






ಪುತ್ತೂರು:2022ರಲ್ಲಿ ಮುಕ್ವೆಯಲ್ಲಿ ರಿಕ್ಷಾ ಮತ್ತು ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ರಿಕ್ಷಾ ಚಾಲಕನನ್ನು ನ್ಯಾಯಾಲಯ ದೋಷಮುಕ್ತಗೊಳಿಸಿದೆ.


2022ರ ಡಿ.25ರಂದು ಅಟೋ ರಿಕ್ಷಾ ಮತ್ತು ಮೋಟಾರ್ ಸೈಕಲ್ ಮಧ್ಯೆ ಡಿಕ್ಕಿ ಸಂಭವಿಸಿತ್ತು.ಪರಿಣಾಮ ಅಟೋ ರಿಕ್ಷಾ ಪಲ್ಟಿಯಾಗಿ,ಬೈಕ್ ಸವಾರ ಚಿತ್ರದುರ್ಗ ಮೂಲದ ವೀರೇಶ ಎಂಬವರು ಬೈಕ್ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು.



ಘಟನೆ ಕುರಿತು ಮೃತ ವೀರೇಶ ಅವರ ಅಳಿಯ ರೇವಣೀಶ್ ಎಂಬವರು ನೀಡಿದ್ದ ದೂರಿನಂತೆ ಪುತ್ತೂರು ಸಂಚಾರ ಠಾಣೆ ಪೊಲೀಸರು ರಿಕ್ಷಾ ಚಾಲಕ,ಚಾರ್ವಾಕ ಕೋಲ್ಪೆ ನಿವಾಸಿ ಗಣೇಶ್ ಗೌಡ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿ ರಿಕ್ಷಾ ಚಾಲಕನನ್ನು ಖುಲಾಸೆಗೊಳಿಸಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ, ರಾಕೇಶ್ ಬಲ್ನಾಡ್, ನಿಶಾ ಕುಮಾರಿ ವಾದಿಸಿದ್ದರು.









