ಪುಣಚ ಮಹಿಷಮರ್ದಿನಿ ದೇವಿ ಭಜನಾ ಮಂಡಳಿಯ ವಾರ್ಷಿಕೋತ್ಸವ – ಭಜನಾ ಕಾರ್ಯಕ್ರಮಕ್ಕೆ ಚಾಲನೆ

0

ಪುಣಚ: ಪುಣಚ ಮಹಿಷಮರ್ದಿನಿ ದೇವಿ ಭಜನಾ ಮಂಡಳಿಯ 44ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಬ್ರಹ್ಮಶ್ರೀ ವರ್ಕಾಡಿ ಗಣೇಶ ತಂತ್ರಿಯವರ ಮಾರ್ಗದರ್ಶನದಲ್ಲಿ ಭಜನಾ ಕಾರ್ಯಕ್ರಮಕ್ಕೆ ಮಾ.6ರಂದು ಪುಣಚ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಾಲನೆ ದೊರೆಯಿತು.


ಬೆಳಿಗ್ಗೆ ಕ್ಷೇತ್ರದ ಪ್ರಧಾನ ಅರ್ಚಕ ಕೃಷ್ಣ ಬನ್ನಿಂತಾಯರ ಪ್ರಾರ್ಥನೆಯೊಂದಿಗೆ ಭಜನಾ ಮಂಡಳಿಯ ಸ್ಥಾಪಕಾಧ್ಯಕ್ಷ ರವೀಂದ್ರನಾಥ ರೈ ಬೈಲುಗುತ್ತು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ದೇವಸ್ಥಾನದ ಆಡಳಿತ ಸಮಿತಿ ಕೋಶಾಧಿಕಾರಿ ಹರ್ಷ ಎ.ಎಸ್, ಭಜನಾ ಮಂಡಳಿಯ ಅಧ್ಯಕ್ಷ ಕಿರಣ್’ಚಂದ್ರ ದಲ್ಕಾಜೆ, ಮಾಜಿ ಅಧ್ಯಕ್ಷರಾದ ಜಗನ್ನಾಥ ಶೆಟ್ಟಿ ಕೋಡಂದೂರು, ಶ್ರೀಧರ್ ಶೆಟ್ಟಿ ಬೈಲುಗುತ್ತು, ವೀರಪ್ಪ ಮೂಲ್ಯ ಮಲೆತ್ತಡ್ಕ ಹಾಗೂ ದೇವಿ ಭಜನಾ ಮಂಡಳಿಯ ಪದಾಧಿಕಾರಿಗಳು ಸದಸ್ಯರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು. ಆರಂಭದಲ್ಲಿ ಶ್ರೀದೇವಿ ಭಜನಾ ಮಂಡಳಿಯವರಿಂದ ಆರಂಭಗೊಂಡ ಭಜನೆ ಬಳಿಕ ವಿವಿಧ ಭಜನಾ ಮಂಡಳಿಯವರಿಂದ ನಡೆಯುತ್ತಿದೆ.

LEAVE A REPLY

Please enter your comment!
Please enter your name here