ಸವಣೂರು ಬೊಳ್ಳಿ ಬೊಲ್ಪು ತುಳುಕೂಟದಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಗಿರಿಶಂಕರ್ ಸುಲಾಯರಿಗೆ ಸನ್ಮಾನ

0


ಪುತ್ತೂರು: ಸವಣೂರು ಬೊಳ್ಳಿ-ಬೊಲ್ಪು ತುಳುಕೂಟದಿಂದ ಸ್ವಾಮಿ ವಿವೇಕಾನಂದ ರಾಜ್ಯ ಮಟ್ಟದ ಸದ್ಭಾವನಾ ಪ್ರಶಸ್ತಿ ಪುರಸ್ಕೃತರಾದ ಸಾಮಾಜಿಕ ಮುಂದಾಳು ಗಿರಿಶಂಕರ್ ಸುಲಾಯರವರನ್ನು ಸನ್ಮಾನಿಸಿ, ಗೌರವಿಸುವ ಸಮಾರಂಭ ಸವಣೂರು ಯುವಸಭಾಭವನದಲ್ಲಿ ಜರಗಿತು.

ಚಿತ್ರ- ಕುಕ್ಕೇಶ್ರೀ ಬರೆಪ್ಪಾಡಿ

ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದುರವರು ಗಿರಿಶಂಕರ್ ಸುಲಾಯರವರನ್ನು ಸನ್ಮಾಸಿ, ಮಾತನಾಡಿ ಗಿರಿಶಂಕರ್ ರವರು ಸಮಾಜದ ಅಭಿವೃದ್ಧಿಗಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ದುಡಿಯುತ್ತಿದ್ದಾರೆ, ಗಿರಿಶಂಕರ್‌ರವರು ಸವಣೂರಿನಲ್ಲಿ ಯುವಕ ಮಂಡಲ, ತುಳುಕೂಟದಂಥ ಅನೇಕ ಸಂಘಟನೆಗಳಲ್ಲಿ ದುಡಿದು, ಸಂಸ್ಥೆಯನ್ನು ರಾಜ್ಯ ಮಟ್ಟದಲ್ಲಯೇ ಗುರುತಿಸುವ ಕೆಲಸವನ್ನು ಮಾಡಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿಯವರು ಅಭಿನಂದನಾ ಭಾಷಣದಲ್ಲಿ ಗಿರಿಶಂಕರ್‌ರವರು ಯುವ ಸಮುದಾಯವನ್ನು ಬೆಳೆಸುವುದರ ಜೊತೆಗೆ ಸಮಾಜದ ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಯ ಪಥವನ್ನು ದಾಟಿದ್ದಾರೆ, ಅವರ ಸಾಧನೆಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಹೇಳಿದರು.


ನ್ಯೂಸ್ ಕಾರ್ಕಳ ವೆಬ್ ನ್ಯೂಸ್ ಮುಖ್ಯಸ್ಥ ರಾಮಚಂದ್ರ ಬರೆಪ್ಪಾಡಿ, ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರುಗಳು ಸಂದಭೋಚಿತವಾಗಿ ಮಾತನಾಡಿದರು. ಸನ್ಮಾನ ಸ್ವೀಕರಿಸಿದ ಗಿರಿಶಂಕರ್ ಸುಲಾಯರವರು ಕೃತಜ್ಞತೆ ಸಲ್ಲಿಸಿದರು. ಜಿಲ್ಲಾ ಯುವ ಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು ಉಪಸ್ಥಿತರಿದ್ದರು.

ಬೊಳ್ಳಿಬೊಲ್ಪು ತುಳುಕೂಟದ ಪೂರ್ವಾಧ್ಯಕ್ಷ ಉಮಾಪ್ರಸಾದ್ ರೈ ನಡುಬೈಲು ಸ್ವಾಗತಿಸಿ, ಸವಣೂರು ಯುವಕ ಮಂಡಲದ ಅಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು, ನ್ಯಾಯವಾದಿ ಮಹೇಶ್ ಕೆ ಸವಣೂರು ಕಾರ‍್ಯಕ್ರಮ ನಿರೂಪಿಸಿದರು.

ವೀರಮಂಗಲ ಪಿಎಂಶ್ರೀ ಶಾಲಾ ಮುಖ್ಯಗುರು ತಾರಾನಾಥ ಸವಣೂರು, ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ನಡುಬೈಲು, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರುಗಳಾದ ಪ್ರಕಾಶ್ ರೈ ಸಾರಕರೆ, ಗಂಗಾಧರ್ ಪೆರಿಯಡ್ಕ, ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಗಂಗಾಧರ್ ಸುಣ್ಣಾಜೆ, ಸವಣೂರು ಅಂಬಾ ಬ್ರದರ‍್ಸ್ ತಂಡದ ಬಾಲಚಂದ್ರ ರೈ ಕೆರೆಕ್ಕೋಡಿ, ಸವಣೂರು ಯುವಕ ಮಂಡಲದ ಮಾಜಿ ಅಧ್ಯಕ್ಷ ಪ್ರಕಾಶ್ ಮಾಲೆತ್ತಾರು, ಹೋಟೆಲ್ ಉದ್ಯಮಿ ರಾಮಕೃಷ್ಣ ಪ್ರಭು ಸವಣೂರು, ಸವಣೂರು ಬೊಳ್ಳಿ ಬೊಲ್ಪು ತುಳುಕೂಟದ ಪದಾಧಿಕಾರಿಗಳಾದ ಜಯರಾಮ ರೈ ಮೂಡಂಬೈಲು, ರಘು ಎಸ್ ಬೇರಿಕೆ, ದಯಾನಂದ ಮೆದು, ಸತೀಶ್ ಬಲ್ಯಾಯ ಕನ್ನಡಕುಮೇರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here