ಫೆ.7, 8: ಬೆಟ್ಟಂಪಾಡಿ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಬೆಳ್ಳಿಹಬ್ಬ ಸಂಭ್ರಮ

0

ಬೆಟ್ಟಂಪಾಡಿ: ಇಲ್ಲಿನ ವಿನಾಯಕನಗರ ಶ್ರೀ ಸಿದ್ಧಿವಿನಾಯಕ ಭಜನಾ ಮಂದಿರದ ಬೆಳ್ಳಿಹಬ್ಬ ಸಂಭ್ರಮವು ಫೆ. 7 ಹಾಗೂ 8 ರಂದು ವೇ.ಮೂ. ದಿನೇಶ್‌ ಮರಡಿತ್ತಾಯ ಗುಮ್ಮಟೆಗದ್ದೆಯವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ.


ಫೆ. 7 ರಂದು ಬೆಳಿಗ್ಗೆ ಗಣಪತಿ ಹೋಮ, ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ ಮುಖ್ಯರಸ್ತೆಯ ವಿನಾಯಕ ದ್ವಾರದಿಂದ ಭಜನಾ ಮಂದಿರದವರೆಗೆ ಭವ್ಯ ಮೆರವಣಿಗೆಯಲ್ಲಿ ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಜರಗಿ ಸಂಜೆ ಭಜನಾ ಮಂಗಲೋತ್ಸವ ನಡೆಯಲಿದೆ. ನಂತರ ಸತ್ಯನಾರಾಯಣ ದೇವರ ಪೂಜೆ ನೆರವೇರಲಿದೆ. ಇದೇ ವೇಳೆ ಶ್ರೀ ಸಿದ್ಧಿವಿನಾಯಕ ಮಕ್ಕಳ ಕುಣಿತ ಭಜನಾ ತಂಡದವರಿಂದ ಕುಣಿತ ಭಜನೆ ನಡೆದು ಬಳಿಕ ಸಭಾ ಕಾರ್ಯಕ್ರಮ ಜರಗಲಿದೆ. ರಾತ್ರಿ ಅನ್ನಸಂತರ್ಪಣೆಯಾಗಿ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮೂಡಿಬರಲಿದೆ.


ಫೆ. 8 ರಂದು ಬೆಳಿಗ್ಗೆ 108 ತೆಂಗಿನಕಾಯಿ ಅಷ್ಠ ದ್ರವ್ಯಯುಕ್ತ ಗಣಪತಿ ಹೋಮ, ಭಜನಾ ಕಾರ್ಯಕ್ರಮ ಜರಲಿದೆ. ನಂತರ ಸ್ಥಳೀಯ ಅಂಗನವಾಡಿ, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಶ್ರೀ ಸಿದ್ಧಿವಿನಾಯಕ ಯಕ್ಷಗಾನ ಕಲಾಸಂಘದ ಸದಸ್ಯರು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ʻಶ್ರೀದೇವಿ ಮೂಕಾಂಬಿಕೆʼ ಯಕ್ಷಗಾನ ತಾಳಮದ್ದಳೆ ಜರಗಲಿದೆ. ರಾತ್ರಿ ದೇವರಿಗೆ ರಂಗಪೂಜೆ, ಅನ್ನಸಂತರ್ಪಣೆ ಬಳಿಕ ತಾಂಬೂಲ ಕಲಾವಿದೆರ್‌ ಕುಡ್ಲ ಇವರಿಂದ ʻಎಲ್ಲೆ ದಾದʼ ತುಳು ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಶ್ರೀ ಸಿದ್ಧಿವಿನಾಯಕ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here