ಪಾಣಾಜೆ: ಮುಕ್ಕಾಲು ಮೂಜಿ ಗಳಿಗೆ ತುಳು ಸಾಮಾಜಿಕ ಹಾಸ್ಯಮಯ ನಾಟಕದ ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಸ್ಪರ್ಶ ಕಲಾ ತಂಡ ಪಾಣಾಜೆ ಇದರ ನೇತೃತ್ವದಲ್ಲಿ ಫೆ.28ರಂದು ಶ್ರೀ ರಣಮಂಗಲ ಸಭಾಂಗಣದಲ್ಲಿ ನಡೆಯುವ ಮುಕ್ಕಾಲು ಮೂಜಿ ಗಳಿಗೆ ತುಳು ಸಾಮಾಜಿಕ ಹಾಸ್ಯಮಯ ನಾಟಕದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಸುಬೋಧ ಪ್ರೌಢಶಾಲೆ ಪಾಣಾಜೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ನಾರಾಯಣ ಪ್ರಕಾಶ್ ನೆಲ್ಲಿತಿಮಾರ್, ವಿಶ್ವನಾಥ ರೈ ಕಡಮಾಜೆ, ಜಗನ್ನಾಥ ರೈ ಕಡಮಾಜೆ, ರಾಮಚಂದ್ರ ಮಣಿಯಾಣಿ ಪಡ್ಯಂಬೆಟ್ಟು, ಬಾಲಕೃಷ್ಣ ಪೂಜಾರಿ ಉಡ್ಡಂಗಳ, ಮೋಹನ್ ನಾಯ್ಕ ತುಂಬಡ್ಕ, ಸದಾನಂದ ನಾಯ್ಕ ಭರಣ್ಯ, ಜಯಶ್ರೀ ದೇವಸ್ಯ, ಭರತ್ ಭಟ್ ಭರಣ್ಯ, ಡಾ| ಅಖಿಲೇಶ್ ಪಾಣಾಜೆ ಹಾಗೂ ಕಲಾವಿದರು, ಕಲಾ ಪೋಷಕರು ಉಪಸ್ತಿತರಿದ್ದರು. ಕಾರ್ಯಕ್ರಮವನ್ನು ಮನೋಜ್ ರೈ ಸೂರಂಬೈಲ್ ನಿರೂಪಿಸಿದರು. ಗಿರೀಶ್ ಭಟ್ ಕಡಂದೇಲು ವಂದಿಸಿದರು.

LEAVE A REPLY

Please enter your comment!
Please enter your name here