ಕುಂಜೂರು ಪಂಜ ಸ. ಹಿ. ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಅಂಗವಾಗಿ ಉಚಿತ ದಂತ ಚಿಕಿತ್ಸಾ ಶಿಬಿರ 

0

ಬಡಗನ್ನೂರು: ಕುಂಜೂರುಪಂಜ ಸ. ಹಿ. ಪ್ರಾಥಮಿಕ ಶಾಲಾ ಅಮೃತ ಮಹೋತ್ಸವ ಅಂಗವಾಗಿ  ಅಂತರಾಷ್ಟ್ರೀಯ ಲಯನ್ಸ್‌ ಸೇವಾ ಸಂಸ್ಥೆ ಲಯನ್ಸ್ ಜಿಲ್ಲೆ 317-D ಲಯನ್ಸ್ ಕ್ಲಬ್ ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ (ರಿ.) ಪುತ್ತೂರು ಕೆ.ವಿ.ಜಿ. ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ಪೆ. 24 ರಂದು ಕುಂಜೂರುಪಂಜ .ಕ. ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಅವರಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಸುಳ್ಯ ಕೆ.ವಿ.ಜಿ. ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಡಾ. ಮೇಘನಾ ಎನ್.ಎಂ. ಲೆಕ್ಚರರ್ ದೀಪ ಪ್ರಜ್ವಲಿಸಿ ಮಾತನಾಡಿ ಶುಭ ಹಾರೖೆಸಿದರು. ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷೆ ಲ.ಪ್ರೇಮಲತಾ ರಾವ್, ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ವೇಧಿಕೆಯಲ್ಲಿ ಪುತ್ತೂರು ಅಸಹಾಯಕರ ಸೇವಾ ಟ್ರಸ್ಟ್ (ರಿ.) ನ ಅಧ್ಯಕ್ಷೆ ಲ ನಯನ ರೈ, ಪುತ್ತೂರು, ಲಯನ್ಸ್ ಕ್ಲಬ್, ಕಾರ್ಯದರ್ಶಿ ಲ। ಅರವಿಂದ ಭಗವಾನ್ , ಪುತ್ತೂರು ಲಯನ್ಸ್ ಕ್ಲಬ್,  ಕೋಶಾಧಿಕಾರಿ ಲ.ಸುಧಾಕರ,   ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ,ಬಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಶರೀಫ್ ಪಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾಭಿವೃದ್ದಿ ಸಮಿತಿ ಸದಸ್ಯರು ಮಕ್ಕಳ ಪೋಷಕರು, ಶಿಕ್ಷಕ ವೃಂದದವರು  ಅಕ್ಷರದಾಸೋಹ ಸಿಬ್ಬಂದಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಶಶಿಕಲಾ ಬಿ, ಸ್ವಾಗತಿಸಿದರು ಅತಿಥಿ ಶಿಕ್ಷಕಿ ಭಾರತಿ ವಂದಿಸಿದರು. ಶಿಬಿರವು ಬೆಳಿಗ್ಗೆ 9 ರಿಂದ ಮಧ್ಯಾಹ್ನ 1 ರತನಕ ನಡೆಯಿತು. ಶಿಬಿರದಲ್ಲಿ ದಂತ ಕುಳಿ ತುಂಬುವಿಕೆ, ಹಲ್ಲಿನ ಸ್ವಚ್ಛತೆ, ಹಲ್ಲು ಕೀಳುವಿಕೆ, ಕೃತಕ ದಂತ ಜೋಡಣೆ ಕ್ಯಾನ್ಸರ್ ತಪಾಸಣೆ ಮತ್ತು ಅರಿವು ಕಾರ್ಯಕ್ರಮ ಇತ್ಯಾದಿ ಚಿಕಿತ್ಸೆಗಳು ಲಭ್ಯವಿದ್ದವು ಸಮಾರು 150 ಕ್ಕೂ ಹೆಚ್ಚು ಜನರು ಇದರ ಸದುಪಯೋಗ ಪಡೆದುಕೊಂಡರು.

LEAVE A REPLY

Please enter your comment!
Please enter your name here