ನರಿಮೊಗರು ಮರಾಟಿ ಸಮಾಜ ಸೇವಾ ಸಂಘ, ಯುವ ವೇದಿಕೆಯಿಂದ ಪುರುಷರಿಗೆ ಕ್ರಿಕೆಟ್, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟ

0

ಪುತ್ತೂರು:ನರಿಮೊಗರು ಮರಾಟಿ ಸಮಾಜ ಸೇವಾ ಸಂಘ ಹಾಗೂ ಮರಾಟಿ ಯುವ ವೇದಿಕೆಯ ಸಹಭಾಗಿತ್ವದಲ್ಲಿ ದ.ಕ ಹಾಗೂ ಕಾಸರಗೋಡು ಜಿಲ್ಲೆಯ ಮರಾಟಿ ಸಮಾಜ ಬಾಂಧವರ ಏಳು ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ಪುರುಷರಿಗೆ, ಮಹಿಳೆಯರಿಗೆ ತ್ರೋಬಾಲ್ ಪಂದ್ಯಾಟವು ಫೆ.1 ರಂದು ನರಿಮೊಗರು ಶಾಲಾ ಕ್ರೀಡಾಂಗಣದಲ್ಲಿ ಯಶಸ್ವಿಯಾಗಿ ಜರಗಿತು.
ಸುಳ್ಯ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ನಾಯ್ಕರವರು ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಸಮಾಜ ಬಾಂಧವರ ಒಗ್ಗಟ್ಟಿಗಾಗಿ ಕ್ರೀಡಾಕೂಟವನ್ನು ವರ್ಷಂಪ್ರತಿ ಏರ್ಪಡಿಸಿದಾಗ ಸಮಾಜ ಬಾಂಧವರಲ್ಲಿ ಒಗ್ಗಟ್ಟು ಹಾಗೂ ಪರಸ್ಪರ ಪರಿಚಯ ಇಮ್ಮಡಿಗೊಳ್ಳುತ್ತದೆ ಎಂದರು.


ಸಭಾಧ್ಯಕ್ಷತೆ ವಹಿಸಿದ ನರಿಮೊಗರು ಮರಾಟ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕರವರು ಮಾತನಾಡಿ, ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡಾಕೂಟಗಳು ಬಹಳ ಸಹಕಾರಿಯಾಗಿವೆ. ಆದ್ದರಿಂದ ಸಮಾಜ ಬಾಂಧವರು ಹೆಚ್ಚೆಚ್ಚು ಕ್ರೀಡಾಕೂಟಗಳಲ್ಲಿ ಹಾಗೂ ವ್ಯಾಯಾಮಗಳಲ್ಲಿ ತೊಡಗಿಸಿಕೊಳ್ಳಿ ಎಂದರು.


ಮುಖ್ಯ ಅತಿಥಿ, ಬೆಟ್ಟಂಪಾಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗ್ರಂಥಪಾಲಕ ರಾಮ ನಾಯ್ಕ ಮಾತನಾಡಿ, ಪುತ್ತೂರಿನ ಮರಾಟಿ ಸಮಾಜ ಸೇವಾ ಸಂಘಗಳು ಸಮಾಜದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ನಡೆಸುವ ಮೂಲಕ ಮನೆಮಾತಾಗಿದೆ. ಇದೀಗ ನರಿಮೊಗರು ಮರಾಟಿ ಸಮಾಜ ಸೇವಾ ಸಂಘ, ಯುವ ವೇದಿಕೆಯಿಂದ ಯುವಸಮೂಹವನ್ನು ಮುಖ್ಯವಾಹಿನಿಗೆ ತರುವಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು.


ಮಂಗಳೂರು ಕ್ಯಾಂಪ್ಕೋ ನಿರ್ದೇಶಕ ಗಣೇಶ್ ನಾಯ್ಕ ಮಾತನಾಡಿ, ದ.ಕ ಹಾಗೂ ಕಾಸರಗೋಡು ಜಿಲ್ಲೆಯ ಮರಾಟಿ ಸಮಾಜ ಬಾಂಧವರನ್ನು ಕ್ರೀಡಾಕೂಟದ ಮೂಲಕ ಒಂದೆಡೆ ಸೇರಿಸಿ ಅವರಲ್ಲಿನ ಕ್ರೀಡಾ ಪ್ರತಿಭೆಯನ್ನು ಹೊರಗೆ ತರುವಲ್ಲಿ ನರಿಮೊಗರು ಮರಾಟಿ ಸಮಾಜ ಸೇವಾ ಸಂಘ, ಯುವ ವೇದಿಕೆಯ ಕಾರ್ಯ ಶ್ಲಾಘನೀಯ ಎಂದರು.


ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ನರಿಮೊಗರು ಮರಾಟಿ ಯುವ ವೇದಿಕೆ ಅಧ್ಯಕ್ಷ ದಿನೇಶ್ ಬಿ.ಕೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುತ್ತೂರು ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯ ತಾರಾನಾಥ ನುಳಿಯಾಲು, ಕೊಂಬೆಟ್ಟು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಕರುಣಾಕರ ಪಾಂಗ್ಲಾಯಿ, ಬಂಟ್ವಾಳ ತಾಲೂಕಿನ ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ನಾರಾಯಣ ನಾಯ್ಕ ಪೆರ್ನೆರವರು ಭಾಗವಹಿಸಿ ಶುಭ ಹಾರೈಸಿರುತ್ತಾರೆ. ವೇದಿಕೆಯಲ್ಲಿ ನರಿಮೊಗರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ ಮಹಾಲಿಂಗ ನಾಯ್ಕ, ಕಾರ್ಯದರ್ಶಿ ಕೃಷ್ಣ ನಾಯ್ಕ ನೆಕ್ಕಿಲು, ಕೋಶಾಧಿಕಾರಿ ಈಶ್ವರ್ ನಾಯ್ಕ ಅಜಲಾಡಿ, ನರಿಮೊಗರು ಮರಾಟಿ ಯುವ ವೇದಿಕೆ ಕಾರ್ಯದರ್ಶಿ ವಿನಯ್ ಪುತ್ತಿಲ, ಕ್ರೀಡಾ ಕಾರ್ಯದರ್ಶಿ ನವೀನ್ ಕೆ., ಕೋಶಾಧಿಕಾರಿ ಜಗದೀಶ್ ಕಲ್ಲಮರವರು ಉಪಸ್ಥಿತರಿದ್ದರು.ಶಶಿಕಲಾ ಬಿ.ಕೆ ಪ್ರಾರ್ಥಿಸಿದರು. ಸುಂದರ ನಾಯ್ಕ ಬಿ.ಕೆ ಸ್ವಾಗತಿಸಿದರು.


ಕ್ರಿಕೆಟ್:ಶಿವಶಕ್ತಿ ಫ್ರೆಂಡ್ಸ್ ಕೊಡ್ಯಡ್ಕ(ಪ್ರ)
ತ್ರೋಬಾಲ್:ಸ್ಪಿನ್ನರ‍್ಸ್ ಸ್ಕ್ವಾಡ್ ಪುತ್ತೂರು(ಪ್ರ)
ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಶಿವಶಕ್ತಿ ಫ್ರೆಂಡ್ಸ್ ಕೊಡ್ಯಡ್ಕ ತಂಡವು ಪ್ರಥಮ ಸ್ಥಾನಿಯಾಗಿ, ಈಗಲ್ ವಾರಿಯರ್ ಮುಂಡೂರು ದ್ವಿತೀಯ ಸ್ಥಾನಿಯಾಗಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟದಲ್ಲಿ ಸ್ಪಿನ್ನರ‍್ಸ್ ಸ್ಕ್ವಾಡ್ ಪುತ್ತೂರು ಪ್ರಥಮ ಸ್ಥಾನಿಯಾಗಿ, ಯುವ ವೇದಿಕೆ ನರಿಮೊಗರು ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿತು. ಪುರುಷರ ಕ್ರಿಕೆಟ್ ಪಂದ್ಯಾಟದಲ್ಲಿ ಒಟ್ಟು 28 ತಂಡಗಳು ಭಾಗವಹಿಸಿದ್ದವು.

LEAVE A REPLY

Please enter your comment!
Please enter your name here