






ಸವಣೂರು: ವಿದ್ಯಾರಶ್ಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ Anti Women Harrasement Cell ನ ಸಹಯೋಗದೊಂದಿಗೆ ಗರ್ಭಾಶಯ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಜಲಕ್ಷ್ಮೀ ಎಸ್ ರೈ ಯವರು ಉದ್ಘಾಟಿಸಿದರು. ತಮ್ಮ ಭಾಷಣದಲ್ಲಿ ಅವರು ಮಹಿಳೆಯ ಆರೋಗ್ಯದ ಬಗ್ಗೆ ಜಾಗೃತಿ ಅತ್ಯಂತ ಮುಖ್ಯವೆಂದು ಹೇಳಿದರು.



ಮುಖ್ಯ ಅತಿಥಿಯಾಗಿ ಆಗಮಿಸಿದ್ದ Care & Safe of India ದ ಅಮಿತ ನಾಯಕ್ ಸ್ಯಾನಿಟರಿ ಪ್ಯಾಡ್ಗಳನ್ನು ಬಳಸುವುದರಿಂದ ಆಗುವಂತಹ ದುಷ್ಪರಿಣಾಮಗಳ ಬಗ್ಗೆ ತೀಳಿ ಹೇಳಿದರು. ವಿದ್ಯಾರ್ಥಿನಿಗಳಾದ ತೇಜಸ್ವಿನಿ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಆರಂಭಗೊಂಡಿತು. ಕು.ಕಲ್ಪನಾ ತೃತೀಯ ಬಿ.ಎ ಕಾರ್ಯಕ್ರಮವನ್ನು ನಿರೂಪಿಸಿದರು.
ವಿದ್ಯಾರ್ಥಿ ಸಂಯೋಜಕರಾದ ಕು. ಅಂಕಿತಾ ಸ್ವಾಗತ ಭಾಷಣವನ್ನು ಮಾಡಿದರು. ತೃತೀಯ ಬಿ.ಕಾಂನ ವಿದ್ಯಾರ್ಥಿನಿಯಾದ ಕು. ಅಸ್ಮಿತಾ ದನ್ಯವಾದ ಸಮರ್ಪಣೆ ಮಾಡಿದರು.Anti Women Harrasement Cell ನ ಸಂಯೋಜಕಿ ಪ್ರತಿಭಾ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರು ಹಾಗೂ ಮಹಿಳಾ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಸಂದೇಹಗಳನ್ನು ಕೇಳಿದರು. ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.












