ಬೊಳುವಾರು ಕ್ಷೇತ್ರದಲ್ಲಿ ಯಕ್ಷಗಾನ ತಾಳಮದ್ದಳೆ

0

ಪುತ್ತೂರು: ಬೊಳುವಾರು ಶ್ರೀದುರ್ಗಾ ಪರಮೇಶ್ವರೀ ಉಳ್ಳಾಲ್ತಿ ಮಲರಾಯ ಸಪರಿವಾರ ಕ್ಷೇತ್ರದಲ್ಲಿ ಕ್ಷೇತ್ರದ ಯಕ್ಷ ಕಲಾ ಪ್ರತಿಷ್ಠಾನ (ರಿ) ವತಿಯಿಂದ ಫೆಬ್ರವರಿ ತಿಂಗಳ ತಾಳಮದ್ದಳೆ ತಾಮ್ರಧ್ವಜ ಕಾಳಗ ಪ್ರಸಂಗವು ಫೆ.8ರಂದು ಅಪರಾಹ್ನ ನಡೆಯಿತು.


ಹಿಮ್ಮೇಳದಲ್ಲಿ ಭಾಗವತರಾಗಿ, ಗೋವಿಂದ ನಾಯಕ್ ಪಾಲೆಚ್ಚಾರು, ರಾಜಗೋಪಾಲ್ ಜೋಶಿ, ಚಂದ್ರಶೇಖರ ಹೆಗ್ಡೆ ನೆಲ್ಯಾಡಿ, ಚೆಂಡೆ ಮದ್ದಳೆಯಲ್ಲಿ ನಾಟ್ಯಗುರು ಪ್ರಚೇತ್ ಆಳ್ವ ಸೇರಿದಂತೆ, 10ಕ್ಕೂ ಮಿಕ್ಕಿ ಪ್ರತಿಷ್ಠಾನದ ವಿದ್ಯಾರ್ಥಿಗಳು ಪಾಲ್ಗೊಂಡರು. ಅರ್ಥಧಾರಿಗಳಾಗಿ; ಗುಂಡ್ಯಡ್ಕ ಈಶ್ವರ ಭಟ್‌, ಗುಡ್ಡಪ್ಪ ಬಲ್ಯ, ರಾಧಾಕೃಷ್ಣ ಕಲ್ಚಾರ್, ಶಂಕರ ಸಾರಡ್ಕ, ಗಣಪತಿ ನಾಯಕ್ ಪಾಲೆಚ್ಚಾರು, ಜಗನ್ನಾಥ ಪುಣಚ ಸಹಕರಿಸಿದರು. ಕೂಟದ ಪ್ರಾಯೋಜಕರಾದ ಚಂದ್ರಶೇಖರ ಹೆಗ್ಡೆ ನೆಲ್ಯಾಡಿರವರಿಗೆ ಶ್ರೀಕ್ಷೇತ್ರದ ಪ್ರಸಾದ, ಪ್ರತಿಷ್ಠಾನದ ವತಿಯಿಂದ ಶಾಲು ಹಾಕಿ ಗೌರವಿಸಲಾಯಿತು.

ಪ್ರತಿಷ್ಠಾನದ ಅಧ್ಯಕ್ಷ ಎ ಬಾಲಸುಬ್ರಹ್ಮಣ್ಯ ಭಟ್, ಕಾರ್ಯದರ್ಶಿ ಶಂಕರ ಭಟ್, ಸದಸ್ಯರಾದ ವಸಂತ ನಾಯಕ್ ಆಜೇರು, ಪ್ರಸನ್ನ ಬಲ್ಲಾಳ್, ಕ್ಷೇತ್ರದ ಅರ್ಚಕ ಮನಮೋಹನ ಭಟ್, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ 40 ಮಂದಿಗೂ ಮಿಕ್ಕಿ ಅಭಿಮಾನಿಗಳು ಉಪಸ್ಥಿತರಿದ್ದರು. ನಾಟ್ಯ ತರಗತಿ ಸಂಯೋಜಕ ಶ್ರೀರಾಮ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here