ಅಡೂರು ಕ್ಷೇತ್ರ ವಾರ್ಷಿಕ ಜಾತ್ರೋತ್ಸವ, ಶ್ರೀ ಮಹಾಗಣಪತಿ, ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವ, ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಅಡೂರು ಮಹತೋಭಾರ ಮಹಾಲಿಂಗೇಶ್ವರ ಶ್ರೀ ಮಹಾವಿಷ್ಣು ವಿನಾಯಕ ಕ್ಷೇತ್ರದ ವಾರ್ಷಿಕ ಜಾತ್ರೋತ್ಸವ ಮತ್ತು ಶ್ರೀ ಮಹಾಗಣಪತಿ ಮತ್ತು ಶ್ರೀ ಮಹಾವಿಷ್ಣು ದೇವರ ಪುನರ್ ಪ್ರತಿಷ್ಠಾ ಕಲಶೋತ್ಸವವು ಮಾ.02ರಂದು ಗೊನೆ ಕಡೆದು ಮಾ.11ರಂದು ದ್ವಜಾರೋಹಣವಾಗಿ ಮಾ.25ರ ತನಕ ನಡೆಯಲಿದೆ. ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಇತ್ತೀಚೆಗೆ ಕ್ಷೇತ್ರದಲ್ಲಿ ನಡೆದ ಉತ್ಸವ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.

ಜಾತ್ರೋತ್ಸವದ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಅಧ್ಯಕ್ಷ ಅತ್ತನಾಡಿ ರಾಮಚಂದ್ರ ಮಣಿಯಾಣಿಯವರು ನಿರ್ವಹಿಸಿದ್ದು, ಸರ್ವಸದಸ್ಯರ ಸಹಕಾರವನ್ನು ಬಯಸಿದರು. ಸಭೆಯಲ್ಲಿ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಎ. ಗೋಪಾಲ ಮಣಿಯಾಣಿ, ಕ್ಷೇತ್ರದ ಪವಿತ್ರ ಪಾಣಿ ರಾಧಾಕೃಷ್ಣ ಭಾರಿತ್ತಾಯ, ಬೆಳ್ಳಿಪ್ಪಾಡಿ ಸದಾಶಿವ ರೈ ಹಾಗೂ ಕ್ಷೇತ್ರದ ಮ್ಯಾನೇಜರ್ ಗಂಗಾಧರ್ ರಾವ್ ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.


ಸಭೆಯಲ್ಲಿ ಪಾರಂಪರಿಕ ಮನೆಯ ಸಲಹಾ ಸಮಿತಿ ಸದಸ್ಯರು, ಜೀರ್ಣೋದ್ಧಾರ ಸಮಿತಿ ಸದಸ್ಯರು, ಜಾತ್ರೋತ್ಸವ ಸಮಿತಿ ಸದಸ್ಯರು, ವಿವಿಧ ಪ್ರಾದೇಶಿಕ ಸಮಿತಿ ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು. ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿ ಚಂದ್ರಶೇಖರ ರಾವ್ ಸ್ವಾಗತಿಸಿ, ಉತ್ಸವ ಸಮಿತಿಯ ಕಾರ್ಯದರ್ಶಿ ಕಾಂತಡ್ಕ ಗಂಗಾಧರ ರಾವ್ ವಂದಿಸಿದರು.

LEAVE A REPLY

Please enter your comment!
Please enter your name here