







ಉಪ್ಪಿನಂಗಡಿ: ಇಲ್ಲಿನ ಹಳೆ ಬಸ್ ನಿಲ್ದಾಣದಲ್ಲಿರುವ ಅಟೋ ರಿಕ್ಷಾ ತಂಗುದಾಣಕ್ಕೆ ಹೈಮಾಸ್ಟ್ ದೀಪ ಅಳವಡಿಸುವಂತೆ ನೇತ್ರಾವತಿ ಅಟೋ ರಿಕ್ಷಾ ಚಾಲಕ- ಮಾಲಕ ಸಂಘದವರು ಉಪ್ಪಿನಂಗಡಿ ಗ್ರಾ.ಪಂ.ಗೆ ಮನವಿ ನೀಡಿದ್ದಾರೆ.


ಇಲ್ಲಿನ ಅಟೋ ರಿಕ್ಷಾ ತಂಗುದಾಣದಲ್ಲಿ ರಾತ್ರಿಯೂ ಕೂಡಾ ಅಟೋಗಳು ಬಾಡಿಗೆಗಾಗಿ ನಿಲ್ಲುತ್ತಿದ್ದು, ದಿನ ನಿತ್ಯ ಬಹಳಷ್ಟು ಪ್ರಯಾಣಿಕರು ಬರುತ್ತಾರೆ. ಆದರೆ ಸಂಜೆಯಾದ ಕೂಡಲೇ ಇಲ್ಲಿ ಸರಿಯಾದ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲದಿರುವುದರಿಂದ ಈ ಪ್ರದೇಶದಲ್ಲಿ ಕತ್ತಲೆ ಆವರಿಸುತ್ತದೆ. ಆದ್ದರಿಂದ ಪ್ರಯಾಣಿಕರ ಹಾಗೂ ಅಟೋ ರಿಕ್ಷಾ ಚಾಲಕರ ಸುರಕ್ಷತೆ ಹಾಗೂ ಅನುಕೂಲತೆಯನ್ನು ಮನಗಂಡು ತ್ವರಿತವಾಗಿ ಇಲ್ಲಿಗೊಂದು ಹೈಮಾಸ್ಟ್ ವಿದ್ಯುತ್ ದೀಪ ಅಳವಡಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.



ಮನವಿ ನೀಡಿದ ನಿಯೋಗದಲ್ಲಿ ನೇತ್ರಾವತಿ ಅಟೋ ಚಾಲಕ -ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಅಶೋಕ್ ಬಂಡಾಡಿ, ಕೋಶಾಧಿಕಾರಿ ಕಲಂದರ್ ಶಾಫಿ ನೆಕ್ಕಿಲಾಡಿ, ಸಂಘಟನಾ ಕಾರ್ಯದರ್ಶಿ ಅಬ್ದುಲ್ ಮಜೀದ್ ರಾಮನಗರ, ಸದಸ್ಯರಾದ ಯೂಸುಫ್ ಮಠ ಉಪಸ್ಥಿತರಿದ್ದರು.










