






ಪುತ್ತೂರು: ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡದ ವಿವೇಕಾನಂದ ಸಹಕಾರಿ ಸೌಧದಲ್ಲಿ ಫೆ. ೭ ರಂದು ಚಿಗುರು ಫ್ರೀಸ್ಟೈಲ್ ಡ್ರೆಸ್ಸ್ವೇರ್ ಶುಭಾರಂಭಗೊಂಡಿತು.



ಚಿಗುರು ಫ್ರೀಸ್ಟೈಲ್ ಡ್ರೆಸ್ವೇರ್ ಸಂಸ್ಥೆಯು ಉತ್ತಮ ಹೆಸರನ್ನು ಪಡೆಯಲಿ- ಅಶ್ವಿನ್ ಎಲ್.ಶೆಟ್ಟಿ
ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತಾಧಿಕಾರಿ ಅಶ್ವಿನ್ ಎಲ್.ಶೆಟ್ಟಿಯವರು ನೂತನ ಜವಳಿ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿ, ಬೆಳೆಯುತ್ತಿರುವ ಸವಣೂರಿನಲ್ಲಿ ಚಿಗುರು ಫ್ರೀಸ್ಟೈಲ್ ಡ್ರೆಸ್ವೇರ್ ಸಂಸ್ಥೆಯು ಉತ್ತಮ ಹೆಸರನ್ನು ಪಡೆಯುವ ಮೂಲಕ ಈ ಮಳಿಗೆ ಹತ್ತೂರಿನಲ್ಲಿ ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿದರು.




ಅಚ್ಚುಮೆಚ್ಚಿನ ಮಳಿಗೆಯಾಗಿ ಮೂಡಿಬರಲಿ- ಸುಂದರಿ
ಸವಣೂರು ಗ್ರಾ.ಪಂ, ಅಧ್ಯಕ್ಷೆ ಸುಂದರಿ ಬಿ.ಎಸ್ರವರು ಮಾತನಾಡಿ ಈ ಮಳಿಗೆ ಈ ಭಾಗದ ಎಲ್ಲರ ಅಚ್ಚುಮೆಚ್ಚಿನ ಮಳಿಗೆಯಾಗಿ ಮೂಡಿಬರಲಿ, ಆಮೂಲಕ ಸವಣೂರಿನ ಹೆಸರು ಮತ್ತಷ್ಟು ಬೆಳಗಲಿ ಎಂದರು.

ಗ್ರಾಹಕರಿಗೆ ಉತ್ತಮ ಸೇವೆ ನೀಡಲಿ- ತಾರಾನಾಥ ಕಾಯರ್ಗ
ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಮಾತನಾಡಿ ಯುವಕರು ಸರಕಾರಿ ಉದ್ಯೋಗವನ್ನು ಬಯಸದೇ ಸ್ವ-ಉದ್ಯೋಗದತ್ತ ತಮ್ಮ ಚಿತ್ತವನ್ನು ಹರಿಸಬೇಕು ಎಂದು ಹೇಳಿ, ಚಿಗುರು ಗ್ರೂಪ್ನವರು ಆರಂಭಿಸಿದ ಈ ಮಳಿಗೆ ಉತ್ತಮವಾದ ಸೇವೆಯನ್ನು ಗ್ರಾಹಕರಿಗೆ ನೀಡಲಿ ಎಂದು ಹೇಳಿದರು.
ಸಮಾಜದಲ್ಲಿ ಹೆಸರನ್ನು ಪಡೆದಿದ್ದಾರೆ- ಶತ್ರುಂಜಯ ಆರಿಗ
ಸವಣೂರು ಜಿನಮಂದಿರದ ಆಡಳಿತ ಮೊಕ್ತೇಸರ ಶತ್ರುಂಜಯ ಆರಿಗ ಬೆಳಂದೂರುಗುತ್ತು ಮಾತನಾಡಿ ಉದ್ಯಮ ಕ್ಷೇತ್ರದಲ್ಲಿ ಚಿಗುರು ಗ್ರೂಪ್ ಸಂಸ್ಥೆಯವರು ಉತ್ತಮವಾದ ಹೆಸರನ್ನು ಪಡೆಯಲಿ ಎಂದು ಶುಭಹಾರೈಸಿ, ನಮ್ಮ ಬಸದಿ ಜಾಗದಲ್ಲಿ ಚಿಗುರು ಗ್ರೂಪ್ನವರು ಸರ್ವಿಸ್ ಸ್ಟೇಷನ್ ಅನ್ನು ನಡೆಸಿಕೊಂಡು ಬರುತ್ತಿದ್ದು, ಇವರು ಸರಳ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಹೆಸರನ್ನು ಪಡೆದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಹೆಸರನ್ನು ತರಲಿ- ಗಿರಿಶಂಕರ್ ಸುಲಾಯ ಕಾಣಿಯೂರು
ಸವಣೂರು ರೈತ ಉತ್ಪಾದಕ ಕಂಪೆನಿಯ ಅಧ್ಯಕ್ಷ ಗಿರಿಶಂಕರ್ ಸುಲಾಯ ಮಾತನಾಡಿ ಈ ಜವಳಿ ಮಳಿಗೆ ಸವಣೂರಿಗೆ ಮತ್ತಷ್ಟು ಹೆಸರನ್ನು ತರಲಿ ಎಂದರು.
ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ಸವಣೂರು ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅರ್ತಿಕರೆ, ದೇವರಗುಡ್ಡೆ ವೀರಾಂಜನೇಯ ಗೆಳೆಯರ ಬಳಗದ ಆನಂದ ಗೌಡ ಕೂಂಕ್ಯರವರು ಅತಿಥಿಗಳಾಗಿ ಭಾಗವಹಿಸಿದ್ದರು. ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ, ನ್ಯಾಯವಾದಿ ಮಹಾಬಲ ಶೆಟ್ಟಿ ಕೊಮ್ಮಂಡ, ಸವಣೂರು ಗ್ರಾ.ಪಂ, ಉಪಾಧ್ಯಕ್ಷೆ ಜಯಶ್ರೀ, ಸದಸ್ಯರುಗಳಾದ ರಾಜೀವಿ ಶೆಟ್ಟಿ ಕೆಡೆಂಜಿ, ಚಂದ್ರಾವತಿ ಸುಣ್ಣಾಜೆ, ಜಿನಬಸದಿಯ ಅರ್ಚಕ ಶ್ರೇಯಾಂಸ್ ಕುಮಾರ್ ಇಂದ್ರ, ಬೆಳಂದೂರು ಗ್ರಾ.ಪಂ, ಅಧ್ಯಕ್ಷೆ ತೇಜಾಕ್ಷಿ ಕೊಡಂಗೆ, ಉಪಾಧ್ಯಕ್ಷ ಜಯಂತ್ ಅಬೀರ, ಸದಸ್ಯ ರೋಹಿತಾಕ್ಷ ಕೆಡೆಂಜಿಕಟ್ಟ, ಸವಣೂರು ಶಾರದಾಂಬಾ ಸೇವಾ ಸಂಘದ ಸ್ಥಾಪಾಕಧ್ಯಕ್ಷ ಮೋಹನ್ ರೈ ಕೆರೆಕೋಡಿ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಸಚಿನ್ ಸವಣೂರು, ಅನನ್ಯ ಜುವೆಲ್ಸ್ನ ಪದ್ಮನಾಭ ಆಚಾರ್ಯ, ಮಾಸ್ ಸವಣೂರು ಶಾಖಾ ಮೇನೇಜರ್ ಚೇತನ್ ಪ್ರಕಾಶ್, ದಯಾನಂದ ಮಾಲೆತ್ತಾರು, ಪ್ರಮೋದ್ ಕುಮಾರ್, ಬಾಲಚಂದ್ರ ರೈ ಕೆರೆಕ್ಕೋಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಪುಷ್ಪಾವತಿ, ಮೋನಪ್ಪ ಗೌಡ ಕೂಂಕ್ಯ, ರಕ್ಷಿತ್ ಕೂಂಕ್ಯ ಮತ್ತು ದಿವ್ಯ ರಕ್ಷಿತ್ ಮತ್ತು ಚಿಗುರು ಗ್ರೂಪ್ಸ್ನವರು ಅತಿಥಿಗಳನ್ನು ಸ್ವಾಗತಿಸಿದರು. ಅನಿಲ್ ಖಂಡಿಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.










