ಚಿದಾನಂದ ಬೈಲಾಡಿ ಅವರ ಪುತ್ರ ಕರಣ್ ಬೈಲಾಡಿ ದಂಪತಿ ಅರತಕ್ಷತೆ -ಆದಿ ಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀಗಳಿಂದ ಮಂಗಳ ಕಾರ್ಯಕ್ರಮ ಉದ್ಘಾಟನೆ-ಮಾಜಿ ಮುಖ್ಯಮಂತ್ರಿ ಡಿವಿಎಸ್ ಸಹಿತ ಹಲವಾರು ಗಣ್ಯರ ಆಗಮನ

0

ಪುತ್ತೂರು: ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ ಮತ್ತು ಸಂಧ್ಯಾ ಬೈಲಾಡಿ ಅವರ ಪುತ್ರ ಸಿಂಗಾರಪುರದ ಶಿಫ್ ಕಂಪೆನಿಯಲ್ಲಿ ಆಫೀಸರ್ ಆಗಿರುವ ಕರಣ್ ಸಿ ಗೌಡ ಬೈಲಾಡಿ ಮತ್ತು ಗುಂಡ್ಲುಪೇಟೆ ಹನೂರು ಮಾರಿಯಮ್ಮ ದೇವಸ್ಥಾನದ ಮೊಕ್ತೇಸರ ಚಂದ್ರು ಮತ್ತು ಹೇಮಾವತಿ ದಂಪತಿ ಪುತ್ರಿ ಪ್ರೈಸ್‌ಈಝಿ ಕಂಪೆನಿಯಲ್ಲಿ ಹೆಡ್ ಹೆಚ್‌ಆರ್ ಆಗಿರುವ ಅರ್ಚನ ಸಿ ಗೌಡ ಅವರ ಅರತಕ್ಷತೆ ಕಾರ್ಯಕ್ರಮ ಫೆ.28ರಂದು ಪುತ್ತೂರು ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಬೆಳಗ್ಗೆ ನವ ದಂಪತಿಯನ್ನು ಆಶೀರ್ವದಿಸಿದ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಅವರು ಮಂಗಳ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ವಧು ವರರ ತಂದೆ ತಾಯಿಯರು ದೀಪ ಪ್ರಜ್ವಲನೆಗೆ ಕೈ ಜೋಡಿಸಿದರು. ನವ ದಂಪತಿಗೆ ಶ್ರೀಗಳು ಮಠದ ಗೌರವಾರ್ಥ ಶಲ್ಯ ತೊಡಿಸಿ ಅಕ್ಷತೆ ಹಾಕಿ ಹರಸಿದರು.

ಈ ಸಂದರ್ಭ ಮಾಜಿ ಶಾಸಕ ಸಂಜೀವ ಮಠಂದೂರು, ವಧು ಅರ್ಚನ ಸಿ ಅವರ ಸೋದರ ಮಾವ ರವಿ ಮತ್ತು ಶ್ವೇತಾ, ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಶಾಸಕ ಸಂಜೀವ ಮಠಂದೂರು, ಸಂಬಂಧಿಕ ಶಶಿಧರ್ ಸೇರಾಜೆ ದಂಪತಿ, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುಂದರ ಗೌಡ ನಡುಬೈಲು, ಪ್ರಧಾನ ಕಾರ್ಯದರ್ಶಿ ಡಾ.ಶ್ರೀಧರ್ ಗೌಡ ಪಾಣತ್ತಿಲ, ಸಂಘದ ಹಿರಿಯ ಮಾರ್ಗದರ್ಶಕ ಮೋಹನ್ ಗೌಡ ಇಡ್ಯಡ್ಕ, ಮಹಿಳಾ ಗೌಡ ಸಂಘ, ಯುವ ಗೌಡ ಸಂಘ, ಒಕ್ಕಲಿಗ ಸ್ವಸಹಾಯ ಸಂಘ ಸಹಿತ ಸಮಾಜದ ವಿವಿಧ ವಿಭಾಗಗಳ ಪ್ರಮುಖರು, ಸದಸ್ಯರು, ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಯು ಪಿ ರಾಮಕೃಷ್ಣ ಗೌಡ ಮತ್ತು ನಿರ್ದೇಶಕರು, ಸಿಇಒ, ಎವಿಜಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ವೆಂಕಟ್ರಮಣ ಗೌಡ ಕಳುವಾಜೆ, ಒಕ್ಕಲಿಗ ಗೌಡ ಸೇವಾ ಸಂಘದ ಮಾಜಿ ಅಧ್ಯಕ್ಷ ರವಿ ಮುಂಗ್ಲಿಮನೆ, ಶಿವರಾಮ ಹೆಚ್.ಡಿ, ನಾಗಪ್ಪ ಗೌಡ ಬೊಮ್ಮೆಟ್ಟಿ, ಮುಗೆರೋಡಿ ಬಾಲಕೃಷ್ಣ ರೈ, ಜಾಕೆ ಮಾದವ ಗೌಡ, ಆರ್ ಸಿ ನಾರಾಯಣ, ನಾರಾಯಣ ರೈ ಕುಕ್ಕುವಳ್ಳಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್ ಈ ಸಂದರ್ಭ ಉಪಸ್ಥಿರಿದ್ದರು. ಕಾರ್ಯಕ್ರಮವನ್ನು ನ್ಯೂಸ್ ಪುತ್ತೂರು ಮುಖ್ಯಸ್ಥರಾಗಿರುವ ಸೀತಾರಾಮ ಕೇವಳ ಕಾರ್ಯಕ್ರಮ ನಿರೂಪಿಸಿದರು. ನ್ಯಾಯವಾದಿ ಮಹೇಶ್ ಕಜೆ, ದೀಪಿಕಾ ಕಜೆ ದಂಪತಿ, ಮಾಜಿ ಪುರಸಭೆ ಅಧ್ಯಕ್ಷ ಸೂತ್ರಬೆಟ್ಟು ಜಗನ್ನಾಥ ರೈ, ಕುಂಟಿಕಾನ ಲಕ್ಷ್ಮಣ ಗೌಡ, ಕುಡ್ಗಿ ವಿಶ್ವಾಸ್ ಶೆಣೈ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ, ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೆಡೇಕರ್, ಮಾಜಿ ಸದಸ್ಯ ಕರುಣಾಕರ್ ರೈ ದೇರ್ಲ ಸಹಿತ ಹಲವಾರು ಮಂದಿ ಆಗಮಿಸಿ ಶುಭ ಹಾರೈಸಿದರು.

LEAVE A REPLY

Please enter your comment!
Please enter your name here