ಪುತ್ತೂರು: ಕಂಬಳದ ಕರೆ ಬಿಟ್ಟು ರಸ್ತೆಯಲ್ಲಿ ಓಡಿ ಬಸ್ ನಿಲ್ದಾಣ ತಲುಪಿದ ಕೋಣಗಳು !

0

ಪುತ್ತೂರು: ಪುತ್ತೂರು ಕೋಟಿ ಚೆನ್ನಯ ಜೋಡುಕರೆಯಲ್ಲಿ ತರಬೇತಿ ಹಂತದಲ್ಲಿ ಓಡುತ್ತಿದ್ದ ಕೋಣಗಳೆರಡು ಮಂಜೊಟ್ಟಿ ತಲುಪಿದ ಬಳಿಕ ಮತ್ತೆ ಹಿಂದಿರುಗಿ ಕಂಬಳದ ಕರೆ ಬಿಟ್ಟು ರಸ್ತೆಯಲ್ಲೇ ಓಡಿ ಪುತ್ತೂರು ಬಸ್ ನಿಲ್ದಾಣದ ತನಕ ತಲುಪಿದ ಘಟನೆ ಫೆ.10 ರಂದು ನಡೆದಿದೆ.


ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರಮಾರು ಗದ್ದೆಯಲ್ಲಿರುವ ಕೋಟಿ ಚೆನ್ನಯ ಜೋಡು ಕರೆ ಕಂಬಳದ ಕರೆಯಲ್ಲಿ ಸೈಯ್ಯದ್ ಅಬ್ಬಾಸ್ ಚೆನ್ನಾವರ ಅವರ ಮಕ್ಕಳು ಕಂಬಳದ ಕೋಣಗಳನ್ನು ತರಬೇತಿಗೊಳಿಸುತ್ತಿದ್ದ ವೇಳೆ ಕೋಣಗಳೆರಡು‌ ಓಟಗಾರನ ಜೊತೆ ಮಂಜೊಟ್ಟಿ ತಲುಪಿತು. ಮಂಜೊಟ್ಟಿ ತಲುಪಿದಂತೆ ಹಿಂದಿರುಗಿ ಓಟಗಾರನ ಕೈಯಿಂದ ತಪ್ಪಿಸಿ ಪುನಃ ಕಂಬಳದ ಕರೆಯಲ್ಲೇ ಓಡಿ ಗಂತ್ ನ ಮೂಲಕ ಸಾರ್ವಜನಿಕ ರಸ್ತೆಗೆ ತೆರಳಿ ಅಲ್ಲಿಂದ ಖಾಸಗಿ ಬಸ್ ನಿಲ್ದಾಣದ ಆವರಣದ ಮೂಲಕ ಮತ್ತೆ ಸಾರ್ವಜನಿಕ ರಸ್ತೆಯ ಮೂಲಕ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ತನಕ ಓಡಿದಾಗ ಕೋಣಗಳನ್ನು ಓಡಿಸುವವರು ಬೈಕ್ ನಲ್ಲಿ ಬಂದು ಅದನ್ನು ತಡೆದು ಮತ್ತೆ ಕಂಬಳದ ಕರೆಗೆ ಕರೆದೊಯ್ದಿದ್ದಾರೆ. ಕೋಣಗಳ ಅಡ್ಡಾದಿಡ್ಡಿ ಓಟದಿಂದ ಸಾರ್ವಜನಿಕರು ಗಾಬರಿಗೊಂಡ ಘಟನೆ ನಡೆದಿದೆ.

LEAVE A REPLY

Please enter your comment!
Please enter your name here