ಸತ್ತಿಕಲ್-ಒಡ್ಯದಗಯ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು: ಫಲಾನುಭವಿಗಳಿಂದ ಶಾಸಕರಿಗೆ ಸನ್ಮಾನ

0

ಅಶೋಕ್ ರೈಯವರು ಈ ಹಿಂದೆಯೇ ಪುತ್ತೂರಿನ ಶಾಸಕರಾಗಬೇಕಿತ್ತು: ಗಂಗಾಧರ ರೈ


ಪುತ್ತೂರು: ಪೆರ್ನೆ ಗ್ರಾಮದ ಸತ್ತಿಕಲ್-ಒಡ್ಯದ ಗಯ ರಸ್ತೆಗೆ ಸೇತುವೆ ನಿರ್ಮಾಣವಾಗಬೇಕೆಂದು ನಾವು 40 ವರ್ಷದಿಂದ ಹೋರಾಟ ಮಾಡುತ್ತಾ ಬಂದಿದ್ದೇವೆ , ಚುನಾವಣೆಯ ಸಮಯದಲ್ಲಿ ನಮಗೆ ಭರವಸೆ ಮಾತ್ರ ಸಿಗುತ್ತಿತ್ತು. ಆದರೆ ನಾವು ಮನವಿ ಕೊಟ್ಟ ನಾಲ್ಕೇ ತಿಂಗಳಲ್ಲಿ 2.4೦ ಕೋಟಿ ರೂ. ಅನುದಾನ ಮಂಜೂರು ಮಾಡಿಸುವ ಮೂಲಕ ನಮ್ಮ ಬೇಡಿಕೆ ಈಡೇರಿದೆ, ಅಶೋಕ್ ರೈ ಅವರು ಈ ಹಿಂದೆಯೇ ಪುತ್ತೂರು ಶಾಸಕರಾಗಬೇಕಿತ್ತು. ಪುತ್ತೂರು ಸಂಪೂರ್ಣ ಬದಲಾಗುತ್ತಿತ್ತು ಎಂದು ಸತ್ತಿಕಲ್ ನಿವಾಸಿ , ಪ್ರಗತಿಪರ ಕೃಷಿಕ ಗಂಗಾಧರ ಶೆಟ್ಟಿ ಹೇಳಿದರು.


ಅವರು ಸತ್ತಿಕಲ್ ಒಡ್ಯದ ಗಯಕ್ಕೆ ಸೇತುವೆ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿಸಿದ ಶಾಸಕರನ್ನು ಅಭಿನಂದಿಸಿ, ಸನ್ಮಾನಿಸಿ ಮಾತನಾಡಿದರು.


ನಮ್ಮಲ್ಲಿಗೆ ಸೇತುವೆಯಾಗಬೇಕೆಂದು ಪುತ್ತೂರಿನ ಮಾಜಿ ಶಾಸಕರಾದ ಡಿ ವಿ ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ ಶೆಟ್ಟಿ, ಸಂಜೀವ ಮಠಂದೂರು ಹಾಗೂ ಈ ಹಿಂದಿನ ಸಂಸದರಲ್ಲಿ ಮನವಿ ಮಾಡಿದ್ದೆವು. ಸೇತುವೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆಯನ್ನು ನೀಡಿದ್ದರು, ನಾವು ಅದನ್ನು ನಂಬಿಕೊಂಡೇ 40 ವರ್ಷ ಕಳೆದೆವು. ಈ ಬಾರಿ ಶಾಸಕ ಅಶೋಕ್ ರೈ ಅವರ ಕಚೇರಿಗೆ ಗ್ರಾಮಸ್ಥರು ತೆರಳಿ ಮನವಿ ಮಾಡಿದ್ದೆವು, ಶಾಸಕರು ಭರವಸೆ ಕೊಟ್ಟಿರಲಿಲ್ಲ, ಅನುದಾನ ಬಿಡುಗಡೆಯಾದ ಬಳಿಕ ಮಾಹಿತಿ ಬಂದಿದೆ. ನಾವು ನಂಬಲಸಾಧ್ಯವಾದ ಸಂಗತಿಯಂತೆ ಅಶೋಕ್ ರೈ ಕೆಲಸ ಮಾಡಿದ್ದಾರೆ. ಇಚ್ಚಾಶಕ್ತಿ ಇದ್ದರೆ ಜನಪ್ರತಿನಿಧಿಗಳು ಹೇಗೆ ಕೆಲಸ ಮಾಡಬಹುದು ಎಂಬುದಕ್ಕೆ ಶಾಸಕರೇ ಉದಾಹರಣೆಯಾಗಿದ್ದಾರೆ. ಇಂತಹ ಶಾಸಕರನ್ನು ಪುತ್ತೂರು ಕಂಡಿಲ್ಲ, ಮುಂದೆ ಕಾಣುವುದೂ ಇಲ್ಲ. ಶಾಸಕರಿಗೆ ಪ್ರತಿಯೊಬ್ಬರೂ ಬೆಂಬಲ ಕೊಡುವ ಮೂಲಕ ಅವರಿಗೆ ಶಕ್ತಿ ತುಂಬುವ ಕೆಲಸವನ್ನು ಮಾಡಬೇಕು. ಅಶೋಕ್ ರೈ ಅವರನ್ನು ನಾವು ಎಲ್ಲಿಯಾದರೂ ಕಳೆದುಕೊಂಡಲ್ಲಿ ಅದು ಪುತ್ತೂರಿಗೆ ಮಾತ್ರವಲ್ಲ ದ.ಕ. ಹಾಗೂ ಉಡುಪಿ ಜಿಲ್ಲೆಯ ಜನತೆಗೆ ತುಂಬಲಾರದ ನಷ್ಟವಾಗಲಿದೆ ಎಂದ ಅವರು ಅಭಿವೃದ್ದಿಯಲ್ಲಿ ರಾಜಕೀಯ ಮಾಡದ ಜಿಲ್ಲೆಯ ಏಕೈಕ ಶಾಸಕರು ಎಂದು ಹೇಳಿದರು.


ನಾವು ನಿಮ್ಮ ಜೊತೆ ಇದ್ದೇವೆ: ವೆಂಕಟ್ರಮಣ ಭಟ್:
ಸ್ಥಳೀಯರಾದ ವೆಂಕಟ್ರಮಣ ಭಟ್ ಮಾತನಾಡಿ, ನಾವು ಇನ್ನು ಶಾಸಕ ಅಶೋಕ್ ರೈ ಜೊತೆ ಕೈ ಜೋಡಿಸಲಿದ್ದೇವೆ. ಇಂತಹ ಶಾಸಕರನ್ನು ಪಡೆದ ಪುತ್ತೂರು ಕ್ಷೇತ್ರದ ಜನ ಪುಣ್ಯವಂತರು. ಸತ್ತಿಕಲ್‌ಗೆ ಸೇತುವೆ ನಿರ್ಮಾಣಕ್ಕೆ ಇಷ್ಟು ಬೇಗ ಅನುದಾನ ಬರುತ್ತದೆ ಎಂದು ನಾವು ಕನಸಲ್ಲೂ ಗ್ರಹಿಸಿರಲಿಲ್ಲ. ಈ ಹಿಂದಿನ ಶಾಸಕರುಗಳಿಗೆ ಕೊಟ್ಟ ಹಾಗೆ ಇವರಿಗೆ ಮನವಿ ಕೊಟ್ಟಿದ್ದೆವು ಆದರೆ ಇವರ ಬಳಿಕ ಕೊಟ್ಟ ಮನವಿಗೆ ಬೆಲೆ ಬಂತು ನಮ್ಮ 40 ವರ್ಷಗಳ ಬೇಡಿಕೆ ಈಡೇರಿಸಿದ್ದಾರೆ. ನಾವು ಇನ್ನು ಮುಂದಕ್ಕೆ ಅಶೋಕ್ ರೈ ಅವರಿಗೆ ಬೆಂಬಲವಾಗಿ ನಿಲ್ಲಲಿದ್ದೇವೆ ಮತ್ತು ಅವರ ಪರವಾಗಿ ಕೆಲಸವನ್ನು ಮಾಡುತ್ತೇವೆ. ನಮಗೆ ಅಭಿವೃದ್ದಿ ಮಾಡುವ ಶಾಸಕರು ಬೇಕು ಎಂದು ಹೇಳಿದರು. ಗ್ರಾಮಸ್ಥರು ಶಾಸಕರನ್ನು ಶಾಲು ಹೊದಿಸಿ, ಫಲಪುಷ್ಪವನ್ನು ನೀಡಿ ಸನ್ಮಾನಿಸಿದರು.


ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಮುಖಂಡ ರೋಶನ್ ರೈ ಬನ್ನೂರು, ಸ್ಥಳೀಯರಾದ ನಾರಾಯಣ ಭಟ್, ಕೃಷ್ಣಪ್ರಸಾದ್, ರಾಜೇಶ್ ಗೌಡ, ತನಿಯಪ್ಪ ಗೌಡ, ಸೇಸಪ್ಪ ಗೌಡ, ಶ್ವೇತಾ, ಸುಂದರ ಗೌಡ, ರಾಮಚಂದ್ರ ಭಟ್, ವಿರೂಪಾಕ್ಷ ಭಟ್, ನಾರಾಯಣ ಭಟ್ ವಿ, ರಾಮನಾಯ್ಕ, ಜಾನಕಿ, ಎಂ , ಪ್ರವೀಣ್ ನಾಯ್ಕ, ಹರೀಶ್ ಮೂಲ್ಯ, ಹರಿಗಣೇಶ್ ,ಕೃಷ್ಣಪ್ಪ ಮೂಲ್ಯ, ಭರತ್ ಮೂಲ್ಯ, ಸರಸ್ವತಿ, ಭಾರತಿ ವೆಂಕಟ್ರಮಣ ಭಟ್ ಸೇರಿದಂತೆ ಸತ್ತಿಕ್ಕಲ್ ಒಡ್ಯದಗಯ ಸೇತುವೆಯ ಫಲಾನುಭವಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ಸತ್ತಿಕಲ್ ಒಡ್ಯದ ಗಯ ಗ್ರಾಮಸ್ಥರು ನಾಲ್ಕು ತಿಂಗಳ ಹಿಂದೆ ನನ್ನ ಕಚೇರಿಗೆ ಬಂದು ಸೇತುವೆಯ ಸಮಸ್ಯೆಯ ಬಗ್ಗೆ ಹೇಳಿದ್ದರು. ಜನರ ಸಂಕಷ್ಟವನ್ನು ಅರಿತು ಈ ವಿಚಾರವನ್ನು ಸಚಿವರ ಗಮನಕ್ಕೆ ತಂದು ಸತ್ತಿಕಲ್ ಸೇರಿದಂತೆ ಒಟ್ಟು ನಾಲ್ಕು ಕಡೆಗೆ ಸೇತುವೆ ಮಂಜೂರಾಗಿದೆ. ಇನ್ನೂ ಅನೇಕ ಬೇಡಿಕೆ ಇದೆ ಅದಕ್ಕೂ ಸ್ಪಂದನೆ ನೀಡಲಿದ್ದೇನೆ.ಸತ್ತಿಕಲ್ ಭಾಗದ ಜನತೆಯ 40 ವರ್ಷಗಳ ಹೋರಾಟಕ್ಕೆ ನ್ಯಾಯ ಸಿಕ್ಕಿದೆ ಎಂದು ಭಾವಿಸಿದ್ದೇನೆ. ಮುಂದಿನ ದಿನಗಳಲ್ಲಿ ಆಶೀರ್ವಾದ ಮಾಡಿದರೆ ಅದುವೇ ನನಗೆ ನೀಡುವ ದೊಡ್ಡ ಸನ್ಮಾನವಾಗಿದೆ. ಈ ಭಾಗದ ಜನತೆ ನನ್ನ ಜೊತೆ ಇರುತ್ತಾರೆ ಎಂಬ ನಂಬಿಕೆಯೂ ಇದೆ.
ಅಶೋಕ್ ಕುಮಾರ್ ರೈ, ಶಾಸಕರು ಪುತ್ತೂರು

LEAVE A REPLY

Please enter your comment!
Please enter your name here