






ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಕೋರ್ಜೆ ತರವಾಡು ಮನೆಯಲ್ಲಿ ಧರ್ಮದೈವ ಹಾಗೂ ಪರಿವಾರ ದೈವಗಳಿಗೆ ನೇಮೋತ್ಸವ ಕುಟುಂಬದ ಯಜಮಾನ ಮಾಯಿಲಪ್ಪ ಗೌಡ ಕೋರ್ಜೆ ತರವಾಡುನಲ್ಲಿ ಕುಟುಂಬದ ಹಿರಿಯರ ನೇತೃತ್ವದಲ್ಲಿ ಫೆ.21 ಮತ್ತು ಫೆ.22 ರಂದು ನಡೆಯಿತು.



ಫೆ.21ರಂದು ಬೆಳಿಗ್ಗೆ ನಾಗತಂಬಿಲ, ಗಣಪತಿ ಹವನ, ಹರಿಸೇವೆ, ಮುಡಿಪು ಶುದ್ಧೀಕರಣ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದು ರಾತ್ರಿ ಕಲ್ಲುರ್ಟಿ, ಪಂಜುರ್ಲಿ ನೇಮೋತ್ಸವ ನಡೆಯಿತು.




ಫೆ.22ರಂದು ಬೆಳಿಗ್ಗೆ ಧರ್ಮದೈವ ಶಿರಾಡಿ ದೈವದ ನೇಮ, ಗಂಧ ಪ್ರಸಾದ ವಿತರಣೆ, ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಕಾಲಾವಧಿ ತಂಬಿಲ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಕುಟುಂಬಸ್ಥರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.











