ವಿಧಾತ್ರಿ ಮಹಿಳಾ ಮಂಡಳಿ ಕೆಯ್ಯೂರು ಇದರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆ

0

ಕೆಯ್ಯೂರು: ಅರಿವು ಕೇಂದ್ರ ಕೆಯ್ಯೂರು ಗ್ರಾಮ ಪಂಚಾಯತ್ (ಗ್ರಂಥಾಲಯ) ಮತ್ತು ವಿಧಾತ್ರಿ ಮಹಿಳಾ ಮಂಡಳಿ ಕೆಯ್ಯೂರು ಇದರ ಸಹಯೋಗದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅರಿವು ಕೇಂದ್ರ ಕೆಯ್ಯೂರಿನಲ್ಲಿ ಮಾ.8ರಂದು ನಡೆಸಲಾಯಿತು.


ಬೆಳಗ್ಗೆ ಸರಿಯಾಗಿ 9:30ಕ್ಕೆ ಮಕ್ಕಳಿಗೆ ಚಿತ್ರ ಕಲಾ ಸ್ಪರ್ಧೆಯನ್ನು ನಡೆಸಲಾಯಿತು. ಮಂಡಳಿಯ ಸದಸ್ಯರು ಮತ್ತು ಪಾಲ್ಗೊಂಡ ಮಹಿಳಾ ಮಣಿಯರು ಮತ್ತು ಮಕ್ಕಳು ಒಟ್ಟು ಸೇರಿ ಹಾಡು,ಮುಂತಾದ ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಕೂಡಾ ಭಾಗವಹಿಸಿದ್ದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಜಯಂತಿ ಎಸ್ ಭಂಡಾರಿ, ಸುಭಾಷಿನಿ ಸಣಂಗಳ, ಕೆಯ್ಯೂರು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಕು.ಅನುಷಾ ಎಂ ಕೆ ಪಿ ಎಸ್ ಕೆಯ್ಯೂರು ಶಾಲಾ ಶಿಕ್ಷಕಿಯರಾದ ಸೌಮ್ಯ ರೈ, ಮಾಲೆತ್ತೋಡಿ ಶಾಲಾ ಶಿಕ್ಷಕಿಯಾದ ಅರ್ಚನಾ ರೈ, ಪಿ ಎಸ್ ಕೆಯ್ಯೂರು ಶಾಲಾ ಶಿಕ್ಷಕಿಯಾದ ಜ್ಯೋತಿ, ಕೆ ಪಿ ಎಸ್ ಕುಂಬ್ರ ಶಾಲಾ ಶಿಕ್ಷಕಿಯಾದ ಹರ್ಷಿತಾ, ಹಾಗೂ ಅರಿವು ಕೇಂದ್ರದ ಸಲಹಾ ಸಮಿತಿ ಸದಸ್ಯೆ ಸಂಗೀತ ಕೂಡ್ಲು ಮಹಿಳಾ ಮಂಡಳಿ ಸದಸ್ಯರಾದ ರೂಪ ರೈ, ಮಮತ ರೈ, ಕುಸುಮ ಪ್ರಮಿತ್ ರಾಜ್, ಮೋಹಿನಿ ರೈ ಮೊದಲಾದವರು ಭಾಗವಹಿಸಿದ್ದರು. ಅರ್ಚನಾ ರೈ ಸ್ವಾಗತಿಸಿ, ಹರ್ಷಿತಾರವರು ಕ್ರಮವಾಗಿ ವಂದನಾರ್ಪಣ ನುಡಿಯಲ್ಲಿ ಮಹಿಳಾ ದಿನದ ಮಹತ್ವನ್ನು ವಿವರಿಸಿದರು. ವಿಧಾತ್ರಿ ಮಹಿಳಾ ಮಂಡಳಿಯ ವತಿಯಿಂದ ಮಕ್ಕಳಿಗೆ ಬಹುಮಾನ ಮತ್ತು ಉಪಹಾರ ವ್ಯವಸ್ಥೆಯನ್ನು ಏರ್ಪಡಿಸಲಾಯಿತು.


LEAVE A REPLY

Please enter your comment!
Please enter your name here