






ಪುತ್ತೂರು: ನಕಲಿ ದಾಖಲೆ ಸೃಷ್ಟಿಸಿ ಲಾರಿಯಲ್ಲಿ ಕೆಂಪುಕಲ್ಲು ಸಾಗಾಟ ಮಾಡುತ್ತಿರುವುದನ್ನು ಪತ್ತೆ ಮಾಡಿದ ಪುತ್ತೂರು ಗ್ರಾಮಾಂತರ ಠಾಣಾ ಪೊಲೀಸರು ಕಲ್ಲು ಸಹಿತ ಲಾರಿ ವಶಕ್ಕೆ ಪಡೆದುಕೊಂಡು ನಾಲ್ವರನ್ನು ಬಂಧಿಸಿದ್ದಾರೆ.


ಅನಿಕೇತನ್ ಅಲಿಯಾಸ್ ಅನಿಲ್, ಜಯಪ್ರಕಾಶ್, ಅಜಿತ್ ಕುಮಾರ್ ಹಾಗೂ ಕಿಶನ್ ಆರೋಪಿಗಳು.ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಗುಣಪಾಲ ಜೆ. ಹಾಗೂ ಸಿಬ್ಬಂದಿಗಳು ಗಸ್ತು ನಿರತರಾಗಿದ್ದ ಸಮಯದಲ್ಲಿ ಈಶ್ವರಮಂಗಲ ಕಡೆಯಿಂದ ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬರುತ್ತಿದ್ದ ಈಚರ್ ಲಾರಿಯನ್ನು ಪುಲಿತ್ತಡಿ ಎಂಬಲ್ಲಿ ತಡೆದು ತಪಾಸಣೆಗಾಗಿ ನಿಲ್ಲಿಸಲಾಯಿತು. ಪರಿಶೀಲಿಸಿದಾಗ ಲಾರಿಯಲ್ಲಿ ಕೆಂಪು ಕಲ್ಲುಗಳನ್ನು ತುಂಬಿಸಲಾಗಿತ್ತು. ಕಲ್ಲು ಸಾಗಾಟದ ಪರವಾನಿಗೆ ಬಗ್ಗೆ ಚಾಲಕ
ಕಿಶನ್ ನಲ್ಲಿ ವಿಚಾರಿಸಿದಾಗ ಆರೋಪಿ ಅನಿಕೇತನ್ ತನ್ನ ಕೇರಳ ರಾಜ್ಯದ ಮಿಂಚಿಪದವು ಬಸ್ತಿ ಎಂಬಲ್ಲಿಂದ, ಯಾವುದೇ ನೈಜ ಪರಾವಾನಿಗೆ ಇಲ್ಲದೆ ಖನಿಜ ಸಂಪತ್ತಾದ ಕೆಂಪುಕಲ್ಲುಗಳನ್ನು ಲಾರಿಯಲ್ಲಿ ತುಂಬಿಸಿ ಸಾಗಾಟ ಮಾಡುವ ಉದ್ದೇಶದಿಂದ, ತನ್ನ ಹೆಸರಿನ ಕೆಎ21ಸಿ 8141 ಲಾರಿಗೆ ಕೆಂಪು ಕಲ್ಲುಗಳನ್ನು ಸಾಗಾಟ ಮಾಡಲು ಪಡೆದ ಇ-ಪಾಸ್ ನಲ್ಲಿ ಸದ್ರಿ ಲಾರಿಯ ನಂಬ್ರವನ್ನು ಅಳಿಸಿ, ಜಯಪ್ರಕಾಶ್ ಎಂಬವರಿಗೆ ಸೇರಿದ ಈಚರ್ ಲಾರಿಯ ಕೆಎ21ಸಿ4326 ನಂಬರ್ ನ್ನು ಹಾಕಿ ಆಪ್ರಾಮಾಣಿಕವಾಗಿ ಸುಳ್ಳು ದಾಖಲೆ ಪತ್ರವನ್ನು ತಯಾರಿಸಿ ಕೆಂಪು ಕಲ್ಲುಗಳನ್ನು ಸದ್ರಿ ಲಾರಿಯಲ್ಲಿ ಲೋಡ್ ಮಾಡಿಸಿ, ಸಾಗಾಣಿಕೆಗೆ ಸೃಷ್ಟಿಸಿದ ಸುಳ್ಳು ದಾಖಲಾತಿಯಾದ ಇ-ಪಾಸ್ನ್ನು ರೈಟರ್ ಅಜಿತ್ ರವರ ಮೂಲಕ ಚಾಲಕ ಕಿಶನ್ರವರಿಗೆ ನೀಡಿ ಕಳುಹಿಸಿ ಕೊಟ್ಟಿರುವುದು ತಿಳಿದು ಬಂದಿರುತ್ತದೆ. ಅಲ್ಲದೆ ಸದ್ರಿ ಲಾರಿಯನ್ನು ಪೊಲೀಸರು ತಡೆದು ನಿಲ್ಲಿಸಿ ವಿಚಾರಿಸಿದ ಬಳಿಕ ಲಾರಿಯಲ್ಲಿ ಕೆಂಪು ಕಲ್ಲನ್ನು ಸಾಗಾಟ ಮಾಡಲು ಹೊಸದೊಂದು ಇ-ಪಾಸ್ ಪ್ರಣಮ್ರ ಅವರ ಮೂಲಕ ಕಳುಹಿಸಿ ವಂಚನೆ ಮಾಡಿರುವುದು ಪತ್ತೆಯಾಗಿದೆ.



ಕೃತ್ಯದಲ್ಲಿ ಭಾಗಿಯಾದ ನಾಲ್ವರು ಆರೋಪಿಗಳು ಮತ್ತು ಲಾರಿ ಸಹಿತ ಕಲ್ಲನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಪುತ್ತೂರು ಗ್ರಾಮಾಂತರ ಠಾಣಾ ಅ,ಕ್ರ .5: 16/2026, 500: 281 335(2) 336(3) 338 ಭಾರತೀಯ ನ್ಯಾಯ ಸಂಹಿತರ 2023 ಕಲಂ 4(1ಎ) 21 (1) 21(2) MMRD ACT, 1957 ಕಲಂ 3.44 Karnataka Miner Mineral Consistent Rule 1994 and ಕಲಂ 179 66(1) R/W 192(a) IMV ACT ಯಂತೆ ಪ್ರಕರಣ ದಾಖಲಾಗಿರುತ್ತದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಜಾಮೀನಿನಲ್ಲಿ ಬಿಡುಗಡೆ ಮಾಡಿದೆ.










