






ಪುತ್ತೂರು:2021ರಲ್ಲಿ ಕೆಯ್ಯೂರು ಗ್ರಾಮದ ಮಾಡಾವು ಎಂಬಲ್ಲಿ ಮನೆಯೊಂದಕ್ಕೆ ನುಗ್ಗಿ ಚಿನ್ನಾಭರಣ ಕಳವು ಮಾಡಿದ್ದ ಆರೋಪಿಯನ್ನು ನ್ಯಾಯಾಲಯ ನಿರ್ದೋಷಿಯೆಂದು ತೀರ್ಪು ನೀಡಿದೆ.


2021ರ ಜು.5ರ ರಾತ್ರಿ ಯಾರೋ ಕಳ್ಳರು ಮನೆಗೆ ನುಗ್ಗಿ ಸುಮಾರು 20 ಗ್ರಾಮ್ ಚಿನ್ನಾಭರಣ ಕಳವು ಮಾಡಿದ್ದ ಕುರಿತು ಕೆಯ್ಯೂರು ಗ್ರಾಮದ ಮಾಡಾವು ಎಂ.ಯು.ಹೌಸ್‌ನ ಉಮ್ಮರ್ ಮಾಡಾವು ಎಂಬವರು ದೂರು ನೀಡಿದ್ದರು.ಪುತ್ತೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.ತನಿಖೆ ನಡೆಸಿದ ಪೊಲೀಸರು ಪ್ರಕರಣದ ಆರೋಪಿಯಾಗಿ ಕೇರಳ ಕಣ್ಣೂರಿನ ಕೊಲ್ಲಪರಂಬಿಲ್ ನಿವಾಸಿ ಮೊಹಮ್ಮದ್ ಕೆ.ಯು.(47ವ.)ಎಂಬಾತನನ್ನು ಬಂಧಿಸಿದ್ದರು.ಆರೋಪಿ ವಿರುದ್ಧ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.ಈ ಮಧ್ಯೆ, ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ.ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರು ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.ಆರೋಪಿ ಪರ ವಕೀಲರಾದ ಮಾಧವ ಪೂಜಾರಿ,ರಾಕೇಶ್ ಬಲ್ನಾಡ್, ಮಮತಾ ಶೆಟ್ಟಿ ವಾದಿಸಿದ್ದರು.












