







ಬಡಗನ್ನೂರು: ಆದಿದೈವ ಧೂಮಾವತಿ, ಸಾಯನ ಬೈದ್ಯರ ಗುರುಪೀಠ ದೇಯಿ ಬೈದ್ಯೆತಿ, ಕೋಟಿ-ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.25ರಂದು ಪ್ರಾರಂಭವಾಗಿ ಮಾ.1ರ ವರೆಗೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನದೊಂದಿಗೆ ತೌಳವ ಪರಂಪರೆಯ ಅನುಸಾರ ನಡೆಯಲಿದ್ದು, ಇದರ ಅಂಗವಾಗಿ ಫೆ.25ರಂದು ಸಂಜೆ ಸ್ವಸ್ತಿ ಪುಣ್ಯಾಹ ಸ್ಥಳಶುದ್ಧಿ, ಸಾಮೂಹಿಕ ಪ್ರಾರ್ಥನೆ, ಉಗ್ರಾಣ ಮೂಹೂರ್ತ ನಡೆಯಿತು.



ಶ್ರೀ ಕ್ಷೇತ್ರ ಗೆಜ್ಜೆಗಿರಿ ದೇಯಿ ಬೈದೈತಿ, ಕೋಟಿ-ಚೆನ್ನಯ ಮೂಲಸ್ಥಾನ ಆಡಳಿತ ಸಮಿತಿ ಗೌರವಾಧ್ಯಕ್ಷ ಪೀತಾಂಬರ ಹೇರಾಜೆ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮೂಡಬಿದ್ರೆ ಶ್ರೀ ಶಿವಾನಂದ ತಂತ್ರಿಯವರ ನೇತೃತ್ವದಲ್ಲಿ ವೈದಿಕ ವಿಧಿ-ವಿಧಾನ ನೆರವೇರಿತು.



ಈ ಸಂಧರ್ಭದಲ್ಲಿ ಮೊತ್ತೇಸರ ಶ್ರೀಧರ ಪೂಚಾರಿ, ಟ್ರಸ್ಟಿಗಳಾದ ನಾರಾಯಣ ಮಚ್ಚಿನ, ನಿತ್ಯಾನಂದ ನಾವರ, ಅಮಂತ್ರಣ ಪರಿವಾರ ಟ್ರಸ್ಟಿನ ವಿಜಯಕುಮಾರ್ ಜೖೆನ್ ನಾವರ, ರವಿಂದ್ರ ಪೂಜಾರಿ ಗೆಜ್ಜೆಗಿರಿ ಲಕ್ಮ್ಮಣ ಕೋಟ್ಯಾನ್ ವಾಮಂಜೂರು ಸೇರಿದಂತೆ ಹಲವರು ಉಪಸ್ಥಿತರಿದ್ದರು.










