







ಕಡಬ: ಫೆ.16ರಂದು ನಿಧನರಾದ ನಿವೃತ್ತ ಮುಖ್ಯಶಿಕ್ಷಕ, ಸಾಮಾಜಿಕ ಮುಖಂಡ ಕಡಬ ಗ್ರಾಮದ ಪಿಜಕ್ಕಳ ನಿವಾಸಿ ಸಾಂತಪ್ಪ ಗೌಡರ ನಿಧನಕ್ಕೆ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘ ಸಂತಾಪ ಸೂಚಿಸಿದೆ.


ಸಾಂತಪ್ಪ ಗೌಡ ಅವರು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘ ಪ್ರಾಯೋಜಿತ ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಮಾಜಿ ನಿರ್ದೇಶಕರೂ, ಕಡಬ ಶಾಖಾ ಸಲಹಾ ಸಮಿತಿ ಮಾಜಿ ಅಧ್ಯಕ್ಷರೂ ಆಗಿದ್ದರು. ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಚಿದಾನಂದ ಬೈಲಾಡಿ, ಉಪಾಧ್ಯಕ್ಷರಾದ ರಾಮಕೃಷ್ಣ ಗೌಡ ಯು.ಪಿ., ನಿರ್ದೇಶಕರಾದ ಪ್ರವೀಣ್ ಕುಂಟ್ಯಾನ, ಪುತ್ತೂರು ಮಾತೃ ಸಂಘದ ಅಧ್ಯಕ್ಷರಾದ ಸುಂದರ ಗೌಡ ನಡುಬೈಲು, ಸಂಘದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಧರ ಗೌಡ ಕಣಜಾಲು, ಶಾಖಾ ವ್ಯವಸ್ಥಾಪಕ ಶಿವಪ್ರಸಾದ್, ಮಾಜಿ ವ್ಯವಸ್ಥಾಪಕ ಧರ್ಮರಾಜ್ ಕೆ., ಹಾಗೂ ಯಶ್ವಿತ್ ಮತ್ತಿತರರು ಸಾಂತಪ್ಪ ಗೌಡ ಪಿಜಕ್ಕಳ ಅವರ ಮೃತದೇಹದ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.













