ಕುದ್ಮಾರು ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ, ಕೊರಗಜ್ಜ ದೈವದ ನೇಮೋತ್ಸವಕ್ಕೆ ಗೊನೆ ಮುಹೂರ್ತ

0

ಕಾಣಿಯೂರು : ಕುದ್ಮಾರು ಗ್ರಾಮದ ಬೇರಿಕೆ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ಮತ್ತು ಕೊರಗಜ್ಜ ದೈವಸ್ಥಾನ ಬೇರಿಕೆ, ಆದಿಮುಗೇರ್ಕಳ ದೈವಸ್ಥಾನ ಟ್ರಸ್ಟ್ ಬೇರಿಕೆ ವತಿಯಿಂದ ಫೆ 21, 22ರಂದು ನಡೆಯಲಿರುವ ಶ್ರೀ ನಾಗಬ್ರಹ್ಮ ಆದಿ ಮುಗೇರ್ಕಳ ದೈವದ ಹಾಗೂ ಕೊರಗಜ್ಜ ದೈವದ ನೇಮೋತ್ಸವಕ್ಕೆ ಗೊನೆ ಮುಹೂರ್ತ ಫೆ 15ರಂದು ನಡೆಯಿತು.

ಅಭಿವೃದ್ಧಿ ಸಮಿತಿ ಅಧ್ಯಕ್ಷ ಉಮೇಶ್ ಕೆ.ಎನ್ ಕಾರ್ಲಾಡಿ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ನೂಜಿ, ಕಾರ್ಯದರ್ಶಿ ರಮೇಶ್ ಕೆ.ಎನ್ ಕಾರ್ಲಾಡಿ, ಜತೆ ಕಾರ್ಯದರ್ಶಿ ಸುರೇಶ್ ಎರ್ಕಮೆ, ಕೋಶಾಧಿಕಾರಿ ಕುಂಞಣ್ಣ ನಾಯ್ಕ, ಸದಸ್ಯ ನೇಮಿರಾಜ್, ಆಡಳಿತ ಸಮಿತಿ ಅಧ್ಯಕ್ಷ ರಮೇಶ್ ಬೇರಿಕೆ, ಮೊಕ್ತೇಸರ ಹರೀಶ್ ಬೇರಿಕೆ, ಶೀನಪ್ಪ ಬರೆಪ್ಪಾಡಿ, ಶೀನ ಅನವುಗುಂಡಿ, ಚಿದಾನಂದ ಬೇರಿಕೆ, ಅಜಿತ್ ಕೂಟೇಲು, ವರುಣ್ ಕಾರ್ಲಾಡಿ, ಸಾತ್ವಿಕ್ ಕಾರ್ಲಾಡಿ, ಬಾಲಕೃಷ್ಣ ಗೌಡ ಕೆಲೆಂಬೀರಿ, ಪುನೀತ್ ಕೆಲಂಬೀರಿ, ವನಜಾಕ್ಷಿ ಕಾರ್ಲಾಡಿ, ಗಿರಿಜಾ ಬೇರಿಕೆ, ಸಾಕ್ಷಿ ಕಾರ್ಲಾಡಿ, ಯಕ್ಷಿತ್ ಕಾರ್ಲಾಡಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here