ಚನಿಯಪ್ಪ ನಾಯ್ಕ್ ಅವರಿಗೆ ನಾಡೋಜ ಡಾ. ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಚೇತನ ಪ್ರಶಸ್ತಿ

0

ಕಾಸರಗೋಡು: ನಿವೃತ್ತ ಶಿಕ್ಷಕ, ಖ್ಯಾತ ಯಕ್ಷಗಾನ ಕಲಾವಿದ, ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಅಧ್ಯಕ್ಷ, ಸಂಘಟಕ ಎನ್.ಚನಿಯಪ್ಪ ನಾಯ್ಕ್ ಅವರಿಗೆ ಈ ಬಾರಿ ಡಾ. ಕಯ್ಯಾರ ಕಿಞ್ಞಣ ರೈ ಅವರ ಹೆಸರಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ನೀಡುವ ಗಡಿಚೇತನ ಪ್ರಶಸ್ತಿ ಲಭಿಸಿದೆ. ಇದು ಸ್ಮರಣಿಕೆ, ಪ್ರಶಸ್ತಿಪತ್ರ ಮತ್ತು 1 ಲಕ್ಷ ರೂ. ನಗದು ಒಳಗೊಂಡಿರುತ್ತದೆ.


ಅವರು ಕಾಸರಗೋಡಿನಲ್ಲಿ ಸಾಹಿತ್ಯ, ಸಾಮಾಜಿಕ, ಜಾನಪದ ಸಾಂಸ್ಕೃತಿಕರಂಗಗಳಲ್ಲೂ ಗುರುತಿಸಿಕೊಂಡದ್ದಲ್ಲದೇ ಕನ್ನಡ ಕಾರ್ಯಕ್ರಮ ನಿರೂಪಕ, ಕನ್ನಡ ಉದೋಷಕ, ಕಾರ್ಯಕತ್ರಮ ಸಂಘಟಕರಾಗಿ ಸೇವೆ ಸಲ್ಲಿಸಿರುವುದನ್ನು ಗುರುತಿಸಿ ಗಡಿನಾಡು ಚೇತನ ಪ್ರಶಸ್ತಿ ನೀಡಲಾಗಿದೆ ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನ ಮರದ ಹಾಗೂ ಪ್ರಾಧಿಕಾರ ಸದಸ್ಯ ಎ.ಆರ್.ಸುಬ್ಬಯ್ಯಕಟ್ಟೆ ತಿಳಿಸಿದ್ದಾರೆ.


ಈಗಾಗಲೇ ಅವರಿಗೆ ಕರ್ನಾಟಕ ಜಾನಪದ ಪರಿಷತ್ತು ಜಾನಪದ ಲೋಕ ಬೆಂಗಳೂರು ನೀಡುವ 2026ನೇ ಸಾಲಿನ ಜಾನಪದ ಲೋಕ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
ಕಾಸರಗೋಡು ಜಿಲ್ಲೆಯ ನೆಟ್ಟಣಿಗೆ ಗ್ರಾಮದ ನಿಡಿಯಡ್ಕ ನಿವಾಸಿಯಾದ ಎನ್.ಚನಿಯಪ್ಪ ನಾಯ್ಕ್ ಅವರು ನಿವೃತ್ತ ಅಧ್ಯಾಪಕರೂ, ಖ್ಯಾತ ಹಾಸ್ಯ ಯಕ್ಷಗಾನ ಕಲಾವಿದರೂ ಆಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾಗಿ ಸಾಂಸ್ಕೃತಿಕ ವಲಯದಲ್ಲಿ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here