’ದಿ ಕೇರಳ ಸ್ಟೋರಿ-2’ ಉಚಿತ ಪ್ರದರ್ಶನ ಹಿನ್ನೆಲೆ ಬೆದರಿಕೆ ಕರೆ !

0

ಪೊಲೀಸ್ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು- ಅರುಣ್ ಕುಮಾರ್ ಪುತ್ತಿಲ

ಪುತ್ತೂರು: ದಿ ಕೇರಳ ಸ್ಟೋರಿ 2’ ಚಿತ್ರವು ಬಿಡುಗಡೆಗೂ ಮುನ್ನವೇ ಹಲವಾರು ಕಾನೂನು ಮತ್ತು ರಾಜಕೀಯ ವಿವಾದಗಳಿಗೆ ಗುರಿಯಾಗಿತ್ತು. ಪ್ರಮುಖವಾಗಿ ಚಿತ್ರದಲ್ಲಿನ ಲವ್ ಜಿಹಾದ್ ಮತ್ತು ಬಲವಂತದ ಮತಾಂತರದ ಚಿತ್ರಣಗಳು ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ತರುತ್ತವೆ ಎಂಬ ಆರೋಪಗಳು ಕೇಳಿಬಂದಿವೆ. ಪುತ್ತೂರಿನಲ್ಲಿ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಭಾಗವಾದ ಸೀತಾ ಪರಿವಾರದಿಂದ ಜಿ.ಎಲ್ ಮಾಲ್‌ನಲ್ಲಿರುವ ಭಾರತ್ ಸಿನೇಮಾದಲ್ಲಿ ’ದಿ ಕೇರಳ ಸ್ಟೋರಿ 2’ ಚಿತ್ರದ ಉಚಿತ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ಇದರ ಸುತ್ತ ಹಲವು ವಿವಾದಗಳು ಹುಟ್ಟಿಕೊಂಡಿವೆ.


ಜಿ ಎಲ್ ಒನ್ ಮಾಲ್ ನ ಭಾರತ್ ಸಿನೆಮಾದಲ್ಲಿ ಸೀತಾ ಪರಿವಾರ ಸಂಘಟನೆಯಿಂದ ಕಾಲೇಜು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಸಿನಿಮಾ ಪ್ರದರ್ಶನ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಕೆಲವು ಸಂದೇಶಗಳು ವೈರಲ್ ಆಗಿದೆ. ಎಚ್ಚರಿಕೆಯ ಸಂದೇಶವೂ ಹರಿದಾಡುತ್ತಿರುವುದು ಚರ್ಚೆಗೆ ಕಾರಣವಾಗಿದೆ. ಸಿನಿಮಾ ಪ್ರದರ್ಶನಕ್ಕೆ ಸಂಬಂಧಿಸಿದ ಪೋಸ್ಟರ್‌ಗಳಲ್ಲಿ ಬುಕ್ಕಿಂಗಾಗಿ ಮಹಿಳೆಯರ ಮೊಬೈಲ್ ಸಂಖ್ಯೆಯನ್ನು ನೀಡಲಾಗಿತ್ತು. ಆ ಸಂಖ್ಯೆಗೆ ಕೆಲವೊಂದು ನಿಂದನೆ ಶಬ್ದಗಳ ಕರೆ ಬರುತ್ತಿದೆ ಎನ್ನಲಾಗಿದೆ. ಕೆಲ ಕರೆಗಳು ವಿದೇಶದಿಂದ ಬಂದಿದೆ ಎಂದು ಸಂಘಟಕರು ತಿಳಿಸಿದ್ದಾರೆ.


ಪೊಲೀಸ್ ಇಲಾಖೆಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು:
ಬೆದರಿಕೆ ಕರೆ, ಬಹಿಷ್ಕಾರದ ವಿಚಾರಗಳು ಬಂದಂತೆ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಸ್ಥಾಪಕ ಅರುಣ್ ಕುಮಾರ್ ಪುತ್ತಿಲ ಅವರು ಭಾರತ್ ಸಿನಿಮಾಗೆ ಆಗಮಿಸಿ ಮಾಹಿತಿ ಪಡೆದುಕೊಂಡಿದ್ದಾರೆ. ಈ ವೇಳೆ ಮಾಧ್ಯಮದ ಜೊತೆ ಮಾತನಾಡಿ‌, ಸೀತಾ ಪರಿವಾರದ ಮೂಲಕ ಉಚಿತ ಪ್ರದರ್ಶನದ ವ್ಯವಸ್ಥೆಯನ್ನು ಇಲ್ಲಿ ಆಯೋಜನೆ ಮಾಡಲಾಗಿದೆ. ಹಿಂದು ಯುವತಿಯರಿಗೆ ಲವ್‌ಜಿಹಾದ್ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಪ್ರದರ್ಶನ ಆಯೋಜಿಸಿದೆ. ಪ್ರದರ್ಶನದ ಸಂದರ್ಭದಲ್ಲಿ ಈ ಚಿತ್ರದ ಬುಕ್ಕಿಂಗ್‌ಗಾಗಿ ಒಂದಷ್ಟು ಮಹಿಳೆಯರ ನಂಬರ್ ಕೊಡಲಾಗಿತ್ತು. ಆ ನಂಬರ್‌ಗೆ ಕರೆ ಮಾಡಿ ಸ್ಥಳೀಯ ಮತ್ತು ವಿದೇಶದಿಂದ ಬೆದರಿಕೆ ಕರೆ ಬಂದಿದೆ. ಇದನ್ನು ಪೊಲೀಸ್ ಇಲಾಖೆಗಳು ಗಂಭೀರವಾಗಿ ಪರಿಗಣಿಸಬೇಕು. ಈ ಕೃತ್ಯ ಮುಂದಿನ ನಡೆದರೆ ಮತ್ತೆ ಅದಕ್ಕೆ ಉತ್ತರ ಕೊಡುವ ಮೂಲಕ ಸಮಾಜವನ್ನು ಜಾಗೃತಿಗೊಳಿಸುತ್ತೇವೆ. ಚಲನ ಚಿತ್ರ ವೀಕ್ಷಣೆಗೆ ಬಹಿಷ್ಕಾರ ಸಮಾಜಕ್ಕೆ ಮಾರಕ. ಅವರರವರ ಧರ್ಮವನ್ನು ರಕ್ಷಿಸುವುದು ಬಿಟ್ಟು, ಇನ್ನೊಂದು ಧರ್ಮದ ಮೇಲೆ ಬೇರೆ ಬೆರೆ ವ್ಯವಸ್ಥೆ ಮಾಡಿದರೆ ಸಮಾಜ ಸಹಿಸುವುದಿಲ್ಲ ಎಂದವರು ಹೇಳಿದ್ದಾರೆ.

ಈ ಸಂದರ್ಭ ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಪದಾಧಿಕಾರಿಗಳು ಜೊತೆಗಿದ್ದರು.

LEAVE A REPLY

Please enter your comment!
Please enter your name here