






ಪುತ್ತೂರು: ಕೆಮ್ಮಿಂಜೆ ಗ್ರಾಮದ, ಫಿಲೋಮಿನಾ ಮಹಿಳಾ ಹಾಸ್ಟೆಲ್ ಬಳಿ, ಮುಕ್ರಂಪ್ಪಾಡಿ “ಶೇಷ ಕೃಪಾ ನಿಲಯ” ಎಂಬಲ್ಲಿ ಕೆಮ್ಮಿಂಜೆ ಗ್ರಾಮದ ಊರ ಗೌಡರಾದ ಲೋಕೇಶ್ ಗೌಡರ ಮನೆಯಲ್ಲಿ ಕೆಮ್ಮಿಂಜೆ ಗ್ರಾಮದ ಒಕ್ಕಲಿಗ ಗೌಡ ಸಂಘದ ಗ್ರಾಮ ಸಮಿತಿಗೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವು ಪುತ್ತೂರು ತಾಲೂಕು ಒಕ್ಕಲಿಗ ಗೌಡ ಸಂಘದ ಪುತ್ತೂರು ವಲಯದ ಉಸ್ತುವಾರಿ ರಾಧಾಕೃಷ್ಣ ನಂದಿಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.



ಮುಖ್ಯ ಅತಿಥಿ, ತಾಲೂಕು ಒಕ್ಕಲಿಗ ಗೌಡ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಕಾರ್ಯದರ್ಶಿ ಡಾ| ಶ್ರೀಧರ ಪಾಣತ್ತಿಲ, ಖಜಾಂಜಿ ಶ್ರೀಧರ ಗೌಡ ಕಣಜಾಲು, ಉಪಾಧ್ಯಕ್ಷ ಪುರುಷೋತ್ತಮ ಮುಂಗ್ಲಿಮನೆ, ಮಹಿಳಾ ಸಂಘದ ಅಧ್ಯಕ್ಷೆ ಕುಸುಮ, ಕಾರ್ಯದರ್ಶಿ ರೇಖಾ ಗೋವರ್ಧನ, ಯುವ ಸಂಘದ ಪುತ್ತೂರು ವಲಯದ ಅಧ್ಯಕ್ಷ ದಾಮೋದರ್ ಗೆಣಸಿನಕುಮೇರು ಮತ್ತು ಗ್ರಾಮದ ಹಿರಿಯವರಾದ ರಾಧಾಕೃಷ್ಣ ಇವರು ಭಾಗವಹಿಸಿದರು.



ಕೆಮ್ಮಿಂಜೆ ಗ್ರಾಮದ ಒಕ್ಕಲಿಗ ಗೌಡ ಸಂಘದ ಸದಸ್ಯರು, ಯುವ ಸಂಘದ ಸದಸ್ಯರು, ಮಹಿಳಾ ಸಂಘದ ಸದಸ್ಯರು, ಸ್ವ-ಸಹಾಯ ಸಂಘದ ಸದಸ್ಯರು ಸಹಿತ ಕೆಮ್ಮಿಂಜೆ ಗ್ರಾಮದ ಒಕ್ಕಲಿಗ ಗೌಡ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಹಿರಿಯ ಸಂಘ ಅಧ್ಯಕ್ಷರಾಗಿ ಸೂರಪ್ಪ ಗೌಡ (ನಿವೃತ್ತ ಉಪ ತಹಶೀಲ್ದಾರರು) ಕಾರ್ಯದರ್ಶಿಯಾಗಿ ಕೆ.ಲೋಕನಾಥ್ (ನಿವೃತ್ತ ಸಹಾಯಕ ಪೊಲೀಸ್ ಉಪ ನಿರೀಕ್ಷಕರು)ಯುವ ಸಂಘ ಅಧ್ಯಕ್ಷರಾಗಿ ಲೋಕೇಶ್ ಗೌಡ (ಊರ ಗೌಡರು ಕೆಮ್ಮಿಂಜೆ ಗ್ರಾಮ),ಕಾರ್ಯದರ್ಶಿಯಾಗಿ ಮಿಥನ್ ಕುಮಾರ್, ಮಹಿಳಾ ಸಂಘ ಅಧ್ಯಕ್ಷರಾಗಿ ರೇಖಾ ಯಶೋಧರ್ (ಮಾಜಿ ಕೌನ್ಸಿಲರು), ಕಾರ್ಯದರ್ಶಿಯಾಗಿ ಪುಷ್ಪಾವತಿ ಏ.P.(ಸ್ವರ್ಗೀಯ ಯೋಧ ದೋಲ್ಪಾಡಿ ಪರಮೇಶ್ವರ ಗೌಡರ ಪತ್ನಿ)ರವರು ಪದ ಸ್ವೀಕರಿಸಿದರು.









