







ಪ್ರಹ್ಲಾದ್ ಮೋದಿ ಸಹಿತ ವಿವಿಧ ಗಣ್ಯರ ಆಗಮನ | ಸನ್ಮಾನ | ಡ್ಯಾನ್ಸ್ ಡ್ಯಾನ್ಸ್ ಗಾಣಿಗ ಟ್ರೋಫಿ |


ಪುತ್ತೂರು: ಗಾಣಿಗ ಯಾನೆ ಸಪಲಿಗರ ಸಂಘ ಪುತ್ತೂರು ದ.ಕ. ಇದರ ಆಶ್ರಯದಲ್ಲಿ ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲೆಗಳ ಸ್ವಜಾತಿ ಬಾಂಧವರ ಗಾಣಿಗ ಸಂಗಮ 2026 ಕಾರ್ಯಕ್ರಮವು ಮಾ.1ರಂದು ಬೆಳಗ್ಗಿನಿಂದ ಸಂಜೆಯ ತನಕ ಪುತ್ತೂರಿನ ಸಾಲ್ಮರ ಕೊಟೇಚಾ ಹಾಲ್ನಲ್ಲಿ ನಡೆಯಲಿದೆ ಎಂದು ಗಾಣಿಗ ಯಾನೆ ಸಪಲಿಗರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಲಕ್ಷ್ಮೀಪ್ರಸಾದ್ ಬೆಟ್ಟ ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.



ವಿಶೇಷವಾಗಿ ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾದ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಫೆ. 28ಕ್ಕೆ ಮಂಗಳೂರಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಅವರು ಮಾ.1ರಂದು ಬೆಳಗ್ಗೆ ನೇರವಾಗಿ ಶ್ರೀ ಲಕ್ಷ್ಮೀದೇವಿ ಬೆಟ್ಟಕ್ಕೆ ಆಗಮಿಸಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ 10 ಗಂಟೆಗೆ ನಡೆಯುವ ಕಾರ್ಯಕ್ರಮದ ಉದ್ಘಾಟನೆ ಮತ್ತು ಪ್ರಧಾನ ಭಾಷಣಕಾರರಾಗಿ ಸಾಪಲ್ಯ ಸೇವಾ ಸಂಘ ಮುಂಬೈ ಇದರ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಆಗಮಿಸಲಿದ್ದಾರೆ. ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾದ ಪ್ರಹ್ಲಾದ್ ದಾಮೋದರ್ ದಾಸ್ ಮೋದೀಜಿ, ಕರ್ನಾಟಕ ಕೆಪಿಸಿಸಿ ಉಪಾಧ್ಯಕ್ಷ, ವಿಧಾನ ಪರಿಷತ್ ಮಾಜಿ ಅಧ್ಯಕ್ಷ ವಿ.ಆರ್. ಸುದರ್ಶನ್ ಗೌರವ ಅತಿಥಿಗಳಾಗಿ ಆಗಮಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ಅಶೋಕ್ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಅಖಿಲ ಕರ್ನಾಟಕ ಗಾಣಿಗರ ಸಂಘ ಬೆಂಗಳೂರು ಇದರ ಎಂ. ಆರ್. ರಾಜಶೇಖರ ಗಾಣಿಗ, ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಅಖಿಲ ಕರ್ನಾಟಕ ಜ್ಯೋತಿ ನಗರ ವೈಶ್ಯ ಗಾಣಿಗ ಸಂಘದ ಅಧ್ಯಕ್ಷ ಪಿ.ಜಿ. ವಿಜಯ್ಕುಮಾರ್, ಗಿರಿಜಾ ವೆಲ್ಫೇರ್ ಅಸೋಸಿಯೇಶನ್ ಮುಂಬೈ ಇದರ ಅಧ್ಯಕ್ಷ, ಉದ್ಯಮಿ ವಸಂತ ಜಿ ಸಪಲ್ಯ ಮುಂಬೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಬಂಟ್ವಾಳ ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಹರ್ಷ ಬಿಲ್ಡರ್ಸ್ ಮಂಗಳೂರು ಇದರ ಹರೀಶ್ ಕುತ್ತಾರು, ಗಾಣಿಗ ಸಂಘ ಉಪ್ಪಿನಂಗಡಿ ಇದರ ಅಧ್ಯಕ್ಷ ಹರಿರಾಮಚಂದ್ರ, ಉದ್ಯಮಿ ಭುವನೇಶ್ ರಘು ಸಪಲ್ಯ ಪಾಣೆ ಮಂಗಳೂರು ಆಗಮಿಸಲಿರುವರು. ಅದಲ್ಲದೇ ಊರ ,ಪರವೂರ ಅತಿಥಿ ಗಣ್ಯರು ಆಗಮಿಸಲಿದಾರೆ ಎಂದವರು ಹೇಳಿದರು.

ಸಾಧಕರಿಗೆ ಸನ್ಮಾನ:
ಸಭಾ ಕಾರ್ಯಕ್ರಮದ ನಡುವೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸ್ವಜಾತಿ ಬಾಂಧವರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದೆ. ದೇಶ ಕಾಯುವ ವೀರ ಯೋಧರು, ರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಹಲವಾರು ಮಂದಿಯನ್ನು ಸನ್ಮಾನಿಸಲಾಗುವುದು. ವಿಶೇಷವಾಗಿ ಸಮಾಜದಲ್ಲಿ ಕಲೆಯನ್ನು ಉಳಿಸಿಕೊಂಡು ಬಂದಿರುವ ಕೊಂಬು/ ಕಹಳೆಯ ಸೇವೆ ಮಾಡುವವರನ್ನು ಗೌರವಿಸಲಾಗುವುದು ಎಂದು ಲಕ್ಷ್ಮೀಪ್ರಸಾದ್ ಬೆಟ್ಟ ಹೇಳಿದರು.
ಡ್ಯಾನ್ಸ್ & ಡ್ಯಾನ್ಸ್ ಗಾಣಿಗ ಟ್ರೋಫಿ 2026 :
ಸಮಾರಂಭದ ಮಧ್ಯಾಹ್ನ ಬಳಿಕ ಡ್ಯಾನ್ಸ್ ಆಂಡ್ ಡ್ಯಾನ್ಸ್ ಗಾಣಿಗ ಟ್ರೋಫಿ 2026 ನಡೆಯಲಿದೆ. ಸೆಮಿಕ್ಲಾಸಿಕಲ್, ಜಾನಪದ ನೃತ್ಯ, ಸಂಸ್ಕಾರಯುತವಾದ ಚಲನಚಿತ್ರ ಗೀತೆಯ ನೃತ್ಯಕ್ಕೆ ಅವಕಾಶ ನೀಡಲಾಗಿದ್ದು ಇದರಲ್ಲಿ ಪ್ರಥಮ ಬಹುಮಾನವಾಗಿ ರೂ.10 ಸಾವಿರ ಮತ್ತು ಗಾಣಿಗ ಟ್ರೋಫಿ, ದ್ವಿತೀಯ ರೂ.5 ಸಾವಿರ ಮತ್ತು ಗಾಣಿಗ ಟ್ರೋಫಿ, ತೃತೀಯ ರೂ.3 ಸಾವಿರ ಮತ್ತು ಗಾಣಿಗ ಟ್ರೋಫಿ ನೀಡಲಾಗುವುದು. ಸಂಜೆ ಸರಳ ಸಮಾರಂಭದಲ್ಲಿ ಸಮಾಜದ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಮತ್ತು ಬಹುಮಾನ ವಿತರಣೆ ನಡೆಯಲಿದೆ. ಬಳಿಕ ದಿನೇಶ್ ಕೊಡಪದವರು ಅವರಿಂದ ಯಕ್ಷ ತೆಲಿಕೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂದೀಪ್ ನೆಲ್ಲಿಕಟ್ಟೆ ತಿಳಿಸಿದರು.
ಪ್ರತಿ ಮನೆಯ ಸಂಪರ್ಕ:
ಗಾಣಿಗ ಯಾನೆ ಸಪಲಿಗರ ಸಂಘವನ್ನು ಇತ್ತೀಚೆಗಷ್ಟೆ ಪುತ್ತೂರಿನಲ್ಲಿ ರಚನೆ ಮಾಡಲಾಗಿದ್ದು, ಸಂಘದ ಚುಟವಟಿಕೆಗೆ ಪೂರಕವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಕಾರ್ಯಕ್ರಮದ ಯಶಸ್ವಿಗಾಗಿ ಪ್ರತಿ ಮನೆ ಮನೆ ಸಂಪರ್ಕ ಮಾಡುತ್ತಿದ್ದು, ಸಮಾಜ ಬಾಂಧವರ ಮನೆಯಲ್ಲಿ ಸಂಖ್ಯೆಯನ್ನು ಪಟ್ಟಿ ಮಾಡುತ್ತಿದ್ದೇವೆ. ಪುತ್ತೂರಿನಲ್ಲಿ ಈಗಾಗಲೇ ಸುಮಾರು 2ಸಾವಿರಕ್ಕೂ ಮೇಲ್ಪಟ್ಟು ಸಮಾಜ ಬಾಂಧವರಿದ್ದಾರೆ ಎಂದು ಸಂಘದ ಕಾರ್ಯದರ್ಶಿ ಜಯಂತ ಉರ್ಲಾಂಡಿ ಅವರು ತಿಳಿಸಿದ್ದಾರೆ.
ಬಡತನ ನಿರ್ಮೂಲನೆ, ಆರೋಗ್ಯ, ವಿದ್ಯಾಭ್ಯಾಸದ ಗುರಿ:
ಸಾಪಲ್ಯ ಸೇವಾ ಸಂಘ ಮುಂಬೈಯ ಸದಸ್ಯರು ಮತ್ತು ಪುತ್ತೂರು ಸಂಘದ ಗೌರವ ಸಲಹೆಗಾರರಾಗಿರುವ ಕಿರಣ್ ಕುಮಾರ್ ಸಪಲ್ಯ ಕಲ್ಲೇಗ ಅವರು ಮಾತನಾಡಿ, ಸಮಾಜಬಾಂಧವರಲ್ಲಿ ಬಡತನ ನಿಮೂರ್ಲನೆ, ಆರೋಗ್ಯ, ವಿದ್ಯಾಭ್ಯಾಸದ ಗುರಿಯನ್ನು ಇಟ್ಟುಕೊಂಡು ಸಂಘ ಕೆಲಸ ಮಾಡಲಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಂಘದ ಮೂಲಕ ಸಂಪರ್ಕಿಸಿ ಅವರ ಸಮಸ್ಯೆಗಳಿಗೆ ಸಂಘದ ಮೂಲಕ ಸ್ಪಂಧನೆ ನೀಡುವ ಯೋಜನೆ ಹಮ್ಮಿಕೊಂಡು ಸಂಘಟನೆ ಬೆಳೆಯಲಿದೆ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಗಾಣಿಗ ಯಾನ ಸಪಲಿಗರ ಸಂಘದ ಉಪಾಧ್ಯಕ್ಷ ಪ್ರದೀಪ್ ಬೊಳ್ವಾರು, ಗೌರವ ಸಲಹೆಗಾರ ಹೇಮಚಂದ್ರ ಬೊಳ್ವಾರು ಉಪಸ್ಥಿತರಿದ್ದರು.
ಬೇಡಿಕೆಯ ಮನವಿ
ಗಾಣಿಗ ಯಾನೆ ಸಪಲಿಗರ ಸಂಘದ ಸಂಗಮ ಕಾರ್ಯಕ್ರಮದಲ್ಲಿ ಸರಕಾರದಿಂದ ಸಮಾಜಬಾಂಧವರಿಗೆ ವಿವಿಧ ಸೌಲಭ್ಯದ ಬೇಡಿಕೆ ಕುರಿತು ಮನವಿ ನೀಡಲಿದ್ದೇವೆ. ಮುಂದೆ ಸಮಾಜದ ಬಾಂದವರ ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾರ್ಥಿವೇತನ ಸೌಲಭ್ಯ ನೀಡುವ ಕುರಿತು ಮನವಿ ಮಾಡಲಾಗುವುದು.
ಲಕ್ಷ್ಮೀಪ್ರಸಾದ್ ಬೆಟ್ಟ

ಸೀರೆ ವಿತರಣೆ – ವಧೂ,ವರರ ಅನ್ವೇಷಣೆ
ಬೆಳಿಗ್ಗೆ 9ರಿಂದ 10ರ ಒಳಗೆ ಸಭಾಂಗಣದಲ್ಲಿ ಉಪಸ್ಥಿತರಿದ್ದ 20 ವರ್ಷದಿಂದ ಮೇಲ್ಪಟ್ಟ ಮಹಿಳೆಯರಿಗೆ ಉಚಿತ ಸೀರೆ ವಿತರಣೆ ನಡೆಯಲಿದೆ. ಸಭಾಂಗಣದಲ್ಲಿ ಇದರ ಜೊತೆಗೆ ವಧೂ ವರರ ಅನ್ವೇಷಣೆಯ ನೋಂದಾವಣೆ ನಡೆಯಲಿದೆ.










