ವಿದ್ಯುತ್ ಚಾಲಿತ ವಾಹನಗಳ ಶೋರೂಂ ಕೋರಲ್ ಎಂಟರ್ಪ್ರೈಸ್ ನ ಶಾಖೆ ಎಪಿಎಂಸಿ ರಸ್ತೆ ಆಲ್ಫಾ ಕಟ್ಟಡದಲ್ಲಿ ಶುಭಾರಂಭ

0

ಪುತ್ತೂರು: ಉಪ್ಪಿನಂಗಡಿ ರಸ್ತೆಯ 34ನೇ ನೆಕ್ಕಿಲಾಡಿ ಬೇರಿಕೆ ಬಸ್ಸು ನಿಲ್ದಾಣದ ಎದುರುಗಡೆಯ ಎವ್ಲಿನ್ ಗ್ಯಾಲರಿ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ವಿದ್ಯುತ್ ಚಾಲಿತ ವಾಹನಗಳ ಶೋರೂಂ ಸಂಪೂರ್ಣ್ ಬ್ರಾಂಡ್ ನ ಕೋರಲ್ ಎಂಟರ್ಪ್ರೈಸ್ ನ ಪ್ರಥಮ ಶಾಖೆ ಪುತ್ತೂರು ಎಪಿಎಂಸಿ ರಸ್ತೆಯ ಆಲ್ಫಾ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಪುತ್ತೂರು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಪವಿತ್ರ ಜಲ ಸಿಂಪಡಿಸಿ ಆಶೀರ್ವಚಿಸಿ ಮಾತನಾಡಿ, ಉದ್ಯಮದಲ್ಲಿ ಗುಣಮಟ್ಟದ ಸೇವೆಯನ್ನು ಯಾರು ಸಲ್ಲಿಸುತ್ತಾರೋ ಅವರು ಉದ್ಯಮದಲ್ಲಿ ಯಶಸ್ಸನ್ನು ಗಳಿಸುತ್ತಾರೆ. ಹಾಗೆಯೇ ವಿದ್ಯುತ್ ಚಾಲಿತ ವಾಹನಗಳ ಉದ್ಯಮವನ್ನು ಆರಂಭಿಸಿರುವ ಕೋರಲ್ ಎಂಟರ್ಪ್ರೈಸ್ ಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕಟ್ಟಡ ಮಾಲಕರ ಪತ್ನಿ ನತಾಲಿಯಾ ಮಸ್ಕರೇನ್ಹಸ್, ಕೋರಲ್ ಎಂಟರ್ಪ್ರೈಸ್ ಮುಖ್ಯಸ್ಥರಾದ‌ ಪ್ರವೀಣ್ ಬಿಳಿಯೂರು, ಮೇಬಲ್ ಪ್ರವೀಣ್ ಬಿಳಿಯೂರು, ವಿನ್ಸೆಂಟ್ ತಾವ್ರೋ ಸಾಮೆತ್ತಡ್ಕ ಸಹಿತ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here