







ಕಡಬ: ಅಸೌಖ್ಯದಿಂದ ಬಳಲುತ್ತಿರುವ ಹರೀಶ್ ನಾಯ್ಕ ಕೊರತ್ತಿಗುರಿ ಅವರಿಗೆ ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಬೈಲಂಗಡಿ, ಹಾಗೂ ರೋಹಿತ್ ಗೌಡ ಪಣೆಮಜಲು ಇವರ ನೇತೃತ್ವದಲ್ಲಿ ಊರಿನ ಮಿತ್ರರಿಂದ ಸಂಗ್ರಹಿಸಿದ ಧನಸಹಾಯವನ್ನು ಫೆ.13ರಂದು ಕಡಬ ಬೈಲಂಗಡಿ ಎಂಬಲ್ಲಿ ನೀಡಲಾಯಿತು.


ಕೋಡಿಂಬಾಳ ಗ್ರಾಮ ಕೊರತ್ತಿಗುರಿ ನಿವಾಸಿ ಕುಶಾಲಪ್ಪ ನಾಯ್ಕ ಹಾಗೂ ರಾಧ ದಂಪತಿಗಳ ಪುತ್ರ ಹರೀಶ್ ನಾಯ್ಕ ( 42ವರ್ಷ) ಇವರು ತೀವ್ರ ಅಸೌಖ್ಯದಿಂದ ಬಳಲುತ್ತಿದ್ದು ಇವರಿಗೆ ಆಸ್ಪತ್ರೆಯ ವೆಚ್ಚವನ್ನು ಹರೀಶ್ ರವರ ಮಿತ್ರರು ಹಾಗೂ ಊರಿನ ದಾನಿಗಳಿಂದ ಸಂಗ್ರಹಿಸಲಾದ ರೂ 33500/- ಧನಸಹಾಯವನ್ನು ನೀಡಲಾಯಿತು.



ಈ ಸಂದರ್ಭದಲ್ಲಿ ಕಡಬ ಪಟ್ಟಣ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ ಬೈಲಂಗಡಿ, ರೋಹಿತ್ ಗೌಡ ಪಣೆಮಜಲು,ಕೃಷ್ಷಪ್ಪ ನಾಯ್ಕ ಪುಳಿಕುಕ್ಕು ಪ್ರಮುಖರಾದ ಗಂಗಯ್ಯ ನಾಯ್ಕ ಇನ್ಸ್ಪೆಕ್ಟರ್ ಪಾಂಡೇಶ್ವರ ಮಂಗಳೂರು ,ಕೊರಗಪ್ಪ ಗೌಡ ಕಲ್ಲರ್ಪೆ ಪಿಜಕ್ಕಳ, ಶೇಖರ ಪೂಜಾರಿ ಬೈಲಂಗಡಿ, ಬಾಲಕೃಷ್ಣ ನಾಯ್ಕ ಉಜಿರುಪಾದೆ, ಚಂದ್ರಕಾಂತ ಮಜ್ಜೆಗುಡ್ಡೆ, ಆನಂದ ಗೌಡ ಕೋಂಕ್ಯಾಡಿ, ಸುದೀರ್ ಪಣೆಮಜಲು,ಮುರಳಿ ಎಮ್ ಮೂರಾಜೆ, ಶಾಮ್ ತೋಮಸ್ ಪಿಜಕ್ಕಳ, ನಿವೃತ್ತ ಶಿಕ್ಷಕರಾದ ಪೂವಪ್ಪ ಗೌಡ ಪಿಜಕ್ಕಳ,ಬಾಬು ಗೌಡ ಬಚಿರಡ್ಕ,ಸುಂದರ ಮುಗೇರ ಪಿಜಕ್ಕಳ, ಸೋಮಪ್ಪ ಗೌಡ ಪಟ್ನಾ,ನಾರಾಯಣ ನೇಲ್ಯಡ್ಕ,ಶೇಷಪ್ಪ ಗೌಡ ಕೇವಳ,ಶೇಖರ ಗೌಡ ಪಾಲೋಳಿ,ರಾಘವ ಆಚಾರಿ ಪಾಲೋಳಿ,ಹರಿಪ್ರಸಾದ್ ಪಣೆಮಜಲು, ಹರೀಶ್ ನೇಲ್ಯಡ್ಕ,ಕೊರಗಪ್ಪ ಮುಗೇರ ಪಿಜಕ್ಕಳ, ಗಂಗಾಧರ ಗೌಡ ಕುತ್ಯಾಡಿ,ಸಂಜಯ್ ಮೂರಾಜೆ,ಸೂರಪ್ಪ ಗೌಡ ಕೆರೆಮುದೇಲು,ಸಂಜೀವ ನಾಯ್ಕ ಕೊರತ್ತಿಗುರಿ,ಆನಂದ ಪೂಜಾರಿ ಪಿಜಕ್ಕಳ, ಈಶ್ವರ ಗೌಡ ಅಮೈ,ಗಣೇಶ್ ಗೌಡ ಪಣೆಮಜಲು, ಸುಂದರ ಗೌಡ ಪಾಲೋಳಿ, ಮುಂತಾದವರು ಉಪಸ್ಥಿತಿತರಿದ್ದರು.










