ಪುತ್ತೂರು ಭಂಡಾರಿ ಸಮಾಜ ಸಂಘ, ಮಹಿಳಾ ಭಂಡಾರಿ ಸಮಾಜ ಸಂಘ, ಭಂಡಾರಿ ಯುವ ವೇದಿಕೆಯಿಂದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ, ಭಂಡಾರಿ ಸಮಾಜ ಸಂಘದ ಮಹಾಸಭೆ

0

ಪುತ್ತೂರು: ಭಂಡಾರಿ ಸಮಾಜ ಸಂಘ ಪುತ್ತೂರು, ಮಹಿಳಾ ಭಂಡಾರಿ ಸಮಾಜ ಸಂಘ ಪುತ್ತೂರು, ಭಂಡಾರಿ ಯುವ ವೇದಿಕೆ ಪುತ್ತೂರು ಇವರ ಸಾರಥ್ಯದಲ್ಲಿ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಭಂಡಾರಿ ಸಮಾಜ ಸಂಘದ ಮಹಾಸಭೆಯು ಮಾ.8 ರಂದು ಪೂರ್ವಾಹ್ನ ಜೈನಭವನದಲ್ಲಿ ಜರಗಲಿದೆ.


ಸಭಾ ಕಾರ್ಯಕ್ರಮದಲ್ಲಿ ಪುತ್ತೂರು ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಕೇಶವ ಭಂಡಾರಿ ಬೆಳ್ಳಿಪ್ಪಾಡಿ ಕೈಪರವರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಅಶೋಕ್ ಕುಮಾರ್ ರೈ, ಬಾರ್ಕೂರು ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನದ ಅಧ್ಯಕ್ಷ ಲಕ್ಚ್ಮಣ ಕರಾವಳಿ, ಬಾರ್ಕೂರು ಭಂಡಾರಿ ಮಹಾಮಂಡಲದ ಅಧ್ಯಕ್ಷೆ ಅಮಿತ ಗಿರೀಶ್ ಉಡುಪಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಪುತ್ತೂರು ಸವಿತ ಸಮಾಜದ ಅಧ್ಯಕ್ಷ ಪ್ರವೀಣ್ ಭಂಡಾರಿ ಖಜಾನೆಮೂಲೆ ಸಂಪ್ಯ, ಪುತ್ತೂರು ಮಹಿಳಾ ಭಂಡಾರಿ ಸಮಾಜ ಸಂಘದ ಅಧ್ಯಕ್ಷೆ ನಿರ್ಮಲ ಚಂದ್ರಶೇಖರ ತಾರಿಗುಡ್ಡೆ, ಪುತ್ತೂರು ಭಂಡಾರಿ ಯುವ ವೇದಿಕೆ ಅಧ್ಯಕ್ಷ ಕಾರ್ತಿಕ್ ಮಜಲುಮಾರು ಸವಣೂರುರವರು ಭಾಗವಹಿಸಲಿದ್ದಾರೆ.


ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಲಿರುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಸಂಘದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here