






ಬಡಗನ್ನೂರು: ಸುಳ್ಯಪದವು :ಶಬರಿ ನಗರ ಕೊರಗಜ್ಜ ಕ್ಷೇತ್ರದಲ್ಲಿ ಮಾ.8,ಮಾ. 9ರಂದು ವಾರ್ಷಿಕ ನೇಮೋತ್ಸವ ನಡೆಯಲಿದ್ದು, ಇದರ ಅಂಗವಾಗಿ ಕರಸೇವೆ ಮೂಲಕ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.



ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಅಧ್ಯಕ್ಷ ಬೆಳಿಯಪ್ಪ ಗೌಡ ಶಬರಿ ನಗರ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಮರದ ಮೂಲೆ, ಕೋಶಾಧಿಕಾರಿ ಭಾಸ್ಕರ ಹೆಗ್ಡೆ ಶಬರಿ ನಗರ, ಉಪಾಧ್ಯಕ್ಷ ಸದಾನಂದ ರೈ ಬೋಳಂಕೂಡ್ಲು, ಪೂಜಾ ಕರ್ಮಿ ಮಾಧವ ಸಾಲ್ಯಾನ್, ಜತೆಕಾರ್ಯದರ್ಶಿ ವಿನಯ ಕುಮಾರ್ ದೇವಸ್ಯ, ಪದಾಧಿಕಾರಿಗಳು, ಸದಸ್ಯರು, ಭಕ್ತರು ಪಾಲ್ಗೊಂಡರು.












