ಬೆಟ್ಟಂಪಾಡಿ ಗುತ್ತು ಧರ್ಮಚಾವಡಿ, ಧರ್ಮದೈವ, ಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೇಮೋತ್ಸವದ ಗೊನೆಮುಹೂರ್ತ, ಚಪ್ಪರ ಮುಹೂರ್ತ

0

ಪುತ್ತೂರು: ಬೆಟ್ಟಂಪಾಡಿ ಗುತ್ತು ಧರ್ಮಚಾವಡಿ ಶ್ರೀಜಠಾಧಾರಿ ದೈವ, ಧರ್ಮದೈವ ಶ್ರೀವ್ಯಾಘ್ರಚಾಮುಂಡಿ, ಸಪರಿವಾರ ದೈವಗಳ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ದೈವಗಳ ನೇಮೋತ್ಸವ ಕಾರ್ಯಕ್ರಮ ಫೆ.25ರಿಂದ 28ರವರೆಗೆ ನಡೆಯಲಿದ್ದು ಇದರ ಗೊನೆಮುಹೂರ್ತ ಹಾಗೂ ಚಪ್ಪರ ಮುಹೂರ್ತ ಕಾರ್ಯಕ್ರಮ ಫೆ.18ರಂದು ನಡೆಯಿತು.

ಗೊನೆ ಮುಹೂರ್ತ:
ಬೆಳಿಗ್ಗೆ 8.15ಕ್ಕೆ ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಾರ್ಥನೆ ನಡೆದು ಬಳಿಕ ಬೆಟ್ಟಂಪಾಡಿ ಗುತ್ತು ಧರ್ಮಚಾವಡಿಯಲ್ಲಿ ಪ್ರಾರ್ಥನೆ ನಡೆಸಿ ಗುತ್ತು ಮನೆಯ ವಿನೋದ್ ಕುಮಾರ್ ರೈರವರು ಗೊನೆ ಮುಹೂರ್ತ ನೆರವೆರಿಸಿದರು.

ಚಪ್ಪರ ಮುಹೂರ್ತ:
ಗೊನೆ ಮುಹೂರ್ತ ಬಳಿಕ ಚಪ್ಪರ ಮುಹೂರ್ತ ನಡೆಯಿತು. ಬೆಟ್ಟಂಪಾಡಿ ಶ್ರೀಮಹಾಲಿಂಗೇಶ್ವರ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೆಸರರಾದ ವಿನೋದ್ ಕುಮಾರ್ ಬಲ್ಲಾಳ್ ಶಿವಗಿರಿ ಬೀಡುರವರು ಚಪ್ಪರ ಮುಹೂರ್ತ ನೆರವೇರಿಸಿದರು. ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ರಂಗನಾಥ ರೈ ಗುತ್ತು ಸ್ವಾಗತಿಸಿ ವಂದಿಸಿದರು.

ಬೆಟ್ಟಂಪಾಡಿ ಗುತ್ತು ಮನೆಯ ಮುಖ್ಯಸ್ಥರಾದ ಚಂದ್ರಾವತಿ ಮಂಜುನಾಥ ರೈ ಎ., ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಧಾಕೃಷ್ಣ ರೈ ಆನಾಜೆ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕಿಶೋರ್ ಶೆಟ್ಟಿ ಕೋರ್ಮಂಡ, ಸಂಚಾಲಕ ದಯಾನಂದ ರೈ ಕೋರ್ಮಂಡ, ಉಪಾಧ್ಯಕ್ಷ ಅಮೃತಪ್ರಸಾದ್ ರೈ ಗುತ್ತು, ಹಾಗೂ ವಿವಿಧ ಉಪ ಸಮಿತಿಗಳ ಸದಸ್ಯರಾದ ಶಿವಕುಮಾರ್ ಬಲ್ಲಾಳ್ ಬೀಡು, ನಾರಾಯಣ ಪೂಜಾರಿ ಕೋರ್ಮಂಡ, ರಾಮಣ್ಣ ಗೌಡ ಬಾರ‍್ತಕುಮೇರು, ಬಾಲಕೃಷ್ಣ ಮಣಿಯಾನಿ ತಲೆಪ್ಪಾಡಿ, ಜಗನ್ನಾಥ ರೈ ಗುತ್ತು, ಸಂತೋಷ್ ರೈ ಗುತ್ತು, ನಾಗೇಶ್ ರೈ ಮೂರ್ಕಾಜೆ, ರಮೇಶ್ ಗೌಡ ಬಳ್ಳಿತ್ತಡ್ಡ, ಮಣಿಕಂಠ ತಲೆಪ್ಪಾಡಿ, ಸತೀಶ್ ರೈ ಮೂರ್ಕಾಜೆ, ಪ್ರವೀಣ್ ರೈ ಬರೆ, ಸಂತೋಷ್ ರೈ ಮೂರ್ಕಾಜೆ, ಬಾಲಕೃಷ್ಣ ರೈ ಮೂರ್ಕಾಜೆ, ಮಹೇಶ್ ಕೋರ್ಮಂಡ, ನಿತಿನ್ ರೈ ಮೂರ್ಕಾಜೆ, ರಾಧಾಕೃಷ್ಣ ಬಳ್ಳಿತ್ತಡ್ಡ, ನವೀನ್ ರೆಂಜ, ದಾಮೋದರ ಮಾಲಡ್ಕ, ಕೃಷ್ಣಪ್ಪ ಗುಂಡ್ಯಡ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here