ಚಾರ್ವಾಕ ಶಾಲಾ ವಿದ್ಯಾರ್ಥಿಗಳಿಗೆ ಜೇನುಕೃಷಿ ಪ್ರಾತ್ಯಕ್ಷಿಕೆ, ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಕಾರ್ಯಾಗಾರ

0

ಕಾಣಿಯೂರು: ಪ್ರಕೃತಿಯೊಂದಿಗೆ ನೈಜ ಶಿಕ್ಷಣ ಎಂಬ ಧ್ಯೇಯದೊಂದಿಗೆ ಚಾರ್ವಾಕ ಸ. ಉ. ಹಿ. ಪ್ರಾ. ಶಾಲೆಯ ಭೂಮಿ ಇಕೋ ಕ್ಲಬ್ ವತಿಯಿಂದ ಚಾರ್ವಾಕ ಶಾಲೆಯ ವಿದ್ಯಾರ್ಥಿಗಳು ಫೆ.14ರಂದು ಚಾರ್ವಾಕ ಶಾಲಾ ಎಸ್ ಡಿ ಎಂ ಸಿ ಸದಸ್ಯರು, ಪ್ರಗತಿಪರ ಕೃಷಿಕರಾದ ವಿಶ್ವನಾಥ ಕಂಚನರವರ ಮನೆಭೇಟಿ ನಡೆಸಿದರು. ಪ್ರಾಕೃತಿಕ ಸಮತೋಲನದಲ್ಲಿ ಬಹುಮುಖ್ಯ ಪಾತ್ರ ವಹಿಸುವ ಜೇನುಕೃಷಿಯ ಬಗ್ಗೆ ವಿಶ್ವನಾಥ ಕಂಚನರವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ನೀಡಿದರು.

ಜೇನುಪೆಟ್ಟಿಗೆ ಜೋಡಣೆ, ಜೇನುತುಪ್ಪ ತಯಾರಿ ಮತ್ತದರ ಸಂಗ್ರಹಣೆ, ಜೇನ್ನೊಣಗಳ ಸಹಬಾಳ್ವೆಯ ಕುರಿತಂತೆ ನೈಜ ಅವಲೋಕನ ನಡೆಯಿತು. ಇದರೊಂದಿಗೆ ಮಲ್ಲಿಗೆ ಕೃಷಿಯ ಬಗ್ಗೆ ಮಾಹಿತಿ ಪಡೆಯಲಾಯಿತು. ಆಗ ತಾನೇ ಪಡೆದ ತಾಜಾ ಜೇನುತುಪ್ಪವನ್ನು ಸವಿಯುವುದರೊಂದಿಗೆ ವಿದ್ಯಾರ್ಥಿಗಳು ಜೇನುಹುಳಗಳ ಪರಿಶ್ರಮದ ಬಾಳ್ವೆಯ ಬಗ್ಗೆ ಅರಿತುಕೊಂಡರು. ವಿಶ್ವನಾಥ ಕಂಚನ ಅವರ ಪತ್ನಿ ಶೋಕ್ಷಿಣಿ, ತಾಯಿ ದೇವಕಿ ಕಂಚನರವರು ಮಾಹಿತಿ ನೀಡುವಲ್ಲಿ ಸಹಕರಿಸಿದರು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಗುರು ರಾಮೇಶಿ, ಎಸ್. ಎಸ್ ಡಿ ಎಂ ಸಿ ಸದಸ್ಯರಾದ ಕುಸುಮಾಧರ ಗೌಡ ಇಡ್ಯಡ್ಕ, ಸಹಶಿಕ್ಷಕರಾದ ಚೆನ್ನಪ್ಪ ಗೌಡ, ಆಶಾಲತಾ,ನಯನ, ಶೋಭಾ ಮತ್ತು ಶ್ವೇತಾರವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here