ನೂತನ ಕುತ್ಯಾಡಿ ತರವಾಡು ಮನೆಯ ಗೃಹಪ್ರವೇಶ, ದೈವಗಳ ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವ

0

ಅರಿಯಡ್ಕ: ಅರಿಯಡ್ಕ ಗ್ರಾಮದ ಕುತ್ಯಾಡಿ ನೂತನ ತರವಾಡು ಮನೆಯ ಗೃಹಪ್ರವೇಶ ದೈವಗಳ ಪ್ರತಿಷ್ಠೆ, ಬ್ರಹ್ಮಕಲಶಾಭಿಷೇಕ ಹಾಗೂ ದೈವಗಳ ನೇಮೋತ್ಸವ ಬ್ರಹ್ಮ ಶ್ರೀ ಕುಂಟಾರು ವಾಸು ದೇವ ತಂತ್ರಿಯವರ ಆರ್ಶೀವಾದ ದೊಂದಿಗೆ ಬ್ರಹ್ಮ ಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಫೆ.26ರಂದು ಕುತ್ಯಾಡಿ ತರವಾಡು ಮನೆಯಲ್ಲಿ ನಡೆಯಿತು.


ಪುಣ್ಯಾಹ ವಾಚನ, ಸ್ಥಳ ಶುದ್ದಿ,ಪ್ರಾಸಾದ ಶುದ್ದಿ,ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹಾಂತ, ಗಣಪತಿ ಹೋಮ ಮತ್ತು ಹರಿ ಸೇವೆಯೊಂದಿಗೆ ತರವಾಡು ಮನೆಯ ಗೃಹಪ್ರವೇಶ, ಪ್ರತಿಷ್ಠೆ, ಬ್ರಹ್ಮ ಕಲಶಾಭಿಷೇಕ, ಸತ್ಯನಾರಾಯಣ ಪೂಜೆ, ಮಹಾಪೂಜೆ, ನಿತ್ಯ ನೈಮಿತ್ತ್ಯಾದಿಗಳ ನಿರ್ಣಯ ನಡೆದು, ಸಂಜೆ ಗ್ರಾಮ ದೈವ ಧೂಮಾವತಿ ದೈವದ ಭಂಡಾರ ಮತ್ತು ತರವಾಡು ಮನೆಯ ದೈವಗಳ ಭಂಡಾರ ತೆಗೆದು ಕೊಡಿಯಾಡಿಯಲ್ಲಿ ಏರಿಸಿ ಕಲ್ಲಾಳ್ತ ಗುಳಿಗ , ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ,ಕೊರತ್ತಿ, ಗುಳಿಗ ಮತ್ತು ಧರ್ಮ ದೈವ ಧೂಮಾವತಿ ದೈವಗಳಿಗೆ ನೇಮೋತ್ಸವ ನಡೆಯಿತು.


ಅನ್ನ ಸಂತರ್ಪಣೆ:
ಕುಟುಂಬದ ಹಾಗೂ ನೂರಾರು ಭಕ್ತಾಧಿಗಳು ಅನ್ನ ಪ್ರಸಾದ ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಗುತ್ತು,ಬಾರಿಕೆಯ ಮುಖ್ಯಸ್ಥರು, ಕುಟುಂಬಸ್ಥರು, ಸಾರ್ವಜನಿಕ ಭಕ್ತಾದಿಗಳು ಉಪಸ್ಥಿತರಿದ್ದರು.ತರವಾಡು ಮನೆಯ ಅಧ್ಯಕ್ಷ ಪುರಂದರ ರೈ, ತರವಾಡು ಮನೆಯ ಯಜಮಾನ ದೇವಪ್ಪ ರೈ ಹಾಗೂ ಕುಟುಂಬಿಕರು ಅತಿಥಿಗಳನ್ನು ಸ್ವಾಗತಿಸಿದರು.

LEAVE A REPLY

Please enter your comment!
Please enter your name here