







ಪುತ್ತೂರು : ಸವಣೂರು ಗ್ರಾಮದ ಬೇರಿಕೆಯಿಂದ ಸವಣೂರುಗುತ್ತು ಹೋಗುವ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯರವರ ವಿಶೇಷ ಅನುದಾನ 10 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.



ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಸವಣೂರು ಸಿ ಎ ಬ್ಯಾಂಕ್ ಅಧ್ಯಕ್ಷ ತಾರಾನಾಥ ಕಾಯರ್ಗ, ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ಸುಳ್ಯ ಮಂಡಲ ಮಹಿಳಾಮೋರ್ಚಾ ಅಧ್ಯಕ್ಷೆ ಇಂದಿರಾ ಬಿ ಕೆ , ಸವಣೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು ಸದಸ್ಯರಾದ ತೀರ್ಥರಾಮ ಕೆಡೆಂಜಿ ಚಂದ್ರಾವತಿ ಸುಣ್ಣಾಜೆ ಇಂದಿರಾ ಬೇರಿಕೆ ಯಶೋಧ ನೂಜಾಜೆ ಬಾಬು ಎನ್ ಮಾಜಿ ಸದಸ್ಯೆ ಗಾಯತ್ರಿ ಬರಮೇಲು, ಪ್ರಮುಖರಾದ ಸುಪ್ರೀತ್ ರೈ ಖಂಡಿಗ, ವೆಂಕಪ್ಪ ಶೆಟ್ಟಿ ಸವಣೂರು ಗುತ್ತು , ಪ್ರಜ್ವಲ ಕೆ ಆರ್ , ಶ್ರೀಧರ ಸುಣ್ಣಾಜೆ ರಾಮಕೃಷ್ಣ ಪ್ರಭು, ಅನಿತಾ ಲಕ್ಷ್ಮಣ ಗೌಡ ಬೇರಿಕೆ, ವೇದಾವತಿ ದಯಾನಂದ ಬೇರಿಕೆ, ಆಚಲಾ ಎಸ್ ರೈ ಗೀತಾ ಬೇರಿಕೆ, ಜೋಗಿ ಬೇರಿಕೆ ರವಿ ಬೇರಿಕೆ, ಲಲಿತಾ ಬೇರಿಕೆ ಮಧುಚಂದ್ರ , ಬಾಬು ದೇವಸ್ಯ ಹಾಗೂ ಸ್ಥಳೀಯಯರು ಉಪಸ್ಥಿತರಿದ್ದರು. ಸವಣೂರು ಬೂತ್ 65 ರ ಕಾರ್ಯದರ್ಶಿ ಸತೀಶ್ ಬಲ್ಯಾಯ ಸ್ವಾಗತಿಸಿ ಬೂತ್ ಅಧ್ಯಕ್ಷ ತೀರ್ಥರಾಮ ಕೆಡೆಂಜಿ ವಂದಿಸಿದರು.













