






ಆಲಂಕಾರು: ಬುಡೇರಿಯಾ ಶ್ರೀ ದೇವಿ ಉಳ್ಳಾಲ್ತಿ ಉಳ್ಳಾಕ್ಲು ಕ್ಷೇತ್ರದಲ್ಲಿ ವಾರ್ಷಿಕ ದಿನಾಚರಣೆಯ ಪ್ರಯುಕ್ತ ಶನೈಶ್ಚರ ಕಲ್ಪೋಕ್ತ ಪೂಜೆ, ಆಶ್ಲೇಷ ಬಲಿ, ರಂಗಪೂಜೆ
ಬ್ರಹ್ಮಶ್ರೀ ವೇ.ಮೂ ತಂತ್ರಿ ಸುಬ್ರಹ್ಮಣ್ಯ ಬಳ್ಳಕ್ಕುರಾಯ ರವರ ನೇತೃತ್ವದಲ್ಲಿ ನಡೆಯಿತು.



ಬೆಳಿಗ್ಗೆ ಸ್ವಸ್ತಿ ಪುಣ್ಯಾಹವಾಚನ, ಗಣಪತಿ ಹೋಮ, ನವಗ್ರಹಶಾಂತಿ ಸಹಿತ ಶನಿ ಶಾಂತಿ ಹೋಮ, ಶನೈಶ್ಚರ ಕಲ್ಪೋಕ್ತ ಪೂಜೆ, ನಾಗದೇವರಿಗೆ ನವಕ ಕಲಶಾಭಿಷೇಕ, ನಾಗರಾಜ ಕಲ್ಪೋಕ್ತ ಪೂಜೆ, ದೈವಗಳಿಗೆ ಕಲಶ ಪ್ರಧಾನ ಹೋಮ, ಕಲಶಾಭಿಷೇಕ, ತಂಬಿಲ ನಡೆದು ಶನಿಶಾಂತಿಯ ಪೂರ್ಣಾಹುತಿ, ಮಹಾಮಂಗಳಾರತಿ, ಶ್ರೀದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ಹಾಗೂ ಪರಿವಾರ ದೈವಗಳಿಗೆ ವಿಶೇಷ ತಂಬಿಲ, ಪ್ರಸಾದ ವಿತರಣೆ,ಕ್ಷೇತ್ರದ ವತಿಯಿಂದ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಸನ್ಮಾನ,ಕ್ಷೇತ್ರದಲ್ಲಿ ಸುಮಾರು ವರ್ಷಗಳ ಸೇವೆ ಸಲ್ಲಿಸಿದ ನೋಣಯ್ಯ ಮಡಿವಾಳರವರಿಗೆ ಕ್ಷೇತ್ರದ ವತಿಯಿಂದ ಗೌರವಾರ್ಪಣೆ ನಡೆದು
ಮಧ್ಯಾಹ್ನ ಅನ್ನಪ್ರಸಾದ ಭೋಜನ ನಡೆಯಿತು.




ಸಂಜೆ ರಂಗಪೂಜೆ ಸಂಕಲ್ಪ, ಆಶ್ಲೇಷ ಬಲಿ, ಶ್ರೀದೇವಿ ಉಳ್ಳಾಲ್ತಿ ಮತ್ತು ಉಳ್ಳಾಕ್ಲು ದೈವಗಳಿಗೆ ರಂಗಪೂಜೆ ನಡೆದು ಪ್ರಸಾದ ವಿತರಣೆಯಾಗಿ ಅನ್ನಪ್ರಸಾದ ಭೋಜನ ನಡೆಯಿತು.ಈ ಸಂಧರ್ಭದಲ್ಲಿ ಆಡಳಿತ ಪ್ರಮುಖರಾದ ಈಶ್ವರ ಗೌಡ ಪಜ್ಜಡ್ಕ, ಸಂಕಪ್ಪ ಗೌಡ ಗೌಡತ್ತಿಗೆ, ಸೂರಪ್ಪ ಪೂಜಾರಿ ಹೊಸಮಜಲು, ಅರ್ಚಕರಾದ ಅನಂತರಾಮ ಭಟ್ ತೋಟಂತಿಲ ಮತ್ತು ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.











