ಉಪ್ಪಿನಂಗಡಿ: ಅಕ್ರಮ ಮರಳು ದಾಸ್ತಾನು : ಪೊಲೀಸ್ ದಾಳಿ ; 30 ಟನ್ ಮರಳು, ದೋಣಿ ಸಹಿತ ಸೊತ್ತುಗಳು ವಶ

0

ಪುತ್ತೂರು: ಪುತ್ತೂರು ತಾಲೂಕು, ಬಜತ್ತೂರು ಗ್ರಾಮದ ವಳಾಲು ಪ್ರದೇಶದ ನೇತ್ರಾವತಿ ನದಿ ದಂಡೆಯಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದು, 30 ಟನ್ ಮರಳು ವಶಪಡಿಸಿಕೊಂಡಿದ್ದಾರೆ.

ಫೆ.17ರಂದು ಮಧ್ಯಾಹ್ನ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪ ನಿರೀಕ್ಷಕರಾದ ಸುತೇಶ್ ಕೆ.ಪಿ. ಮತ್ತು ಸಿಬ್ಬಂದಿಗಳು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ. ಗಣಿ ಇಲಾಖೆಯ ಪರವಾನಿಗೆ ಇಲ್ಲದೆ ಅಕ್ರಮವಾಗಿ ನದಿ ತೀರದಲ್ಲಿ ಮರಳು ದಾಸ್ತಾನು ಮಾಡಿರುವುದನ್ನು ಪತ್ತೆ ಹಚ್ಚಿದ ಪೊಲೀಸರು ಕಾರ್ಮಿಕರನ್ನು ವಿಚಾರಣೆ ನಡೆಸಿದ್ದು, ಜೈನುದ್ಧೀನ್ ಎಂಬಾತನ ಸೂಚನೆಯಂತೆ ಮರಳು ದಾಸ್ತಾನು ಮಾಡಿದ್ದೇವೆಂದು ಸ್ಥಳದಲ್ಲಿದ್ದ ಕಾರ್ಮಿಕರು ತಿಳಿಸಿರುವುದಾಗಿ ತಿಳಿದು ಬಂದಿದೆ.

ದಾಸ್ತಾನು ಮಾಡಿದ್ದ 30ಟನ್ ಅಕ್ರಮ ಮರಳು, ಮರಳುಗಾರಿಕೆಗೆ ಬಳಸುತ್ತಿದ್ದ ಒಂದು ದೋಣಿ, ನಾಲ್ಕು ಹಾರೆಗಳು, ಹನ್ನೊಂದು ಕಬ್ಬಿಣದ ಬಕೆಟುಗಳು, ಹತ್ತು ಪ್ಲಾಸ್ಟಿಕ್ ಬಕೆಟ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬಜತ್ತೂರು ಗ್ರಾಮದ ನಿವಾಸಿ ಇದಿನಬ್ಬ ಎಂಬವರ ಪುತ್ರ ಜೈನುದ್ಧೀನ್ ಎಂಬಾತನ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಅ.ಕ್ರ: 23/2026 ಕಲಂ : 44 KARNATAKA MINOR MINERAL CONSISTENT RULE 1994& ಕಲಂ 4(1),4(1A),21(1)(A) (MINES AND MINERALS REGULATION OF DEVELOPMENT) ACT 1957, & ಕಲಂ 303(2) BNS-2023ರಂತೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here