ಉಪ್ಪಿನಂಗಡಿ: ಉದ್ಯಮಿ ನಟೇಶ್ ಪೂಜಾರಿಗೆ ಪಿತೃ ವಿಯೋಗ

0

ಉಪ್ಪಿನಂಗಡಿ: ಬೆಂಗಳೂರಿನ ಯುವ ಉದ್ಯಮಿ, ವಿಜಯ – ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಉಪಾಧ್ಯಕ್ಷ ನಟೇಶ್ ಪೂಜಾರಿ ಅವರ ತಂದೆ ಹೊನ್ನಪ್ಪ ಪೂಜಾರಿಯವರು ಅಲ್ಪಕಾಲದ ಅಸೌಖ್ಯದಿಂದ ಇಲ್ಲಿನ ಪುಳಿತ್ತಡಿಯ ಗೌಂಡತ್ತಿಗೆಯ ಅವರ ಸ್ವಗೃಹದಲ್ಲಿ ಮಾ.6ರಂದು ನಿಧನರಾದರು.


ಇವರಿಗೆ 66 ವರ್ಷ ವಯಸ್ಸಾಗಿತ್ತು. ಮೃತರು ಗಾಂಧಿಪಾರ್ಕ್‌ನ ಸದರ್ನ್ ಇಂಡಿಯಾ ಬೀಡಿ ವರ್ಕ್ಸ್‌ನಲ್ಲಿ ಕೆಲಸದಲ್ಲಿದ್ದು, ನಿವೃತ್ತಿಯಾಗಿದ್ದರು. ಸ್ಥಳೀಯವಾಗಿ ‘ಒನ್ನಣ್ಣ’ ಎಂದೇ ಚಿರಪರಿಚಿತರಾಗಿದ್ದರು. ಮೃತರು ಪತ್ನಿ ಲೀಲಾವತಿ, ಪುತ್ರ ನಟೇಶ್ ಪೂಜಾರಿ ಹಾಗೂ ಪುತ್ರಿಯರಾದ ಜ್ಯೋತಿ, ವಿಮಲಾ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತಿಮ ಕ್ರಿಯೆಗಳನ್ನು ನಡೆಸಿ, ಗೌಂಡತ್ತಿಗೆಯ ಅವರ ಜಾಗದಲ್ಲಿಯೇ ಮೃತರ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

LEAVE A REPLY

Please enter your comment!
Please enter your name here