






ಪುತ್ತೂರು: ನಮ್ಮೂರು ನಮ್ಮವರು ಮೈಂದಡ್ಕ (ರಿ) ಸಂಘಟನೆಯ ವಿಂಶತಿ ವರ್ಷಾಚರಣೆಯ ಸವಿನೆನಪಿಗಾಗಿ ನೆಕ್ಕಿಲಾಡಿಯ ಬೊಳಂತಿಲ ಎಂಬಲ್ಲಿ ನಿರ್ಮಿಸಲುದ್ದೇಶಿಸಿರುವ ಪ್ರಯಾಣಿಕರ ತಂಗುದಾಣದ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.



ಗಣೇಶ್ ನಾಯಕ್ ಭೂಮಿ ಪೂಜೆಯನ್ನು ನೆರವೇರಿಸಿದರು. ಗ್ರಾ.ಪಂ.ಅಧ್ಯಕ್ಷೆ ಸುಜಾತ ರೈ, ಉಪ್ಪಿನಂಗಡಿ ಶ್ರೀ ರಾಮ ಶಾಲೆಯ ಸಂಚಾಲಕ ಯು.ಜಿ ರಾಧ, ಶ್ರೀ ನಿಧಿ ಮೊಬೈಲ್ ಮಾಲಕ ಜಯಪ್ರಕಾಶ್ ಶೆಟ್ಟಿ, ಪ್ರಭಾಕರ ನಾಯಕ್, ಸಂಘಟನೆಯ ಅಧ್ಯಕ್ಷ ಪುರುಷೋತ್ತಮ ನಾಯಕ್, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.













