







ಅಭಿವೃದ್ಧಿ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅಗತ್ಯ – ಭಾಗೀರಥಿ ಮುರುಳ್ಯ


ಸವಣೂರು: ಅಭಿವೃದ್ಧಿ ಕಾರ್ಯದಲ್ಲಿ ಸಾರ್ವಜನಿಕರ ಸಹಕಾರ ಅತ್ಯಗತ್ಯ. ರಸ್ತೆ ಅಭಿವೃದ್ಧಿ ಸಮಯದಲ್ಲಿ ರಸ್ತೆಯ ಅಂಚಿನಲ್ಲಿರುವ ಜಾಗದವರು ಯಾವುದೇ ತಕರಾರು ಮಾಡದೇ ಸಹಕರಿಸಬೇಕು.ಎಲ್ಲರೂ ಜತೆಯಾಗಿ ಸಾಗಿದಾಗ ಗ್ರಾಮಾಭಿವೃದ್ದಿ ಸಾಧ್ಯ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.



ಅವರು ಪಾಲ್ತಾಡಿ ಗ್ರಾಮದ ಹಸಂತಡ್ಕ -ಬೇರಿಕೆ ರಸ್ತೆಯ ಅಭಿವೃದ್ಧಿಗೆ ಹಾಗೂ ಮಾಡತ್ತಾರು ಬೊಳಿಯಾಲ – ನಳೀಲು ಸಂಪರ್ಕ ರಸ್ತೆಯ ಅಭಿವೃದ್ದಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

ಸವಣೂರು ಗ್ರಾ.ಪಂ.ವತಿಯಿಂದಲೂ ಸದಸ್ಯರ ಸಹಕಾರದಿಂದ ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾರ್ಯವಾಗಿದೆ.ಅವರಿಗೂ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಸವಣೂರು ಗ್ರಾ.ಪಂ.ಅಧ್ಯಕ್ಷೆ ಸುಂದರಿ ಬಿ.ಎಸ್.,ಉಪಾಧ್ಯಕ್ಷೆ ಜಯಶ್ರೀ ಕುಚ್ಚೆಜಾಲು, ಸದಸ್ಯರಾದ ತಾರಾನಾಥ ಬೊಳಿಯಾಲ, ಭರತ್ ರೈ ,ಚೇತನಾ ಪಾಲ್ತಾಡಿ, ಹರೀಶ್ ಕೆ.ಜಿ.,ಗಿರಿಶಂಕರ ಸುಲಾಯ,ಯಶೋಧಾ ನೂಜಾಜೆ, ವಿನೋದಾ ರೈ ,ಸತೀಶ್ ಅಂಗಡಿಮೂಲೆ, ಹರಿಕಲಾ ರೈ ಕುಂಜಾಡಿ,ಮಾಜಿ ಅಧ್ಯಕ್ಷೆ ಇಂದಿರಾ ಬಿ.ಕೆ.,ಮಾಜಿ ಉಪಾಧ್ಯಕ್ಷ ಪಿ.ಎನ್.ಕಿಟ್ಟಣ್ಣ ರೈ ,ಸದಸ್ಯ ದಿವಾಕರ ಬಂಗೇರ,ಪಾಲ್ತಾಡಿ ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್,ಮಾಜಿ ಸೈನಿಕ ಹಾಗೂ ಬಿಜೆಪಿ ಪಕ್ಷದ ಪ್ರಮುಖರಾದ ಸಂಜೀವ ಗೌಡ ಪಾಲ್ತಾಡಿ,ಜಯಪ್ರಶಾಂತ್ ಪಲ್ಲತಡ್ಕ,ಪದ್ಮಪ್ರಸಾದ್ ರೈ,ಚೇತನ್,ಬಾಲಕೃಷ್ಣ ಗೌಡ,ಕರುಣಾಕರ ಸಾಲಿಯಾನ್ ಕಲ್ಲಕಟ್ಟ, ಸುಬ್ರಹ್ಮಣ್ಯ ಪಾರ್ಲ ,ರಾಜೇಶ್ ಕೆಳಗಿನಮನೆ, ಬೂತ್ ಸಮಿತಿ ಅಧ್ಯಕ್ಷ ಶಿವಾನಂದ ಗೌಡ,ಬೂತ್ ಕಾರ್ಯದರ್ಶಿ ತಾರಾನಾಥ ,ಪ್ರಶಾಂತ್ ಆಚಾರ್ಯ, ಪುಷ್ಪಾವತಿ ಗೌಡ, ಛಾಯ ಚೇತನ್, ಸುಖೇಶ್, ವಿದ್ಯಾಧರ ಗೌಡ ಪಾರ್ಲ ಮೊದಲಾದವರಿದ್ದರು.









