ಕುಂತೂರು ಶ್ರೀ ಶಾರದಾ ಶಿಶು ಮಂದಿರದಲ್ಲಿ ಶಿಶು ಸಂಭ್ರಮಾಚಾರಣೆ-2026

0

ಕುಂತೂರು: ಸಂಸ್ಕಾರಯುತ ಶಿಕ್ಷಣವನ್ನು ನೀಡಿ ಮಕ್ಕಳಲ್ಲಿ ದೇಶ ಭಕ್ತಿಯನ್ನು ಮೂಡಿಸಿ, ಊರಿನ ಹೆಗ್ಗಳಿಕೆಗೆ ಪಾತ್ರವಾದ ಶ್ರೀ ಶಾರದಾ ಶಿಶುಮಂದಿರದಲ್ಲಿ ಫೆ.28ರಂದು ಶಿಶು ಸಂಭ್ರಮ ಕಾರ್ಯಕ್ರಮದೊಂದಿಗೆ ಪುಟಾಣಿಗಳ ಸಾಮೂಹಿಕ ಹುಟ್ಟುಹಬ್ಬವನ್ನು ಆಚರಿಸಲಾಯಿತು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆಲಂಕಾರು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾದ ರಮೇಶ್ ಭಟ್ ಉಪ್ಪಗಳರವರು ಮಕ್ಕಳಿಗೆ ಶುಭ ಹಾರೈಸಿದರು.
ಬೌದ್ಧಿಕ್ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯ ಸಹ ಪ್ರಾಧ್ಯಾಪಕರಾದ ಡಾ. ರವಿ ಎಂ.ಎನ್ ರವರು ಮಾತನಾಡಿ, ಪೋಷಕರಾದ ನಾವು ಮಕ್ಕಳಲ್ಲಿ ಮಾತೃಭಾಷ ಪ್ರೇಮವನ್ನು ಮೂಡಿಸಬೇಕು. ವಿದ್ಯಾರ್ಥಿಗಳಿಗೆ ಜೀವನದಲ್ಲಿ ಅಂಕಕ್ಕಿಂತ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಪೋಷಕರಾದ ನಾವು ಮಕ್ಕಳಿಗೆ ಜೀವನದಲ್ಲಿ ಸಂಸ್ಕಾರಯುತ ಶಿಕ್ಷಣವನ್ನು ನೀಡುವುದು ಮುಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ, ವಿವೇಕಾನಂದ ಸಮೂಹ ಸಂಸ್ಥೆಗಳ ಸಹಕಾರ್ಯನಿರ್ವಾಹಣಾಧಿಕಾರಿಯವರಾದ ಶ್ರೀಯುತ ವೆಂಕಟ್ರಮಣ ರಾವ್ ಮಂಕುಡೆರವರು ಮಾತನಾಡಿ, ಮಾತೆಯರ ಒಗ್ಗೂಡಿಕೆಯಿಂದ ಪ್ರಾರಂಭಿಸಲಾದ ಶಿಶುಮಂದಿರವನ್ನು ಮಾತೆಯರು ಉತ್ತಮವಾಗಿ ಮುನ್ನಡೆಸುತ್ತಿದ್ದು, ಮಾತೆಯರ ಕಾರ್ಯವನ್ನು ಶ್ಲಾಘಿಸಿದರು.


ಶಿಶುಮಂದಿರದ ಪುಟಾಣಿಗಳು ಸಾಮೂಹಿಕ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುವುದರ ಜೊತೆಯಲ್ಲಿ, ಅತ್ಯಂತ ಭಾವನಾತ್ಮಕ ಕಾರ್ಯಕ್ರಮವಾದ ಪೋಷಕರ ಪಾದ ಪೂಜನ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಬಣ್ಣ ಬಣ್ಣದ ಪೋಷಾಕಿನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಶಿಶು ಮಂದಿರದ ಪುಟಾಣಿಗಳು, ಮಾತೆಯರು, ಬಾಲ ಗೋಕುಲದ ವಿದ್ಯಾರ್ಥಿಗಳು, ಭಜನಾ ತಂಡದ ಮಕ್ಕಳು ಪಾಲ್ಗೊಂಡರು.


ಕಾರ್ಯಕ್ರಮದಲ್ಲಿ ಶಿಶುಮಂದಿರದ ಸಮಿತಿಯ ಅಧ್ಯಕ್ಷರು,ಸದಸ್ಯರು,ಮಾತೃ ಮಂಡಳಿಯ ಅಧ್ಯಕ್ಷರು, ಮಾತೆಯರು, ಸಾರ್ವಜನಿಕರು ಹಾಗೂ ಶಿಶುಮಂದಿರದ ಮಾತಾಜಿ ವರ್ಗದವರು ಉಪಸ್ಥಿತರಿದ್ದರು. ಆಗಮಿಸಿದ ಅತಿಥಿಗಳನ್ನು ಶ್ರೀ ಶಾರದಾ ಶಿಶುಮಂದಿರದ ಅಧ್ಯಕ್ಷೆ ಮಧುಶ್ರೀ ಅಗತ್ತಾಡಿ ಅವರು ಸ್ವಾಗತಿಸಿದರು. ಶಿಶು ಮಂದಿರದ ಕೋಶಾಧಿಕಾರಿ ಯಮುನಾ ಎಸ್ ರೈ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಶುಮಂದಿರದ ಆಡಳಿತ ಮಂಡಳಿಯ ಸದಸ್ಯೆ ಗಂಗಾರತ್ನ ವಸಂತ ವಂದಿಸಿ, ಗುರುಕಿರಣ್ ಶೆಟ್ಟಿ ಬಾಲಾಜೆ ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here