ವಿಜೇತ್ ಕುಮಾರ್‌ಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ

0

ಉಪ್ಪಿನಂಗಡಿ: ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಬೆಂಗಳೂರು ಇವರು ರಾಜ್ಯ ಮಟ್ಟದ ಯುವ ಸಾಧಕರಿಗೆ ಕೊಡ ಮಾಡುವ ವಾರ್ಷಿಕ ಪ್ರಶಸ್ತಿಗೆ ದೈಹಿಕ ಶಿಕ್ಷಣ ಉಪನ್ಯಾಸಕ ಉಪ್ಪಿನಂಗಡಿಯ ವಿಜೇತ್ ಕುಮಾರ್ ಭಾಜನರಾಗಿದ್ದು, ಬೆಳಗಾವಿ ಜಿಲ್ಲೆಯ ಮೂಡಲಗಿಯಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು.


ಬೆಳಗಾವಿ ಹಣಮಾಪುರ ಕವಲಗುಡ್ಡ ಸಿದ್ದಶ್ರೀ ಸಿದ್ದಾಶ್ರಮದ ಮುಖ್ಯಸ್ಥ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಪ್ರಶಸ್ತಿ ಪ್ರದಾನ ಮಾಡಿದರು. ಸಮಾರಂಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಹುಲಜಂತಿ ಪಟ್ಟದ ಮಾಳಿಂಗರಾಯ ಮಹಾರಾಜರು, ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ರಾಜ್ಯಾಧ್ಯಕ್ಷ ಎಸ್. ಬಾಲಾಜಿ, ಬೆಳಗಾವಿ ಜಿಲ್ಲಾ ಅಧ್ಯಕ್ಷ ಸಿದ್ದಣ್ಣ ದುರದುಂಡಿ, ಬೆಳಗಾವಿ ಜಿಲ್ಲಾ ಯುವ ಸಮನ್ವಯ ನಿವೃತ್ತ ಅಧಿಕಾರಿ ಎಸ್.ಯು. ಜಮಾದಾರ್ ಮತ್ತಿತರರು ಉಪಸ್ಥಿತರಿದ್ದರು.


34 ನೆಕ್ಕಿಲಾಡಿ ಗ್ರಾಮದ ನಿವಾಸಿಯಾಗಿರುವ ವಿಜೇತ್ ಕುಮಾರ್ ಡಾಡ್ಜ್‌ಬಾಲ್ ತಂಡದ ಅಂತರರಾಷ್ಟ್ರೀಯ ತರಬೇತುದಾರರಾಗಿದ್ದು, ಪ್ರಸ್ತುತ ದಿ ಇಂಡಿಯನ್ ಡಾಡ್ಜ್‌ಬಾಲ್ ಫೆಡರೇಶನ್ ರೆಫ್ರಿಬೋರ್ಡು ಚೇರ್ಮನ್ ಆಗಿರುತ್ತಾರೆ. ಸಿಂಗಾಪುರ, ಮಲೇಶಿಯಾಗಳಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಡಾಡ್ಜ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ತಂಡದ ತರಬೇತುದಾರರಾಗಿ ಎರಡು ಬಾರಿ ಭಾಗವಹಿಸಿರುತ್ತಾರೆ. ಪ್ರಸಕ್ತ ಪುತ್ತೂರು ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here