಧಾನ ಭೂಮಿಕೆಯಾಗಿರುವ ಕುಟುಂಬಗಳು ದುರ್ಬಲವಾಗದಂತೆ ಎಚ್ಚರಿಕೆ ವಹಿಸಬೇಕು. ರಾಷ್ಟ್ರದ ಆರ್ಥಿಕ ಶಕ್ತಿ, ಸಾಂಸ್ಕೃತಿಕ ಶಕ್ತಿ ಉದ್ದೀಪನಕ್ಕೆ ಸ್ವದೇಶಿ ಚಿಂತನೆ ಪ್ರತಿಯೊಬ್ಬರಲ್ಲೂ ಮೊಳಕೆಯೊಡೆಯಬೇಕು. ಮುಂದಿನ ತಲೆಮಾರಿಗೆ ಪ್ರಕೃತಿಯನ್ನು ಉಳಿಸಿ ಬೆಳೆಸುವ ಹೊಣೆಗಾರಿಕೆ ನಮ್ಮದಾಗಬೇಕು. ದೇಶದ ಪ್ರಜೆಯಾಗಿ ನಮ್ಮ ಕರ್ತವ್ಯಗಳನ್ನು ಶಿಷ್ಠಾಚಾರಗಳನ್ನು ಪಾಲಿಸಲು ಮುಂದಾಗಬೇಕು. ಈ ನಿಟ್ಟಿನಲ್ಲಿ ನಮ್ಮ ನಮ್ಮ ಕರ್ತವ್ಯಗಳನ್ನು ನೆನಪಿಸುವ ಸಲುವಾಗಿ ಹಿಂದೂ ಸಂಗಮ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.


ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿರಿಯ ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಸವಿತಾ ಪಿ.ಜಿ. ಭಟ್ ಮಾತನಾಡಿ, ಶಿವಾಜಿಯಂತಹ ಪುತ್ರ ರತ್ನರನ್ನು ಈ ದೇಶಕ್ಕೆ ನೀಡಿದ ಜೀಜಾಬಾಯಿಯಂತಹ ಮಾತೆಯರು ಪ್ರತಿ ಮನೆಯಲ್ಲಿ ರೂಪುಗೊಳ್ಳಬೇಕಾಗಿದೆ ಎಂದರು.


ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಸೇನಾಧಿಕಾರಿ ಚಂದಪ್ಪ ಮೂಲ್ಯ ಮಾತನಾಡಿ, ಸ್ವಾಮೀ ವಿವೇಕಾನಂದರು ಆಪೇಕ್ಷಿಸಿದಂತೆ ಭಾರತ ಮಾತೆಯನ್ನು ಪೂಜಿಸುವ ಕಾರ್ಯ ನಮ್ಮಿಂದಾಗಲಿ. ಹಿಂದೂ ಧರ್ಮಗ್ರಂಥ ಭಗವದ್ಗೀತೆಯನ್ನು ಪ್ರತಿಯೊಬ್ಬರೂ ಓದಬೇಕೆಂದರು.


. ವೇದಿಕೆಯಲ್ಲಿ ಸಹ ಸಂಯೋಜಕ್ ಗಂಗಾಧರ ಪಿ.ಎನ್., ಡಾ ಸುರೇಶ್ ಕುಮಾರ್ ಕೂಡೂರು ಹಾಗೂ ಮಂಡಲ ವ್ಯಾಪ್ತಿಯ ದೇವಾಲಯ ಮತ್ತು ಭಜನಾ ಮಂದಿರಗಳ ಪ್ರಮುಖರು ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಭಾರತೀಯ ಗೋ ತಳಿಗಳಿಗೆ ಪೂಜೆ ಸಲ್ಲಿಸಲಾಯಿತು ಹಾಗೂ ಶ್ರೀ ರಾಮ ತಾರಕ ಮಂತ್ರದ ಸಾಮೂಹಿಕ ಪಠಣ ನಡೆಯಿತು. ಗಾಂಧಾರಿ ಕಲಾ ಸಾಧಕಿ ಶಮಿಕಾ ಎಂ.ಕೆ. ಯವರನ್ನು ಸನ್ಮಾನಿಸಲಾಯಿತು. ಹಿರಿಯ ಸಾಮಾಜಿಕ ಮುಂದಾಳು ವಾಸುದೇವ ಪ್ರಭು ಯಾನೆ ಕೃಷ್ಣ ರವರು ಪುಷ್ಪವೃಷ್ಠಿಯ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಾಯಾತ್ರೆಯಲ್ಲಿ ವಿವಿಧ ಭಜನಾ ತಂಡಗಳಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು.


ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಸಂಜೀವ ಮಟಂದೂರು, ಪ್ರಮುಖರಾದ ಸುನಿಲ್ ಕುಮಾರ್ ದಡ್ಡು, ವಿದ್ಯಾಧರ ಜೈನ್ , ಸುರೇಶ್ ಅತ್ರಮಜಲು, ಸುದರ್ಶನ ಎಂ. , ಧನಂಜಯ್ ನಟ್ಟಿಬೈಲು, ಸುಜೀರ್ ಗಣಪತಿ ನಾಯಕ್ , ಯು. ಸುಧಾಕರ ಶೆಟ್ಟಿ , ಕಂಗ್ವೆ ವಿಶ್ವನಾಥ ಶೆಟ್ಟಿ, ಶರತ್ ಕೋಟೆ, ಈಶ್ವರ ನಾಯ್ಕ್, ಕೈಲಾರ್ ರಾಜಗೋಪಾಲ ಭಟ್, ಬಿ.ಕೆ. ಆನಂದ, ಗೀತಾಲಕ್ಷ್ಮಿ ತಾಳ್ತಜೆ, ಉಷಾ ಮುಳಿಯ, ಎನ್. ಉಮೇಶ್ ಶೆಣೈ, ಡಾ. ಕೆ.ಜಿ. ಭಟ್, ಹೇರಂಭ ಶಾಸ್ತ್ರಿ, ಕರುಣಾಕರ ಸುವರ್ಣ, ಸುಂದರ ಗೌಡ, ಎನ್. ಹರೀಶ್ ನಾಯಕ್, ರಾಮಚಂದ್ರ ಮಣಿಯಾಣಿ, ಲೋಕೇಶ್ ಬೆತ್ತೋಡಿ, ಚಂದ್ರಶೇಖರ್ ತಾಳ್ತಜೆ, ಶ್ಯಾಮಲಾ ಶೆಣೈ, ಮಹೇಶ್ ಬಜತ್ತೂರು, ಕಿಶೋರ್ ನೀರಕಟ್ಟೆ, ಚಂದ್ರಶೇಖರ್ ಮರ್ದಾಳ ಮೊದಲಾದವರು ಭಾಗವಹಿಸಿದ್ದರು.
ಮಂಡಲ ನಿರ್ವಹಣಾ ತಂಡದ ಸಂಯೋಜಕ ಜಯಂತ ಪೊರೋಳಿ ಸ್ವಾಗತಿಸಿದರು. ಜಯಶ್ರೀ ಜನಾರ್ಧನ್ ವಂದಿಸಿದರು. ಗಣೇಶ್ ಹಾಗೂ ಆನಂದ ರವರು ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here