ಕೇರಳ ವಿಧಾನಸಭಾ ಚುನಾವಣೆ : ಬಿಜೆಪಿಯಿಂದ ವೈಪಿನ್ ಗೆ ಪ್ರಭಾರಿಯಾಗಿ ಪ್ರಸನ್ನ ದರ್ಬೆ ನೇಮಕ

0

ತಿರುವನಂತಪುರಂ: ಕೇರಳ ವಿಧಾನಸಭಾ ಚುನಾವಣೆ ಕೆಲವೇ ತಿಂಗಳು ಬಾಕಿ ಉಳಿದಿದ್ದು ಬಿಜೆಪಿ ತಯಾರಿ ಆರಂಭಿಸಿದೆ. ಎರ್ನಾಕುಲಮ್ ಜಿಲ್ಲೆಯ ವೈಪಿನ್ ಕ್ಷೇತ್ರಕ್ಕೆ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಮಾಜಿ ಟ್ರಸ್ಟಿ,ಜಿಲ್ಲಾ ಬಿಜೆಪಿ ಪ್ರಕೋಷ್ಠ ಸಹ ಸಂಚಾಲಕ ಪ್ರಸನ್ನ ದರ್ಬೆಯವರನ್ನು ಬಿಜೆಪಿ ಚುನಾವಣೆ ಪ್ರಭಾರಿಯಾಗಿ ನೇಮಕಗೊಳಿಸಿದೆ.ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕೇರಳ ರಾಜ್ಯ ಸಹ ಉಸ್ತುವಾರಿ ಮತ್ತು ಕಾಸರಗೋಡು ಜಿಲ್ಲೆಗೆ ನಳಿನ್ ಕುಮಾರ್ ಕಟೀಲ್ ರನ್ನು ಚುನಾವಣೆ ಉಸ್ತುವಾರಿಯಾಗಿ ಈಗಾಗಲೇ ಪಕ್ಷ ಘೋಷಣೆ ಮಾಡಿದೆ.

LEAVE A REPLY

Please enter your comment!
Please enter your name here