







ಪುತ್ತೂರು: ನ್ಯಾಯವಾದಿಗಳಾದ ಎಂ. ವಿರೂಪಾಕ್ಷ ಭಟ್ ಮತ್ತು ಸಹನಾ ಪಿ.ಎಸ್ ಅವರ ಪುತ್ತೂರು ಸೆಂಟರ್ ಬಿಲ್ಡಿಂಗ್ನಲ್ಲಿದ್ದ ಮಚ್ಚಿಮಲೆ ಲೀಗಲ್ ಸೊಲ್ಯೂಷನ್ಸ್ ಕಚೇರಿಯು ಸ್ಥಳಾಂತರಗೊಂಡು ಕರ್ನಾಟಕ ಸರಕಾರಿ ನೌಕರರ ಸಮುದಾಯ ಭವನದ ನೆಲಮಹಡಿಯಲ್ಲಿ ಮಾ.6ರಂದು ಶುಭಾರಂಭಗೊಂಡಿತು. ಹಿರಿಯ ವಕೀಲರು ಮತ್ತು ವಿರೂಪಾಕ್ಷ ಭಟ್ ಅವರ ವೃತ್ತಿ ಜೀವನದ ಗುರು ನ್ಯಾಯವಾದಿ ಮೋಹನ್ ಭಟ್ ಅವರು ಕಚೇರಿ ಉದ್ಘಾಟಿಸಿದರು.


ಪುತ್ತೂರಿಗೆ ರೆವೆನ್ಯೂ ಇಲಾಖೆಗೆ ಸ್ಪೆಷಲಿಸ್ಟ್
ಹಿರಿಯ ವಕೀಲರು ಮತ್ತು ವಿರೂಪಾಕ್ಷ ಭಟ್ ಅವರ ವೃತ್ತಿ ಜೀವನದ ಗುರು ನ್ಯಾಯವಾದಿ ಮೋಹನ್ ಭಟ್ ಅವರು ಮಾತನಾಡಿ ವಿರೂಪಾಕ್ಷ ಭಟ್ ಅವರನ್ನು 5 ವರ್ಷದ ಹಿಂದೆ ಪುತ್ತೂರಿಗೆ ವಕೀಲರಾಗಿ ಪರಿಚಯಿಸಿದ್ದೆ. 5 ವರ್ಷದ ನಂತರ ಪುತ್ತೂರಿಗೆ ಸ್ಪೆಷಲಿಸ್ಟ್ ಆಗಿ ಪರಿಚಯಿಸುತ್ತಿದ್ದೇನೆ. ಅದು ಹೇಗೆಂದರೆ ಈಗಿನ ಕಾಲದಲ್ಲಿ ಒಂದೇ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದುವುದು ಅಗತ್ಯ. ಈ ನಿಟ್ಟಿನಲ್ಲಿ ರೆವೆನ್ಯೂ ಇಲಾಖೆಯಲ್ಲಿ ಸಮಸ್ಯೆಯನ್ನು ಪರಿಹಾರ ಮಾಡುವ ಸ್ಪೆಷಾಲಿಸ್ಟ್ ಆಗಿ ವಿರೂಪಾಕ್ಷ ಭಟ್ ಮೂಡಿ ಬಂದಿದ್ದಾರೆ. ಇದೀಗ ಅವರ ಕಚೇರಿಯೂ ವಿಶಾಲವಾದಂತೆ ಕ್ಲೈಂಟ್ ಬೇಸ್ ವಿಶಾಲವಾಗಿದೆ ಹಾಗೂ ಮನಸ್ಸು ಕೂಡಾ ತುಂಬಾ ವಿಶಾಲವಾಗಿದೆ. ಅವರಲ್ಲಿ ಜ್ಞಾನ ಭಂಡಾರ ತುಂಬಿದೆ. ಅವರ ಜೊತೆಗೆ ಅವರ ಪತ್ನಿಯೂ ವಕೀಲರಾಗಿದ್ದಾರೆ. ಅವರ ಕಠಿಣ ಪರಿಶ್ರಮ ಅವರ ಸಾಧನೆಗೆ ಪೂರಕವಾಗಿದೆ. ಅವರು ಮಾಡುವ ಕೆಲಸದಲ್ಲಿ ನ್ಯಾಯ ಗೆಲ್ಲಲಿ ಎಂದರು.



ಯಶಸ್ವಿಪೂರ್ಣ ವಕೀಲರಾಗಲಿ
ದ್ವಾರಕ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಗೋಪಾಲಕೃಷ್ಣ ಭಟ್ ಅವರು ಮಾತನಾಡಿ ಪಕ್ಷಪಾತವಿಲ್ಲದೆ ನ್ಯಾಯ ಕೊಡಿಸುವ ಕೆಲಸ ಆದಾಗ ವೃತ್ತಿಗೆ ಗೌರವ ಸಿಗುತ್ತದೆ ಈ ನಿಟ್ಟಿನಲ್ಲಿ ವಿರೂಪಾಕ್ಷ ಭಟ್ ಅವರು ಉತ್ತಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ನಮ್ಮೆಲ್ಲಾ ರೀತಿಯ ರೆವೆನ್ಯೂ ಕೆಲಸದ ಪರಿಣತರು. ಮುಂದಿನ ದಿನ ಅವರು ಯಶಸ್ವಿ ಪೂರ್ಣ ವಕೀಲರಾಗಲಿ ಎಂದರು.
ಕೆಲಸದ ಬದ್ಧತೆ, ನಿಷ್ಟೆ, ಪರಿಶ್ರಮ, ವಿಶ್ವಾರ್ಹ ಯಶಸ್ವಿಗೆ ದಾರಿ
ವಕೀಲರ ಸಂಘಸ ಅಧ್ಯಕ್ಷ ಜಿ ಜಗನ್ನಾಥ ರೈ ಅವರು ಮಾತನಾಡಿ ಕೆಲಸದ ಬಗ್ಗೆ ಬದ್ಧತೆ, ನಿಷ್ಟೆ, ಪ್ರಾಮಾಣಿಕತೆ, ಪರಿಶ್ರಮ, ವಿಶ್ವಾರ್ಹತೆ ಇದ್ದರೆ ಉತ್ತಮ ವಕೀಲರಾಗಿ ಮೂಡಿ ಬರುತ್ತಾರೆ. ಇದಕ್ಕೆ ವಿರೂಪಾಕ್ಷ ಭಟ್ ಉದಾಹರಣೆಯಾಗಿದ್ದಾರೆ ಎಂದರು.
ಯಶಸ್ಸಿನ ಶಿಖರಕ್ಕೆ ಏರಲಿ
ನ್ಯಾಯವಾದಿ ಮಹೇಶ್ ಕಜೆ ಅವರು ಮಾತನಾಡಿ ವಿರೂಪಾಕ್ಷ ಭಟ್ ಹಿರಿಯ ವಕೀಲ ಮೋಹನ್ ಭಟ್ ಅವರಿಗೆ ಹೇಗೆ ಶಿಷ್ಯರಾಗಿದ್ದಾರೋ ಅದೇ ರೀತಿ ಧಾರ್ಮಿಕ ಜೀವನದಲ್ಲಿ ನನ್ನ ಶಿಷ್ಯ. ಯಾಕೆಂದರೆ ಶಬರಿಮಲೆಗೆ ಹೋಗುವ ಸಂದರ್ಭ ನಾನು ಅವರಿಗೆ ಗುರುಸ್ವಾಮಿ ಎಂದ ಅವರು ವಿರೂಪಾಕ್ಷ ಭಟ್ ಅವರು ಯಶಸ್ವಿನ ಶಿಖರಕ್ಕೆ ಏರಲಿ ಎಂದು ಹಾರೈಸಿದರು.
ಎಲ್ಲಾ ಅರ್ಹತೆಯನ್ನು ಪಡೆದ ವ್ಯಕ್ತಿ
ಮಾಜಿ ಶಾಸಕ ಸಂಜೀವ ಮಠಂದೂರು ಅವರು ಮಾತನಾಡಿ ಪರಿವರ್ತನೆ ಜಗದ ನಿಯಮ ಎಂಬAತೆ ಅದರ ಜೊತೆಗೆ ಸಾಗುವವನು ಯಶಸ್ಸನ್ನು ಕಾಣುತ್ತಾನೆ. ಈ ನಿಟ್ಟಿನಲ್ಲಿ ವಿರೂಪಾಕ್ಷ ಭಟ್ ಎಲ್ಲಾ ಅರ್ಹತೆಯನ್ನು ಪಡೆದ ವ್ಯಕ್ತಿ. ಇವರು ರಾಜಕೀಯವಾಗಿ ನನ್ನ ಶಿಷ್ಯ ಎಂದರು.
ಪೊಲಿಟಿಕಲ್ ಕ್ಯಾರಿಯರ್ ಕೂಡಾ ಬೆಳೆಯಲಿ
ಸಂಸದ ಕ್ಯಾ| ಬ್ರಜೇಶ್ ಚೌಟ ಅವರು ಮಾತನಾಡಿ ವಿರೂಪಾಕ್ಷ ಭಟ್ ಅವರ ಪ್ರೋಫೆಷನಲ್ ಕ್ಯಾರಿಯರ್ ಜೊತೆ ಪೊಲಿಟಿಕಲ್ ಕ್ಯಾರಿಯರ್ ಕೂಡ ಬೆಳೆಯಲಿ ಎಂದು ಹಾರೈಸಿದರು.
ರಾಜಕೀಯದ ಜೊತೆಗೆ ವೃತ್ತಿ ಜೀವನದಲ್ಲೂ ಬೆಳೆಯಲಿ
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಥಿ ಪರಿಷತ್ನಲ್ಲಿ ತೊಡಗಿಸಿಕೊಂಡು. ಬಿಜೆಪಿ ಯುವ ಮೋರ್ಚಾ, ಇದೀಗ ಜಲ್ಲಾ ಉಪಾಧ್ಯಕ್ಷರಾಗುವ ಮೂಲಕ ವೃತ್ತಿ ಜೀವನದಲ್ಲೂ ಒಳ್ಳೆಯ ರೀತಿಯ ಕೆಲಸ ಮಾಡುವ ವಿರೂಪಾಕ್ಷ ಭಟ್ ಅವರು ಉತ್ತರೋತ್ತರವಾಗಿ ಬೆಳೆಯಲಿ ಎಂದು ಹಾರೈಸಿದರು. ವಿರೂಪಾಕ್ಷ ಭಟ್ ಮಚ್ಚಿಮಲೆ ದಂಪತಿ ಪುತ್ರ ಭಾರ್ಗವ ರಾಮ ಭಟ್ ಪ್ರಾರ್ಥಿಸಿದರು. ಮಚ್ಚಿಮಲೆ ಲೀಗಲ್ ಸೊಲ್ಯೂಷನ್ಸ್ ಮುಖ್ಯವಕೀಲ ವಿರೂಪಾಕ್ಷ ಭಟ್ ಮಚ್ಚಿಮಲೆ ಸ್ವಾಗತಿಸಿದರು. ವಿರೂಪಾಕ್ಷ ಭಟ್ ಅವರ ಪತ್ನಿ ಸಹನಾ ಪಿ.ಎಸ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ವಿರೂಪಾಕ್ಷ ಭಟ್ ಅವರ ತಂದೆ ರಾಮ ಭಟ್ ಅವರು ಜೊತೆಗಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಚಿನ್ಮಯ್ ರೈ, ವಕೀಲರಾದ ನರಸಿಂಹ ಪ್ರಸಾದ್, ಉದಯಶಂಕರ್, ಬೆಟ್ಟ ಈಶ್ವರ ಭಟ್, ದೀಪಿಕಾ ಭಟ್ ಕಜೆ, ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ ನಟ್ಟೋಜ, ಮುರಳಿಕೃಷ್ಣ ಹಸಂತಡ್ಕ, ನಗರಸಭೆ ನಿಕಟಪೂರ್ವ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಗೌರಿ, ದೀಕ್ಷಾ ಪೈ, ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ನ ಅಧ್ಯಕ್ಷ ವೆಂಕಟ್ರಮಣ ಕಳುವಾಜೆ, ಸರಸ್ವತಿ ಸೊಸೈಟಿಯ ವಸಂತ್, ಪುತ್ತೂರು ಕೋ ಓಪರೇಟಿವ್ ಟೌನ್ ಬ್ಯಾಂಕ್ ನಿದೇರ್ಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ, ಮ್ಯಾನೇಜರ್ ಶೇಖರ್ ಶೆಟ್ಟಿ, ತಾ.ಪಂ ಮಾಜಿ ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್, ಬಿಜೆಪಿ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ನಗರ ಮಂಡಲದ ಅಧ್ಯಕ್ಷ ಶಿವಕುಮಾರ್ ಪಿ.ಬಿ, ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಬಿಜೆಪಿ ಜಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಮುಖ್ಯಗುರು ಸತೀಶ್ ಶೆಟ್ಟಿ, ಎವಿಜಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಉಮೇಶ್ ಮಳವೇಲು, ಯವರಾಜ್ ಪೆರಿಯತ್ತೋಡಿ, ಶಶಿಧರ್ ನಾಯಕ್, ನಾಗೇಂದ್ರ ಬಾಳಿಗ, ಉದ್ಯಮಿಗಳಾದ ಸಹಜ್ ರೈ ಬಳಜ್ಜ, ಸಂತೋಷ್ ರೈ ಕೈಕಾರ, ಉಜ್ವಲ್ ಪ್ರಭು, ಶ್ಯಾಮಸುದರ್ಶನ್, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.










